ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯದ ಪರಿಸ್ಥಿತಿ ತೀರ ಹದಗೆಟ್ಟಿದೆ. ಕಾರಣ ರೆಡ್ ಝೋನ್ ತಲುಪುವ ಸಾಧ್ಯತೆ ಇದೆ. ಈಗಾಗಲೇ ಪ್ರಾಥಮಿಕ ಶಾಲೆ ಬಂದ್ ಮಾಡಲಾಗಿದೆ.
ಇದನ್ನೂ ಓದಿರಿ: ಜನಸಾಮಾನ್ಯರಿಗೆ ಮತ್ತೊಂದು ಹೊರೆ; ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ, ಬೆಲೆ ಹೆಚ್ಚಳ ಸಾಧ್ಯತೆ-CRISIL report!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ವಾಯುಮಾಲಿನ್ಯ ಮಿತಿಮೀರಿದೆ. ಇದುವರೆಗೂ ರಾತ್ರಿಯ ವೇಳೆ ಕಡಿಮೆ ಇರುತ್ತಿದ್ದ ವಾಯು ಮಾಲಿನ್ಯ ಈಗ ಬದಲಾಗಿದೆ.
ರಾತ್ರಿ ಕೂಡ ಮಾಲಿನ್ಯದ ಕಾರಣದಿಂದಾಗಿ ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ರೆಡ್ ಜೋನ್‌ಗೆ (Red Zone) ಏರಬಹುದು ಎನ್ನಲಾಗಿದೆ.
ದೆಹಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಈ ಮೂಲಕ ದೆಹಲಿಯ ವಾಯುಮಾಲಿನ್ಯ ಪ್ರಮಾಣವು ಅಪಾಯಕಾರಿ ಹಂತಕ್ಕೆ ತಲುಪಿದೆ.
ನೆರೆಯ ರಾಜ್ಯಗಳಲ್ಲಿ ಕೃಷಿ ಬೆಳೆಗಳ ತಾಜ್ಯವನ್ನು ಸುಡಲಾಗುತ್ತಿದೆ. ಹೊಗೆ ಉಗುಳುವ ವಾಹನಗಳಿಂದ ಗಾಳಿಯು ಮಲಿನಗೊಂಡಿದೆ.
ಇದರಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ತೀವ್ರ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮಳೆ ಸಾಧ್ಯತೆ; ನವೆಂಬರ್ 6ರಿಂದ ಚಳಿ ಆರಂಭದ ಮೂನ್ಸೂಚನೆ!
ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟವು ಶೋಚನೀಯ ಸ್ಥಿತಿಯಲ್ಲಿದೆ. ಭಾನುವಾರ ಬೆಳಿಗ್ಗೆ ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವಿಭಾಗದಲ್ಲಿ ಉಳಿದಿದೆ.
ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 350 ಕ್ಕೆ ಇತ್ತು. ದೆಹಲಿ ವಿಶ್ವವಿದ್ಯಾನಿಲಯ ಮತ್ತು ಪುಸಾ ಪ್ರದೇಶದ ಎಕ್ಯೂಐ ಕ್ರಮವಾಗಿ 372 ಮತ್ತು 343 ರಷ್ಟಿದೆ.
ಅದೇ ಸಮಯದಲ್ಲಿ, ಶನಿವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಕುರಿತು ಏರ್ ಕ್ವಾಲಿಟಿ ಮ್ಯಾನೇಜ್ ಮೆಂಟ್ ಕಮಿಷನ್ (ಸಿಎಕ್ಯೂಎಂ) ಸಭೆ ನಡೆಸಲಾಯಿತು. ಇದರಲ್ಲಿ ಮೂರನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಗ್ರಾಪ್) ಅನುಷ್ಠಾನಗೊಳಿಸಲಾಯಿತು.
2022-23 ಹಿಂಗಾರು ಋತುವಿನ ರಸಗೊಬ್ಬರಗಳಿಗೆ ₹51,875 ಕೋಟಿ ಸಬ್ಸಿಡಿಗೆ ಕ್ಯಾಬಿನೆಟ್ ಅನುಮೋದನೆ!
ಮನೆಯಿಂದಲೇ ಕೆಲಸ ಮಾಡಲು ಸಚಿವ ಗೋಪಾಲ್ ರೈ ಸೂಚನೆ!
ರಾಜಧಾನಿಯಲ್ಲಿ ವಾಯು ಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುವ ವಾಹನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮನೆಯಿಂದಲೇ ಕೆಲಸ ಮಾಡಲು ಮತ್ತು ಹಂಚಿಕೆಯ ಸಾರಿಗೆಯನ್ನು ಬಳಸುವಂತೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಬುಧವಾರ ಹೇಳಿದರು.
ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಹುಲ್ಲು ಸುಡುವಿಕೆಗೆ ಪಂಜಾಬ್‌ನಲ್ಲಿನ ರೈತರನ್ನು ಬಿಜೆಪಿ ಗುರಿಯಾಗಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಆದಾಗ್ಯೂ, ಕೆಲವು ವರ್ಗಗಳಿಗೆ ಷರತ್ತುಗಳೊಂದಿಗೆ ವಿನಾಯಿತಿ ನೀಡಲಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಅಕ್ಟೋಬರ್ 31 ಮತ್ತು ನವೆಂಬರ್ 1 ರ ನಡುವೆ ಮಾಲಿನ್ಯದ ಮಟ್ಟವು ರೆಡ್ ಜೋನ್ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅದು ಖಚಿತವಾಗಿದೆ.
ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್ ಇಳುವರಿ!
