News

Beer ಕರ್ನಾಟಕದಲ್ಲಿ ಬಿಯರ್‌ ಮಾರಾಟ ಗಣನೀಯ ಹೆಚ್ಚಳ: ಇಷ್ಟು ಕೋಟಿ ಆದಾಯ!

19 April, 2023 3:01 PM IST By: Hitesh
Significant increase in beer sales in Karnataka: So many crores of income!

ಕರ್ನಾಟಕದಲ್ಲಿ ಬಿಸಿಲಿನ ಝಳ ಹೆಚ್ಚಳವಾಗುತ್ತಿದ್ದು, ಬಿಯಾರ್‌ಗೆ ಭರಪೂರ ಬೇಡಿಕೆ ಬಂದಿದೆ. 

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳು ಡಿಸ್ಟಿಲರಿಗಳನ್ನು (ವಹಿವಾಟು) ಪ್ರಾರಂಭಿಸಿವೆ.

ಈ ಬೆಳವಣಿಗೆಯಿಂದ ಮದ್ಯ ಹಾಗೂ ಬಿಯರ್‌ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬಿಯರ್‌ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಪ್ರಸಕ್ತ ಸಾಲಿನಲ್ಲಿ ಬಿಯರ್‌ ಮಾರಾಟದ ಒಟ್ಟಾರೆ ಪ್ರಮಾಣವು ಶೇ 45ರಷ್ಟು ಹೆಚ್ಚಾಗಿದೆ. ಇದಕ್ಕೆ ಬಿಸಿಲಿ ಝಳವೂ ಕಾರಣ ಎಂದು ಅಂದಾಜಿಸಲಾಗಿದೆ.  

ಕರ್ನಾಟಕ ಚುನಾವಣೆ: ತೇಜಸ್ವಿನಿ ಅನಂತಕುಮಾರ್ ಒಂದು ಟ್ವೀಟ್‌; ನೂರು ಚರ್ಚೆ!

2022-23 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಯು 390.66 ಲಕ್ಷ ಕಾರ್ಟನ್ ಬಾಕ್ಸ್ (lcb) ಬಿಯರ್ ಅನ್ನು ಮಾರಾಟ ಮಾಡಿದೆ.

121.83 lcb ಬಿಯರ್‌ನ ಹೆಚ್ಚುವರಿ ಮಾರಾಟದಿಂದ ಹೆಚ್ಚುವರಿಯಾಗಿ 800 ಕೋಟಿ ಆದಾಯ ಬಂದಿದೆ!   

2019-20ರ ಕೋವಿಡ್‌ ಅವಧಿಯನ್ನು ಬಿಟ್ಟರೆ, ಉಳಿದ ಅವಧಿಯಲ್ಲಿ ಬಿಯಾರ್‌ ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯೇ ಆಗಿದೆ.   

ರಾಜ್ಯದಲ್ಲಿ ಈ ಹಿಂದೆಯಿಂದಲೂ ಬಿಯರ್ ಮಾರಾಟ ಪ್ರಗತಿಯನ್ನೇ ಕಾಣುತ್ತಿದೆ.

ಇಲಾಖೆಯು 2017-18ರಲ್ಲಿ 265.77 ಎಲ್‌ಸಿಬಿಗೆ ಹೋಲಿಸಿದರೆ 2018-19ರಲ್ಲಿ ಸುಮಾರು 300.85 ಎಲ್‌ಸಿಬಿ ಬಿಯರ್ ಮಾರಾಟ ಮಾಡಿರುವುದು ವರದಿ ಆಗಿದೆ.  

ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕ (ಅಂಕಿಅಂಶ) ಕೆ.ಎಸ್ ಶಿವಯ್ಯ ಅವರ ಪ್ರಕಾರ, ಕರ್ನಾಟಕದಲ್ಲಿ ಹಲವಾರು MNCಗಳು

ಬಿಯರ್ ಸರಬರಾಜು ಮಾಡಲು ಪ್ರಾರಂಭಿಸಿರುವುದರಿಂದ ಗ್ರಾಹಕರಿಗೆ ಮದ್ಯ ಖರೀದಿ ಮಾಡಲು ಹಲವು ಆಯ್ಕೆಗಳಿವೆ.  

