News

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

21 June, 2022 10:39 AM IST By: Kalmesh T
Summer Solstice 2022...

ಪ್ರತಿ ದಿನವೂ ಹಗಲುಗಳಿರುತ್ತವೆ. ಆದರೆ, ಇವತ್ತಿನದು ಅಂತಹದೇನು ವಿಶೇಷತೆ ಅಂತೀರಾ? ಹೌದು ಇವತ್ತು ವಿಶೇಷ ದಿನವೇ. ಇಂದಿನ ಹಗಲು ಈ ವರ್ಷದಲ್ಲೆ ಅತಿ ದೊಡ್ಡ ಹಗಲು ಇರುವ ದಿನವಾಗಿರಲಿದೆ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ಜೂನ್ 21 ಕರ್ಕಾಟಕ ಸಂಕ್ರಾಂತಿಯ ದಿನವಾಗಿದೆ. ಸಮರ್ ಸಾಲ್ಸ್ಟೈಸ್ (Summer Solstice) ಎಂದು ಕರೆಯುವ ಇದು ಈ ವರ್ಷದ ಅತೀ ಹೆಚ್ಚು ಸಮಯ ಹಗಲು ಇರುವ ದಿನವಾಗಿದೆ.

ಈ ದಿನದಂದು ಅತಿ ಹೆಚ್ಚು ಸಮಯ ಹಗಲು ಇರುತ್ತದೆ. ಅತಿ ಕಡಿಮೆ ಸಮಯ ರಾತ್ರಿ ಇರುತ್ತದೆ. ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಕೆಲ ದೇಶಗಳಲ್ಲಿ ಮಂಗಳವಾರ ಸುದೀರ್ಘ ಹಗಲನ್ನು ಕಾಣಬಹುದು.

ಈ ದಿನವನ್ನು ಅಲ್ಲಿ “ಮಿಡ್ ಸಮ್ಮರ್ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಸುದೀರ್ಘ ಹಗಲು ಭಾರತದಲ್ಲಿ ಕಾಣಸಿಗುವುದಿಲ್ಲ.

ಜೂನ್‌ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?

ಸ್ವೀಡನ್, ನಾರ್ವೆ, ಫಿನ್ಲೆಂಡ್, ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ ಜೂನ್ 21 ರ ಸಮರ್ ಸಾಲ್ಸ್ಟೈಸ್ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆ.

ಕೆಲ ದೇಶಗಳಲ್ಲಿ ಜೂನ್ 21ರಂದು ಬೆಳಗ್ಗೆ 5:14 ಕ್ಕೆ ಸೂರ್ಯೋದಯ ಆಗುತ್ತದೆ. ಸೂರ್ಯಾಸ್ತದ ಸಮಯವೂ ವಿಳಂಬವಾಗಿರುತ್ತದೆ. ಹೀಗಾಗಿ ಈ ದಿನದಂದು ಹಗಲಿನ ಅವಧಿ ಅತಿಹೆಚ್ಚು ಇರುತ್ತದೆ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಅತಿ ದೊಡ್ಡ ಹಗಲು ಯಾಕೆ?

ಕರ್ಕಾಟಕ ಸಂಕ್ರಾಂತಿಯ ದಿನದಂದು ಸೂರ್ಯನೆಡೆಗೆ ಭೂಮಿ ಅತಿ ಹೆಚ್ಚು ವಾಲಿರುತ್ತದೆ. ಆಗ ಹಗಲಿನ ಅವಧಿ ಅತಿ ಹೆಚ್ಚು ಇರುತ್ತದೆ.  ಸೂರ್ಯನತ್ತ ಭೂಮಿ ಅತಿ ಕಡಿಮೆ ವಾಲಿದ್ದರೆ ಆಗ ಹಗಲಿನ ಅವಧಿ ಅತಿ ಕಡಿಮೆ ಇರುತ್ತದೆ.

ಇದು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ.  ಈ ಎರಡು ವಿದ್ಯಮಾನಗಳು ಪ್ರತೀ ವರ್ಷವೂ ಸಹಜವಾಗಿ ಘಟಿಸುವ ನೈಸರ್ಗಿಕ ಕ್ರಿಯೆ.