News

Ration Card: ರೇಷನ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆ! ರೇಷನ್ ಕಾರ್ಡ್ ದುರ್ಬಳಕೆ ಮಾಡಿದವರಿಗೆ ಕಾದಿದೆ ಆಪತ್ತು!

11 May, 2022 11:12 AM IST By: Kalmesh T
Significant change in Ration Card rules!

ಬಡತನ ರೇಖೆಗಿಂತ ಕೆಳಗಿದ್ದವರಿಗೆ ಅನುಕೂಲವಾಗಲೆಂದು ಸರ್ಕಾರ ಜಾರಿಗೊಳಿಸಿದ್ದ ಪಡಿತರ ವ್ಯವಸ್ಥೆಯನ್ನು ಬಹುಪಾಲು ಅನುಕೂಲಸ್ಥರು ಸಹ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದಿದೆ. ಅದಕ್ಕಾಗಿ ಸರ್ಕಾರವು ಪಡಿತರ ಚೀಟಿ ದುರ್ಬಳಕೆಯನ್ನು ಹತ್ತಿಕ್ಕುವ ಸಲುವಾಗಿ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಇದನ್ನೂ ಓದಿರಿ:

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲು ರಾಜ್ಯ ಸರ್ಕಾರ ನಿರ್ಧಾರ!

Shocking News: ಕಳ್ಳ ಸಾಗಾಣಿಕೆ ಮಾಡುತ್ತಿದ್ದ 5.88 ಕೋಟಿಗಿಂತ ಹೆಚ್ಚಿನ ಮೌಲ್ಯದ 11 ಕೆ.ಜಿ ಚಿನ್ನ ವಶಕ್ಕೆ!

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದರ ಅಡಿಯಲ್ಲಿ, ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು ತೆಗೆದುಕೊಳ್ಳುವ ಅರ್ಹರಿಗೆ ನಿಗದಿಪಡಿಸಿದ ಮಾನದಂಡಗಳು ಬದಲಾಗುತ್ತವೆ. ಹೊಸ ಮಾನದಂಡದ ಕರಡು ಈಗ ಬಹುತೇಕ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸುವ ಕೆಲಸಗಳು ಪೂರ್ಣಗೊಂಡಿವೆ.

ಪಡಿತರ ಚೀಟಿಯಲ್ಲಿ ಬದಲಾವಣೆ ಏಕೆ?

ಬಹುಪಾಲು ಬಡತನ ರೇಖೆಗಿಂತ ಮೇಲಿರುವ ಜನರು ಕೂಡ ಕ್ರಮವಾಗಿ ಅಥವಾ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಪಡಿತರ ಚೀಟಿಯನ್ನು ಪಡೆದಿದ್ದಾರೆ. ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ  ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಆರ್ಥಿಕವಾಗಿ ಸಮೃದ್ಧವಾಗಿರುವ ಅನೇಕ ಜನರಿದ್ದಾರೆ.

ಅಂಗಾಂಶ ಕೃಷಿ ಸಸ್ಯಗಳ ಹೆಚ್ಚಳಕ್ಕೆ ಕೇಂದ್ರದ ಒತ್ತಾಯ!

Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!

ಈ ಕಾರಣಕ್ಕಾಗಿಯೇ ಈಗ ಸರ್ಕಾರ ತನ್ನ ನಿಯಮಗಳನ್ನು ಬದಲಾಯಿಸಲು ಹೊರಟಿದೆ. ಹೊಸ ಮಾನದಂಡದಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಸಂಪೂರ್ಣ ಪಾರದರ್ಶಕಗೊಳಿಸಲಾಗುವುದು ಎಂದು ಕಮೀಟಿ ತಿಳಿಸಿದೆ.

ರಾಜ್ಯ ಸರ್ಕಾರಗಳು ನೀಡಿರುವ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾನದಂಡಗಳನ್ನು ಸಿದ್ಧಪಡಿಸಿ, ಇವುಗಳನ್ನು ಅಂತಿಮಗೊಳಿಸಲಾಗುವುದು.

“ಒನ್ ನೇಶನ್ ಒನ್ ರೇಶನ್ ಕಾರ್ಡ್ ಯೋಜನೆ” (One Nation One ration Card Scheme)

ಮುಖ್ಯವಾಗಿ ಇದುವರೆಗೆ 32 ರಾಜ್ಯಗಳು ಮತ್ತು ಯುನಿಯನ್ ಟೆರಿಟರಿಗಳಲ್ಲಿ  “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಯೋಜನೆ ಜಾರಿಗೊಳಿಸಲಾಗಿದೆ. ಕೋಟಿಗಟ್ಟಲೆ ಫಲಾನುಭವಿಗಳು ಅಂದರೆ NFSA ಅಡಿಯಲ್ಲಿ ಬರುವ ಜನಸಂಖ್ಯೆಯ 86 ಪ್ರತಿಶತದಷ್ಟು ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

Shocking news: ಮತ್ತೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ!

ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!

ಪ್ರತಿ ತಿಂಗಳು ಸುಮಾರು 1.5 ಕೋಟಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಮೂಲಕ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರವು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ   ಉಚಿತ ಪಡಿತರ ಯೋಜನೆಯನ್ನು ಹೆಚ್ಚಿಸಿದೆ.

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!