News

“ಕ್ಯಾಡ್ಬರಿ ಜಾಹೀರಾತಿನಲ್ಲಿ ಮೋದಿಗೆ ಅವಮಾನ”: ಟ್ವಿಟರ್‌ನಲ್ಲಿ ಬಾಯ್ಕಾಟ್‌ ಕ್ಯಾಡ್ಬರಿ ಟ್ರೆಂಡ್‌!

30 October, 2022 4:43 PM IST By: Kalmesh T
"Shame on Cadbury ad": Boycott Cadbury Trend!

ಜಾಹೀರಾತೊಂದರಲ್ಲಿ ಪ್ರಧಾನಿ ಮೋದಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ಟ್ವಿಟರ್ ನಲ್ಲಿ ಬಾಯ್ಕಾಟ್ ಕ್ಯಾಡ್ಬರಿ ಟ್ರೆಂಡ್ ಆಗುತ್ತಿದೆ.

ಇದನ್ನೂ ಓದಿರಿ: RBI ನಿಂದ ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ; ಒಟ್ಟು 20 ದಿನ ಬಂದ್‌ ಇರಲಿವೆ ಈ ಬ್ಯಾಂಕ್‌ಗಳು!

ಜಾಹೀರಾತೊಂದರಲ್ಲಿ ಪ್ರಧಾನಿ ಮೋದಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ಟ್ವಿಟರ್ ನಲ್ಲಿ ಬಾಯ್ಕಾಟ್ ಕ್ಯಾಡ್ಬರಿ ಟ್ರೆಂಡ್ ಆಗಿದೆ.

ಕ್ಯಾಡ್‌ಬರಿ ಕಂಪನಿಯೂ ದೀಪಾವಳಿಗೆ ತನ್ನ ಪ್ರಾಡಕ್ಟ್‌ ಉತ್ತೇಜಿಸುವ ಟಿವಿ ಜಾಹೀರಾತೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ದಾಮೋದರ ಎಂಬ ದೀಪದ ವ್ಯಾಪಾರಿಯನ್ನು ತೋರಿಸಲಾಗಿದೆ.

ಈ ವಿಡಿಯೊವನ್ನು ವಿಶ್ವ ಹಿಂದು ಪರಿಷತ್‌ನ ಸಾಧ್ವಿ ಪ್ರಾಚಿ ಶೇರ್‌ ಮಾಡಿದ್ದು, ಜಾಹೀರಾತಿನಲ್ಲಿ ತೋರಿಸಿರುವ ಬಡ, ದೀಪದ ಮಾರಾಟಗಾರನ ಹೆಸರನ್ನು 'ದಾಮೋದರ್' ಎಂಬುದಾಗಿ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

Milk Price: ಹಾಲು ಉತ್ಪಾದಕರಿಗೆ ಸಿಹಿಸುದ್ದಿ; ನವೆಂಬರ್‌ 1ರಿಂದ ಲೀಟರ್‌ಗೆ 2ರೂ ಹೆಚ್ಚಳ!

‘ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಯಾರನ್ನಾದರೂ ಬಡವನೆಂದು ತೋರಿಸಲು ಈ ಜಾಹೀರಾತು ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ’ ಎಂದು ಸಾಧ್ವಿ ಪ್ರಾಚಿ ಟ್ವೀಟ್ ಮಾಡಿದ್ದು, ಜಾಹೀರಾತು ನೋಡಿದ ಹಲವರು ಇದೀಗ ಕ್ಯಾಡ್‌ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸುತ್ತಿದ್ದಾರೆ.

10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

2021ರಲ್ಲಿಯೂ ಇದೇ ರೀತಿ ಬಹಿಷ್ಕಾರದ ಪೋಸ್ಟ್‌ ಟ್ರೆಂಡ್‌ ಆಗಿತ್ತು. ಕ್ಯಾಡ್‌ಬರಿ ಆಸ್ಟ್ರೆಲಿಯಾದ ವೆಬ್‌ನಲ್ಲಿ ನೀಡಿರುವ ವಿವರಣೆಯನ್ನು ಬಳಸಿಕೊಂಡು ಭಾರತದಲ್ಲಿ ಟ್ರೆಂಡ್‌ ಮಾಡಲಾಗಿತ್ತು.

ಆದರೆ, ಹಸಿರು ಚುಕ್ಕಿಯೊಂದಿಗೆ ಕಾಣಿಸಿಕೊಳ್ಳುವ ಕ್ಯಾಡ್‌ಬರಿ ಭಾರತದ ಉತ್ಪನ್ನ ಶೇ.100ರಷ್ಟು ಶಾಕಾಹಾರಿ ಎಂದು ಕಂಪನಿ ಸ್ಪಷ್ಟೀಕರಣ ನೀಡಿತ್ತು.