News

ಉದ್ಯೋಗ ವಂಚಿತರಿಗೆ ಖುದ್ ಕಮಾವೋ ಘರ್ ಚಲಾವೊ ಉಚಿತ ಇ-ರಿಕ್ಷಾ ಗಿಫ್ಟ್ ನೀಡುವ ಕಾರ್ಯಕ್ರಮಕ್ಕೆ ನಟ ಸೋನು ಸೂದ್ ಚಾಲನೆ

15 December, 2020 9:46 AM IST By:

ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ಸೋನ್ ಸೂದ್ ತಮ್ಮ ಸ್ವಂತ ಹಣದಲ್ಲಿ  ಬಸ್ ಗಳ ವ್ಯವಸ್ಥೆ ಮಾಡಿದ್ದರು.

ಉದ್ಯೋಗ ಕಳೆದುಕೊಂಡವರಿಗೆ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇರುವುದಾಗಿ ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಅಲ್ಲದೆ ಓದಲು ಸರಿಯಾದ ನೆಟ್ವರ್ಕ್ ಇಲ್ಲದಕ್ಕಾಗಿ ಒಬ್ಬ ವಿದ್ಯಾರ್ಥಿಗೆ ಅವರು ಮಾಡಿದಂತಹ ಸಹಾಯವನ್ನು ಕೂಡ ನಾವು ಕಂಡಿದ್ದೇವೆ, ಈಗ ಸೋನು ಸೂದ್ ಅವರು ಉಚಿತವಾಗಿ ಎಲೆಕ್ಟ್ರಾನಿಕ್ ರಿಕ್ಷಾವನ್ನು ನೀಡಲು ಮುಂದಾಗಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 25 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

 ಖುದ್ ಕಮಾವೋ ಘರ್ ಚಲಾವೊ ಯೋಜನೆಗೆ ಶ್ಯಾಮ್ ಸ್ಟೀಲ್ ಇಂಡಿಯಾ ಸೋನು ಸೂದ್ ಅವರೊಂದಿಗೆ ಕೈಜೋಡಿಸಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಾಗಿರಬೇಕು, ಅವರ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರಬೇಕು ಹಾಗೂ ಆದಾಯ ಪ್ರಮಾಣಪತ್ರ ಹಾಗೂ ಚಾಲನಾ ಪರವಾನಗಿಯನ್ನು ಹೊಂದಿರಬೇಕು.  ಅರ್ಜಿಯನ್ನು ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಒತ್ತಿ ಅರ್ಜಿ ಸಲ್ಲಿಸಬಹುದು.

https://retail.shyamsteel.in/ShyamHomewebsite/retailindianew/landingpage-english.php

 ಹಾಗೂ ಹೆಚ್ಚಿನ ಮಾಹಿತಿಗಾಗಿ ಇಮೇಲ್ ID: sonusood.shyamsteelindia@gmail.com ಗೆ ಸಂದೇಶ ಸಲ್ಲಿಸಬಹುದು.

ಲೇಖನ: ಚಿನ್ನಪ್ಪ ಎಸ್. ಅಂಗಡಿ