ಇನ್ನು ಕರ್ನಾಟಕದ ಬಿಯರ್ ಮೇಲಿನ ತೆರಿಗೆಗಳು ಅತ್ಯಂತ ಕಡಿಮೆ. ಬಿಯರ್ ಮಾರಾಟ ಹೆಚ್ಚಾಗಲು ಇದೂ ಒಂದು ಕಾರಣ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ತಾಪಮಾನ ಏರಿಕೆಯೊಂದಿಗೆ, ಬಿಯರ್ ಮಾರಾಟವೂ ಹೆಚ್ಚುತ್ತಿದೆ.

ಜನವರಿ ಮತ್ತು ಮಾರ್ಚ್ 2023ರ ನಡುವೆ, ಕಳೆದ ಹಣಕಾಸು ವರ್ಷದ ಅನುಗುಣವಾದ

ತಿಂಗಳುಗಳಲ್ಲಿ 84.74 lcb ಗೆ ಹೋಲಿಸಿದರೆ 110 lcb ಬಿಯರ್ ಮಾರಾಟವಾಗಿದೆ.‌

ರಾಜ್ಯದಲ್ಲಿ “ಬಿಯರ್‌” ಕುಡಿಯುವವರ ಸಂಖ್ಯೆ ಹೆಚ್ಚಳ: ಹೊಸ ಮದ್ಯ ಪ್ರಿಯರ ಸೇರ್ಪಡೆ!?

Significant increase in beer sales in Karnataka: So many crores of income!

ಇನ್ನು ಕರ್ನಾಟಕವು ಮದ್ಯ ಮಾರಾಟದ ಮೂಲಕ 29,790 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಇದು ರಾಜ್ಯದ ಪರಿಷ್ಕೃತ ಬಜೆಟ್ ಅಂದಾಜಿನ 93 ಪ್ರತಿಶತ ಮತ್ತು ಬಜೆಟ್ ಅಂದಾಜಿನ ಶೇಕಡಾ 102.7 ಪ್ರತಿಶತವಾಗಿದೆ.

2021-22ನೇ ಹಣಕಾಸು ವರ್ಷದಲ್ಲಿ ರಾಜ್ಯದ ಆದಾಯಕ್ಕೆ ಅಬಕಾರಿ ಇಲಾಖೆಯ ಕೊಡುಗೆ 26,377 ಕೋಟಿ ರೂ.

ಈ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಇಲಾಖೆಗೆ 35 ಸಾವಿರ ಕೋಟಿ ರೂ. ನೀಡಿದೆ.   

ಚುನಾವಣೆಯ ಕಾವು!

ರಾಜ್ಯದಲ್ಲಿ ಚುನಾವಣೆಗೆ ಇನ್ನು ಕೇವಲ ಮೂರು ವಾರಗಳಷ್ಟೇ ಬಾಕಿ ಉಳಿದಿದೆ. 

ಅಂದರೆ ಇನ್ನು ಕೇವಲ 20 ದಿನಗಳು ಮಾತ್ರ.

ಈ ವೇಳೆ ಕೆಲವು ರಾಜಕೀಯ ನಾಯಕರು ಹಾಗೂ ಬೆಂಬಲಿಗರು ಅವರ ಕಾರ್ಯಕರ್ತರಿಗೆ,

ಯುವಕರಿಗೆ ಮದ್ಯದ ವ್ಯವಸ್ಥೆ ಮಾಡುತ್ತಿರುವುದು ಸಹ ವರದಿ ಆಗುತ್ತಲೇ ಇದೆ.

ಹೀಗಾಗಿ, ಚುನಾವಣೆಯ ಕಾವು ಸಹ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗುವುದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. 

Jagdish Shettar ಜಗದೀಶ್‌ ಶೆಟ್ಟರ್‌ ಜೊತೆ ಗುರುತಿಸಿಕೊಳ್ಳದಂತೆ ಬಿಜೆಪಿ ನಾಯಕರಿಗೆ ಖಡಕ್‌ ಸೂಚನೆ?!