News

ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!

20 January, 2023 12:23 PM IST By: Kalmesh T
SSC Exam In Kannada: From now on 11,400 central government posts exam can be written in Kannada!

ಕನ್ನಡ ಮನಸ್ಸುಗಳೆಲ್ಲ ಖುಷಿಪಡುವ ವಿಷಯ. ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ನಡೆಸುವ ಪರೀಕ್ಷೆಗಳನ್ನು ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು. ಇದು ಕನ್ನಡಪರ ಹೋರಾಟಗಾರರ ಪ್ರಯತ್ನಕ್ಕೆ ಸಂದ ಫಲ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ

South Western Railway ರೈಲ್ವೇ ಇಲಾಖೆಯಿಂದ ಸಿಹಿಸುದ್ದಿ: ಇನ್ಮುಂದೆ ಕನ್ನಡದಲ್ಲೆ ದೊರೆಯಲಿದೆ ರೈಲ್ವೆ ಸೇವೆ!

ಮಗುವೊಂದರ ಅಳುವಿನಲ್ಲೂ ಮಾತೃಭಾಷೆಯೇ ಇರುತ್ತದೆ. ಇದನ್ನು ತಾಯಿಯಾದವಳು ಮಾತ್ರ ಅರಿಯಬಲ್ಲಳು. ತಾಯಿ ಮತ್ತು ತಾಯಿ ನುಡಿ ಪ್ರತಿಯೊಬ್ಬರ ಜೀವನದಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತವೆ. ಬೇರೆಲ್ಲ ಭಾಷೆಗಳಿಗಿಂತಲೂ ನಮ್ಮ ಮಾತೃಭಾಷೆಯಲ್ಲಿ ಮಾತನಾಡುವಾಗ ನಾವು ಹೆಚ್ಚು ನಿಖರವಾಗಿ ಮಾತನಾಡುತ್ತೇವೆ. ಭಾವನೆಗಳನ್ನು ಹಂಚಿಕೊಳ್ಳುತ್ತೇವೆ. ಪರಸ್ಪರ ಒಬ್ಬರಿಗೊಬ್ಬರು ಸ್ಪಂದಿಸುತ್ತೇವೆ.

ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ,  ಕೇಂದ್ರದ ಪರೀಕ್ಷೆಗಳನ್ನ ನಡೆಸಬೇಕೆಂಬ ಕನ್ನಡ ಪರ ಮನಸ್ಸುಗಳ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್‌, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನ ನಡೆಸಲು ಸಿಬ್ಬಂದಿ ನೇಮಕಾತಿ ಆಯೋಗ ಮುಂದಾಗಿದೆ.

ಹಿಂದಿ ಅಥವಾ ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ಕೇಂದ್ರದ ಪರೀಕ್ಷೆಗಳನ್ನು ಬರೆಯುವ ಕಾರಣದಿಂದ ಸಾಕಷ್ಟು ಯುವಜನತೆಗೆ ತೊಂದರೆಯಾಗಿತ್ತು. ಬಹುತೇಕ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಈ ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕೆನ್ನುವ ಕಾರಣದಿಂದಲೇ ಇಂತಹ ಪರೀಕ್ಷೆಗಳಿಂದ ದೂರ ಉಳಿದಿದ್ದರೂ.

ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಮಾರ್ಚ್‌ 2 ಕೊನೆ ದಿನ?

ಮತ್ತೂ ನಿರಂತರ ಅಭ್ಯಾಸದ ನಂತರವೂ ಭಾಷೆ ಸಮಸ್ಯೆಯಿಂದ ತಮ್ಮ ಗುರಿಗಳನ್ನು ಮುಟ್ಟುವಲ್ಲಿ ವಿಫಲರಾಗುತ್ತಿದ್ದರು. ಈ ವ್ಯವಸ್ಥೆಯ ವಿರುದ್ಧ ಸಾಕಷ್ಟು ಬಾರಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸಬುಕ್‌, ಟ್ವೀಟರ್‌ಗಳಲ್ಲೂ ಈ ಕುರಿತು ಸಾಕಷ್ಟು ಅಭಿಯಾನಗಳು ನಡೆದಿದ್ದವು.

ಇದೀಗ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್‌ ಸ್ಟಾಫ್‌ ಹಾಗೂ ಹವಾಲ್ದಾರ್‌ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

10 ಸಾವಿರದ 880 MTS ಹುದ್ದೆಗಳಿಗೆ ಹಾಗೂ 529 CBIC ಮತ್ತು CBN  ಹವಾಲ್ದಾರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜನವರಿ 18ರಿಂದ ಫೆಬ್ರುವರಿ 17ರವರೆಗೆ ಪರೀಕ್ಷೆಗೆ ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಜ.24ರಂದು ಉದ್ಘಾಟನೆಗೊಳ್ಳಲಿದೆ ದೇಶದ ಮೊದಲ ಎಫ್‌ಪಿಒ ಕಾಲ್‌ ಸೆಂಟರ್‌! ಏನಿದರ ವಿಶೇಷತೆ ಗೊತ್ತೆ? 

ಈ ಹುದ್ದೆಗಳಿಗೆ ಏಪ್ರಿಲ್‌ ತಿಂಗಳಲ್ಲಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್‌, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಕನ್ನಡ ಸೇರಿದಂತೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಪ್ರಾದೇಶಿಕ ಭಾಷೆಗಳಾಗಿವೆ.

ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿರುವುದಕ್ಕೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಸಾಕಷ್ಟು ಜನ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡದಲ್ಲಿ ಪರೀಕ್ಷೆ ಬರೆಯುವ ಈ ಅವಕಾಶ ಬಳಸಿಕೊಂಡು ಹೆಚ್ಚೆಚ್ಚು ಕನ್ನಡಿಗರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಹೊಂದಲಿ ಎಂದು ಹಾರೈಸೋಣ.