ನೆರೆಯ ಹಾಗೂ ಪಕ್ಕದ ಪಂಜಾಬ್ ರಾಜ್ಯದಲ್ಲಿ ಗೋಧಿ ಬೆಳೆಯ ಅವಶೇಷಗಳನ್ನು ಈ ಸಮಯದಲ್ಲಿ ಸುಡಲಾಗುತ್ತದೆ. ಆ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ (NCR) ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆ.
ಚಿಕ್ಕಮಕ್ಕಳು ಮತ್ತು ವೃದ್ಧರು ಬೆಳಗ್ಗೆ ಹೊರಗೆ ಹೋಗದಂತೆ, ಓಡಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರೊಂದಿಗೆ, ಉಸಿರಾಟದ ರೋಗಿಗಳಿಗೆ ವಿಶೇಷವಾಗಿ ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ.
ಮಂಡಳಿಯ ಪ್ರಕಾರ, ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆದ ಎರಡು ದಿನಗಳಲ್ಲಿ ಸ್ಟಬಲ್ ಬರ್ನಿಂಗ್ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ.
ಇದು ಮಾಲಿನ್ಯದ ಮಟ್ಟವನ್ನು ಹೆಚ್ಚಿಸುತ್ತಿದೆ ಅಲ್ಲದೇ ಸ್ಥಳೀಯ ಕಾರಣಗಳಿಂದ ದೆಹಲಿಯಲ್ಲಿ ಮಾಲಿನ್ಯವೂ ಹೆಚ್ಚಾಗುತ್ತಿದೆ. ಮಂಡಳಿಯ ಪ್ರಕಾರ, ಶನಿವಾರ ಸಂಜೆ 7 ಗಂಟೆಗೆ ಆನಂದ್ ವಿಹಾರದಲ್ಲಿ ಮಾಲಿನ್ಯದ ಮಟ್ಟ 457 ದಾಖಲಾಗಿದೆ.
ಅಕಾಲಿಕ ಮಳೆಯಿಂದ ಖಾರಿಫ್ ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ: ಎಸ್‌ಬಿಐ ವರದಿ!
ಮತ್ತೊಂದೆಡೆ, ಅಶೋಕ್ ವಿಹಾರ್‌ನಲ್ಲಿ 419, ಜಹಾಂಗೀರ್‌ಪುರಿಯಲ್ಲಿ 426, ಐಟಿಒದಲ್ಲಿ 400, ಬವಾನಾದಲ್ಲಿ 406, ರೋಹಿಣಿಯಲ್ಲಿ 410, ವಜೀರ್‌ಪುರಿಯಲ್ಲಿ 431, ಪತ್ಪರ್‌ಗಂಜ್‌ನಲ್ಲಿ 408. ಇವುಗಳಲ್ಲದೆ, ದೆಹಲಿಯ ಇತರ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಹೆಚ್ಚು ದಾಖಲಾಗಿದೆ. ಹಗಲಿನಲ್ಲಿ ಬಿಸಿಲಿನ ಝಳದಿಂದಾಗಿ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳ ದಾಖಲಾಗಿದೆ. ಆದರೆ, ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣ ದಾಖಲಾಗಿದೆ.
ಮೂರನೇ ಹಂತದ ಅನುಷ್ಠಾನದ ಕೆಲವು ಬದಲಾವಣೆಗಳು: ಗ್ರಾಪ್ ಪ್ರಕಾರ, ರಸ್ತೆಗಳ ಶುಚಿಗೊಳಿಸುವಿಕೆಯನ್ನು ಯಂತ್ರದಿಂದ ಮಾತ್ರ ಮಾಡಲಾಗುತ್ತದೆ, ಧೂಳಿನ ಪ್ರದೇಶಗಳು, ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ನಿಯಮಿತವಾಗಿ ನೀರು ಚಿಮುಕಿಸಲಾಗುತ್ತದೆ.
ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ, ನಾನ್-ಪೀಕ್ ಅವರ್‌ಗಳಲ್ಲಿ ದರಗಳನ್ನು ಪರಿಷ್ಕರಿಸಲು ಸೂಚಿಸಲಾಗಿದೆ.
ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ. ಆದಾಗ್ಯೂ, ಇದು ರೈಲ್ವೆ ಸೇವೆಗಳು, ರೈಲು ನಿಲ್ದಾಣಗಳು, ಮೆಟ್ರೋ ರೈಲು ಸೇವೆಗಳು, ವಿಮಾನ ನಿಲ್ದಾಣಗಳು ಮತ್ತು ಅಂತರ-ರಾಜ್ಯ ಬಸ್ ಟರ್ಮಿನಲ್‌ಗಳು, ರಾಷ್ಟ್ರೀಯ ಭದ್ರತೆ, ರಕ್ಷಣಾ ಚಟುವಟಿಕೆಗಳು, ರಾಷ್ಟ್ರೀಯ ಯೋಜನೆಗಳು, ಆಸ್ಪತ್ರೆಗಳು, ಆರೋಗ್ಯ ರಕ್ಷಣಾ ಸೌಲಭ್ಯಗಳು, ಹೆದ್ದಾರಿಗಳು, ರಸ್ತೆಗಳು, ಫ್ಲೈಓವರ್‌ಗಳು, ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್‌ಲೈನ್‌ಗಳನ್ನು ಒಳಗೊಂಡಿದೆ.
ಸರ್ಕಾರಿ ಯೋಜನೆಗಳು, ಒಳಚರಂಡಿ ಸಂಸ್ಕರಣಾ ಘಟಕಗಳು, ನೀರು ಸರಬರಾಜು ಯೋಜನೆಗಳು ಮತ್ತು ಇತರ ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಧೂಳಿನ ಮಾಲಿನ್ಯದ ಮಟ್ಟವನ್ನು ತಡೆಯಲು ಅವರು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಲಾಗಿದೆ.