ಗೋಶಾಲೆಯಲ್ಲಿ ಹಸುಗಳ ಆರೈಕೆ ಮಾಡಲು ಸರ್ಕಾರ ರೂಪಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡಲು ಸರ್ಕಾರಿ ನೌಕರರ ವೇತನ ಕಡಿತಗೊಳಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರ್ಷಕ್ಕೆ 12 ಸಾವಿರ ರೂ ಸ್ಕಾಲರ್‌ಶಿಪ್..ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ರಾಜ್ಯದಲ್ಲಿ ಗೋವುಗಳ ಸಂರಕ್ಷಣೆ ಹಾಗೂ ಆರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು “ಪುಣ್ಯಕೋಟಿ ದತ್ತು” ಯೋಜನೆಯನ್ನು ಜಾರಿ ಮಾಡಿದ್ದು, ಈ ಯೋಜನೆಗೆ ನೌಕರರ ಸಂಘದಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿತ್ತು.
ಆಧಾರ್ ಕಾರ್ಡ್ ಬಳಸಿ PhonePe ಆಕ್ಟಿವೇಟ್ ಮಾಡುವುದು ಹೇಗೆ..?
ಡಿ ವೃಂದದ ನೌಕರರನ್ನು ಹೊರತುಪಡಿಸಿ, ಇತರ ವೃಂದಗಳ, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಲ್ಲಿ ಅಲ್ಪಮೊತ್ತ ಕಡಿತವಾಗಲಿದೆ.
ವೇತನದಿಂದ ಒಂದು ಬಾರಿಗೆ ಸೀಮಿತ ವಂತಿಗೆ ಕಡಿತ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಬಿಗ್‌ನ್ಯೂಸ್: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ
ಸಂಘ ಸಲ್ಲಿಸಿದ್ದ ಪ್ರಸ್ತಾವ ಮತ್ತು ಸರ್ಕಾರದ ಮಂಜೂರಾತಿಗೆ ನೌಕರರ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.
ಸರ್ಕಾರದ ಈ ಯೋಜನೆಗೆ ಡಿ ವೃಂದವನ್ನು ಹೊರತುಪಡಿಸಿ, ಎ ವೃಂದದಿಂದ 11 ಸಾವಿರ ರೂಪಾಯಿ, ಬಿ ವೃಂದದಿಂದ 4 ಸಾವಿರ ರೂಪಾಯಿ ಹಾಗೂ ಸಿ ವೃಂದದಿಂದ 400 ರೂಪಾಯಿ ವಂತಿಗೆಯನ್ನು ಪಡೆಯಲು ಉದ್ದೇಶಿಸಲಾಗಿದೆ.
ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಿತ್ತು. ಅಲ್ಲದೆ, ಈ ಯೋಜನೆಯ ಅನುಷ್ಠಾನಕ್ಕಾಗಿ ಗೋವುಗಳನ್ನು
ಪೋಷಿಸುವ ಕಾರ್ಯಕ್ಕೆ ಸರ್ಕಾರದ ಹಾಗೂ ಸರ್ಕಾರದ ಇತರ ಅವಿಭಾಜ್ಯ ಅಂಗಗಳಾದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು.
ಈಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು ನೌಕರರ ವೇತನದಿಂದ ಹಣ ಕಡಿತ ಮಾಡಿ ಈ ಯೋಜನೆಗೆ 100 ಕೋಟಿ ದೇಣಿಗೆ ನೀಡುವ ಪತ್ರವನ್ನು ಹಸ್ತಾಂತರಿಸಿದ್ದರು.
ಪುಣ್ಯಕೋಟಿ ಯೋಜನೆಗೆ ವೇತನದಿಂದ ವಂತಿಗೆ ಕಡಿತವಾಗುವ ಆದೇಶ ಏಕಾಏಕಿ ಬಂದಿರುವುದು ದುರಾದೃಷ್ಟಕರ ಎಂದು ಕೆಲವರು ಹೇಳಿದ್ದಾರೆ.
ವೇತನದ ಮೊತ್ತವನ್ನು ದೇಣಿಗೆಯಾಗಿ ನೀಡುವುದರ ಕುರಿತು ನಮ್ಮೊಂದಿಗೆ ಯಾರೂ ಚರ್ಚೆ ನಡೆಸಿಲ್ಲ. ಹೀಗಾಗಿ, ನಾವು ವೇತನ ಭಾಗ ನೀಡುವುದಿಲ್ಲ ಎಂದು ಕೆಲವು ಸಂಘಟನೆಗಳು ತಿಳಿಸಿವೆ.