ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ, ರಾಜ್ಯದ ಕಬ್ಬು ಬೆಳೆಗಾರ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ
ಕಬ್ಬು ಬೆಳೆಗೆ ಎಫ್‌ಆರ್‌ಪಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಕಬ್ಬು ಬೆಳೆದ ರೈತರು ವಿಭಿನ್ನ ಮಾದರಿಯ ಪ್ರತಿಭಟನೆಯನ್ನು ನಡೆಸಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದ ರೈತರ ಮನವೊಲಿಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಅನುವು ಮಾಡಿಕೊಡಲಾಗಿತ್ತು.
ಕಬ್ಬಿನ ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಕಬ್ಬು ಬೆಳೆಗಾರ ರೈತರು ಮುಖ್ಯಮಂತ್ರಿ ಮನೆ ಮುಂದೆ ನಡೆಸುತ್ತಿರುವ ನಿರಂತರ ಆಹೋ ರಾತ್ರಿ ಧರಣಿಯ 2ನೇ ದಿನ ಪೂರಕೆ ಚಳವಳಿ ಮೂಲಕ ಮುಂದುವರಿದಿದೆ.
ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ತಿರ್ಮಾನ ಕೈಗೂಳುವ ಸರ್ಕಾರದ ಭರವಸೆ ಹುಸಿಯಾದ ಕಾರಣ ಸಕ್ಕರೆ ಸಚಿವರು ನುಡಿದಂತೆ ನಡೆಯದೆ ಇರುವುದನ್ನು ಖಂಡಿಸಿ, ರೈತರಿಗೆ ನ್ಯಾಯ ಸಿಗುವವರೆಗೆ ಚಳವಳಿ ನಡೆಸುವುದಾಗಿ ರೈತರು ತೀರ್ಮಾನಿಸಿದ್ದರು,
ಈ ಮೂಲಕ, ಸರ್ಕಾರದ ವರ್ತನೆಯನ್ನು ಭೆತ್ತಲು ಮಾಡಲು ಈ ರೀತಿ ಚಳುವಳಿ ನಡೆಸಲಾಗುತ್ತಿದೆ, ಕಬ್ಬಿನ ಉತ್ಪಾದನೆ ವೆಚ್ಚ ಶೇಕಡ 20ರಷ್ಟು ಏರಿಕೆಯಾಗಿದೆ.
ಆದರೆ ಕೇಂದ್ರ ಸರ್ಕಾರ ಎಫ್ ಆರ್ ಪಿ ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚಿದೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ರೈತರನ್ನು ಸುಲಿಗೆ ಮಾಡುತ್ತಿದ್ದೆ.
ಕಬ್ಬು ಕಟಾವು ಮಾಡಿ 16 ತಿಂಗಳಾಗುತ್ತಿದೆ ಸಾಗಾಣಿಕೆ ವೆಚ್ಚ ಎಲ್ಲ ದೂರಕ್ಕೂ ಒಂದೆ ದರ ನಿಗದಿ ಮಾಡಿ ರೈತರನ್ನ ವಂಚಿಸುತ್ತಿದ್ದಾರೆ ಇದರಿಂದ ರೈತರಿಗೆ ನೂರಾರು ಕೋಟಿ ರೂ ರೈತರಿಗೆ ಮೋಸವಾಗುತ್ತಿದೆ.
ಕಬ್ಬು ಪೂರೈಕೆ ಮಾಡಿದ ರೈತನಿಗೆ14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದ್ದರು ಯಾರೂ ಪಾಲನೆ ಮಾಡುತ್ತಿಲ್ಲ.
ಯಾವ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ರೈತರು ದೂರು ನೀಡಿದರೆ ದೂರುಗಳು ಕಸದ ಬುಟ್ಟಿ ಸೇರುತಿದೆ
ಬೆಳಗಾವಿ ಜಿಲ್ಲೆಯಲ್ಲಿ 189 ರೈತರು ಕಬ್ಬಿನ ಹಣ ಬಂದಿಲ್ಲ ಎಂದು ದೂರು ನೀಡಿ ಈ ಬಗ್ಗೆ ತನಿಖೆ ನಡೆದು ಸಾಬಿತಾಗಿದರು ಯಾವುದೇ ಕ್ರಮ ಜಾರಿಯಾಗಿಲ್ಲ ಎಂದು ದೂರಿದರು.
Central Budget ಗೋಧಿ ರಫ್ತು ನಿರ್ಬಂಧ ಸಡಿಲಿಸಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ
ಕಬ್ಬು ಕಟಾವು 16-18 ತಿಂಗಳು ವಿಳಂಬವಾಗುತ್ತಿದೆ ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ
ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು.
ಸರ್ಕಾರ ಪದೇ ಪದೇ ಕಾರ್ಖಾನೆ ಮಾಲೀಕರ ಸಭೆ ಕರೆದು ತ್ಯಾಪೆ ಹಾಕುವುದು ಏಕೆ, ಕಾನುನಾತ್ಮಕ ಅಧಿಕಾರಿ ಇಲ್ಲವೇ
ಹಾಗಾದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಹೆಚ್ಚುವರಿ ಬೆಲೆ ನಿಗದಿ ಮಾಡಿದ್ದಾರೆ, ಸರ್ಕಾರ ತನ್ನ
ಜವಾಬ್ದಾರಿಯಿಂದ ಜಾರಿಕೊಳ್ಳಬಾರದು, ಯಾವುದೇ ಕಾರಣಕ್ಕೂ ಚಳುವಳಿ ಕೈ ಬಿಡುವುದಿಲ್ಲ, ಹುಸಿಭರವಸೆಗಳು ಕೊಡಬಾರದು ಎಂದರು.
ಡಿಸೆಂಬರ್ ಒಳಗೆ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಿ: ಪ್ರಭು ಚವ್ಹಾಣ
ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು.
5 ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ಚಳವಳಿ ನಡೆಸಿದಾಗ, ಮುಖ್ಯಸ್ಥರು ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆಯುವ ಭರವಸೆ ನೀಡಿ ಸಭೆ ಕರೆದು ಸಮಸ್ಯೆ ಬಗೆಹರಿಸದ ಇದ್ದ ಕಾರಣ ಮೈಸೂರು ಜಿಲ್ಲೆಯಲ್ಲಿ ರೈತನೂಬ್ಬ ಸಿಬಿಲ್ ಸ್ಕೋರ್ ಇಲ್ಲದ ಕಾರಣ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಸಿಗುತ್ತಿಲ್ಲ ಎಂದು ವಿಷ ಸೇವಿಸಿ ಇಂದು ಸಾವನಪ್ಪಿದ್ದಾನೆ ಈ ರೀತಿ ಸರ್ಕಾರಗಳ ನಿರ್ಲಕ್ಷ್ಯವೆ ಕಾರಣವಾಗಿದೆ ಎಂದರು.
ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ಹೋರಾಟ ನಿಲ್ಲದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ
ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಚಳವಳಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ್ ಬುಬಾಟಿ, ಧಾರವಾಡ ಜಿಲ್ಲಾಧ್ಯಕ್ಷ ನಿಜಗುಣ ಕೆಲಗೇರಿ ,ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ, ಉಳುವಪ್ಪ ಬಳಗೇರಿ, ನಿಂಗನಗೌಡರು, ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ ಕೂಟಗಿ, ಎಸ್.ಡಿ ಸಿದ್ನಾಳ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ಜಿ ವಿ ಲಕ್ಷ್ಮಿದೇವಿ, ಮಂಜುಳಾ ಪಾಟೀಲ್, ಪಿ ಸೂಮಶೇಖರ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ,ಹಾಡ್ಯರವಿ ಸೇರಿದಂತೆ ನೂರಾರು ರೈತರು ಹಾಜರಿದ್ದರು.