News

ಶಾಕಿಂಗ್; ರಾಜ್ಯದಲ್ಲಿ ಡೆಂಘಿ ಹೆಚ್ಚಳ: ಹವಾಮಾನ ವೈಪರೀತ್ಯ ಕಾರಣ

17 October, 2022 12:09 PM IST By: KJ Staff
dengue mosquito

ರಾಜ್ಯದಲ್ಲಿ ಸೃಷ್ಟಿಯಾಗಿರುವ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದಾಗಿ ಡೆಂಘಿ ದೃಢಪಡುವ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಇದನ್ನು ಓದಿರಿ: ಆಧುನಿಕ ಭಗೀರಥ ಕೆರೆ ಕಾಮೇಗೌಡ ಇನ್ನಿಲ್ಲ..!

ಡೆಂಘಿ ಪೀಡಿತರ ಸಂಖ್ಯೆ ಉಲ್ಬಣಗೊಂಡಿದೆ. ಕಳೆದ ಒಂದೇ ತಿಂಗಳಲ್ಲಿ 987 ಪ್ರಕರಣಗಳು ದೃಢಪಟ್ಟಿವೆ. 

ಈ ವರ್ಷ 1.45 ಲಕ್ಷಕ್ಕೂ ಅಧಿಕ ಡೆಂಘಿ ಶಂಕಿತರನ್ನು ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಜನರ ರಕ್ತ ಪರೀಕ್ಷೆ  ಮಾಡಲಾಗಿದೆ.

ಇಲ್ಲಿಯ ವರೆಗೆ ವರದಿಯಾದ ಒಟ್ಟು ಡೆಂಘಿ ಪ್ರಕರಣಗಳ ಸಂಖ್ಯೆ ಈ ಮೂಲಕ 7,024 ಕ್ಕೆ ಏರಿಕೆಯಾದಂತಾಗಿದೆ. ಡೆಂಘಿಯಿಂದಾಗಿ ರಾಜ್ಯದಲ್ಲಿ ಪೀಡಿತರಲ್ಲಿ ನಾಲ್ವರು ಮೃತಪಟ್ಟಿರುವುದು ವರದಿಯಾಗಿದೆ.
ಇದನ್ನೂ ಓದಿರಿ: ಸಿಹಿಸುದ್ದಿ: ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ, ₹50 ಕೋಟಿ ಅನುದಾನ ಮೀಸಲು!

ಕಳೆದ ವರ್ಷ 7,189 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿದ್ದರು. 

ಕೊರೊನಾ ಸೋಂಕಿನಿಂದಾಗಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ವರದಿಯಾಗಿರಲಿಲ್ಲ. ಇದೀಗ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾದ ನಂತರ ಈ ವರ್ಷ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಡೆಂಘಿ ಪ್ರಕರಣಗಳು ವರದಿಯಾಗಿವೆ.
ಮೀನುಗಾರರಿಗೆ ಭರ್ಜರಿ ಸುದ್ದಿ ನೀಡಿದ ಸಿಎಂ, 3 ಲಕ್ಷ ಸಹಾಯಧನ ಘೋಷಣೆ!

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 48,038 ಮಂದಿಯಲ್ಲಿ ಡೆಂಘಿ ಶಂಕೆ ವ್ಯಕ್ತವಾಗಿದ್ದು, 1,227 ಜನರಿಗೆ ಡೆಂಘಿ ಇರುವುದು ದೃಢಪಟ್ಟಿದೆ.

ಮೈಸೂರಿನಲ್ಲಿ 605, ಉಡುಪಿಯಲ್ಲಿ 471, ಚಿತ್ರದುರ್ಗದಲ್ಲಿ 328, ದಕ್ಷಿಣ ಕನ್ನಡದಲ್ಲಿ 316, ಕಲಬುರಗಿಯಲ್ಲಿ 278, ಬೆಳಗಾವಿಯಲ್ಲಿ 265, ಶಿವಮೊಗ್ಗದಲ್ಲಿ 263, ಮಂಡ್ಯದಲ್ಲಿ 249, ಚಿಕ್ಕಬಳ್ಳಾಪುರದಲ್ಲಿ 237, ಹಾಸನದಲ್ಲಿ 217 ಹಾಗೂ ಕೋಲಾರದಲ್ಲಿ 200 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.

ಇನ್ನುಳಿದ ಜಿಲ್ಲೆಗಳಲ್ಲಿ ಡೆಂಘಿ ಪೀಡಿತರ ಸಂಖ್ಯೆ 200 ಕ್ಕಿಂತ ಕಡಿಮೆ ಇವೆ. ಇದಲ್ಲದೇ 29 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 50 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ.

27 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,700 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.  

ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