News

ಸಾನಿಯಾ ಮಿರ್ಜಾ ಶೋಯೆಬ್‌ ಮಲಿಕ್‌ ಈಗಾಗಲೇ ಡಿವೋರ್ಸ್‌..? ಆಪ್ತ ಸ್ನೇಹಿತ ಹೇಳಿದ್ದೇನು..?

10 November, 2022 1:57 PM IST By: Maltesh
Sania Mirza Shoaib Malik divorce already..? What did a close friend say..?

ಖ್ಯಾತ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಂಡಲ್‌ಗಳಲ್ಲಿ ದಾಂಪತ್ಯಕ್ಕೆ ಸಂಬಂಧಪಟ್ಟ ಪೋಸ್ಟ್‌ ಒಂದನ್ನು ಹಂಚಿಕೊಂಡಾಗಿನಿಂದ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗಿನ ಸಂಸಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ವದಂತಿಗಳು ಹರಡಿವೆ.

Sania Mirza Shoaib Malik divorce already..? What did a close friend say..?

ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಊಹಾಪೋಹಗಳು ಸೂಚಿಸಿವೆ ಮತ್ತು ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ದುಃಖವನ್ನುಂಟು ಮಾಡಿದೆ. ಇದೀಗ, ಸಾನಿಯಾ ಮತ್ತು ಶೋಯೆಬ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ದಂಪತಿಯ ಆಪ್ತ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ.

ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಮಲಿಕ್ ಅವರ ಮ್ಯಾನೇಜ್‌ಮೆಂಟ್ ತಂಡದ ಭಾಗವಾಗಿದ್ದ ದಂಪತಿಗಳ ಆಪ್ತ ಸ್ನೇಹಿತ, ವಿಚ್ಛೇದನವನ್ನು ದೃಢಪಡಿಸಿದ್ದಾರೆ ಮತ್ತು "ಹೌದು, ಅವರು ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಅವರು ಬೇರ್ಪಟ್ಟಿದ್ದಾರೆ ಎಂದು ಖಚಿತಪಡಿಸಬಹುದು ಎಂದಿದ್ದಾರೆ ಎಂದು ವರದಿಗಳಾಗಿವೆ.

ಅಭಿಮಾನಿಗಳು ಕಳವಳಗೊಂಡಿರುವ ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ ಶೋಯೆಬ್ ಇತ್ತೀಚೆಗೆ ಪಾಕಿಸ್ತಾನಿ ಕ್ರಿಕೆಟ್ ಶೋ 'ಆಸ್ಕ್ ದಿ ಪೆವಿಲಿಯನ್' ನಲ್ಲಿ ಕಾಣಿಸಿಕೊಂಡಿದ್ದರು. ಈಲ್ಲಿ ಸಾನಿಯಾ ಅವರ ಟೆನಿಸ್ ಅಕಾಡೆಮಿಗಳ ಕುರಿಉತು ನಿರೂಪಕರು ಕೇಲವೊಂದು ಪ್ರಶ್ನೆಗಳನ್ನು ಎಸಗಿದ್ದಾರೆ. ಈ ವೇಳೆ ಶೊಯೆಬ್‌ ಸಾನಿಯಾ ಮಿರ್ಜಾ ಹೊಂದಿರುವ ಟೆನ್ನಿಸ್‌ ಅಕಾಡೆಮಿಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿಗಳು ಗೊತ್ತಿಲ್ಲ ಎಂದು ಅಚ್ಚರಿಯ ಉತ್ತರ ನೀಡಿದ್ದರು.

ಇದನ್ನೂ ಓದಿರಿ: ಕುರಿಗಾಹಿಗಳಿಗೆ ಭರ್ಜರಿ ಸುದ್ದಿ: ಸರ್ಕಾರದಿಂದ ತಲಾ 20 ಕುರಿ 1 ಮೇಕೆ ಉಚಿತ, ಸಿಎಂ ಬೊಮ್ಮಾಯಿ ಘೋಷಣೆ!

ಇದು ಸಾಕಷ್ಟು ವೈರಲ್‌ ಆಗಿತ್ತು  ಶೋಯೆಬ್ ಅವರ ಪ್ರತಿಕ್ರಿಯೆಯು ಪಾಕಿಸ್ತಾನಿ ಕ್ರಿಕೆಟಿಗ  ವಕಾರ್ ಯೂನಿಸ್ ಅವರನ್ನು  ಕೂಡ  ಆಶ್ಚರ್ಯಗೊಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಶೊಯೆಬ್‌ ಇಷ್ಟು ಗೊತ್ತಿಲ್ಲವೆಂದರೆ ನ "ನೀವು ಯಾವ ರೀತಿಯ ಗಂಡ?" ಎಂದು ಕಾಲೆಳೆದಿದ್ದರು.

Sania Mirza Shoaib Malik divorce already..? What did a close friend say..?

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 12, 2010 ರಂದು ಭಾರತದ ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಹೈದರಾಬಾದಿ ಮುಸ್ಲಿಂ ಸಾಂಪ್ರದಾಯದಂತೆ  ವಿವಾಹವಾದರು. ಇದರ ನಂತರ ಪಾಕಿಸ್ತಾನಿ ವಿವಾಹ ಪದ್ಧತಿಗಳು ಮಹರ್‌ಗಾಗಿ ನಡೆದವು ಮತ್ತು ಅವರ ವಲೀಮಾ ಸಮಾರಂಭವು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ನಡೆದಿತ್ತು.

ಕಳೆ ಅವಶೇಷ ಸುಡುವ ರೈತರಿಗೆ ಪಿಎಂ ಕಿಸಾನ್‌ ಸಬ್ಸಿಡಿ ರದ್ದು, ₹5000 ದಂಡ!