News

Russia-ukraine war ಪರಿಣಾಮ, ಮನೆ ಕಟ್ಟುವ plan ನಲ್ಲಿರುವವರಿಗೆ ಕಾದಿದೆ ಶಾಕ್! ನೀವು ಇದನ್ನು ಓದಲೇಬೇಕು.

17 March, 2022 11:13 AM IST By: Kalmesh T
Russia-ukraine war - Real estate industry in Crisis; increase in price of home building materials

ನೆರೆ ರಾಷ್ಟ್ರಗಳಾದ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಆ ಎರಡು ರಾಷ್ಟ್ರಗಳ ಜೊತೆ ಅಕ್ಕಪಕ್ಕದ ರಾಷ್ಟ್ರಗಳು ಕೂಡ ಸಮಸ್ಯೆಯನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆಯಷ್ಟೇ ಅಡುಗೆ ಎಣ್ಣೆ, ಪೆಟ್ರೋಲ್‌-ಡಿಸೆಲ್‌, ಎಲ್‌ಪಿಜಿ ಗ್ಯಾಸ್‌ ದರಗಳು ಮುಗಿಲು ಮುಟ್ಟಿದ್ದವು. ಇದರ ಬೆನ್ನಲ್ಲೇ ಈಗ ಮತ್ತೊಂದು ದೊಡ್ಡ ಶಾಕ್‌! ನಮ್ಮೆಲ್ಲರಿಗಾಗಿ ಕಾದಿದೆ.

ಹೌದು! ಈಗಾಗಲೇ ಇಬ್ಬರ ಜಗಳದಲ್ಲಿ ಮೂರನೆಯವ ಬಡವ ಎನ್ನುವಂತ ಸ್ಥಿತಿ ನಮ್ಮದಾಗಿದೆ. ಈ Russia Ukraine ಸಂಘರ್ಷದ ಪರಿಣಾಮದಿಂದ ಮನೆ ನಿರ್ಮಾಣ ಚಟುವಟಿಕೆಗಳ ಮೇಲೂ ಉಂಟಾಗಲಿದೆ. 2016 ರ ನೋಟು Demonitisation ನಂತರ Dull ಆಗಿದ್ದ Real estate ವಲಯಕ್ಕೆ ಈಗ ಮತ್ತೊಂದು ಏಟು ಬಿದ್ದಂತಾಗಿದೆ. ಕೊವಿಡ್ ಸಂಕಷ್ಟದಿಂದ ಕಂಗಾಲಾಗಿದ್ದ ಉದ್ಯಮ ಇದೀಗ ನಿರ್ಮಾಣ ಚಟುವಟಿಕೆಗಳಿಗೆ ಬಳಸುವ ಉತ್ಪನ್ನಗಳ ಬೆಲೆ ಏರಿಕೆಯಿಂದ ಇನ್ನಷ್ಟು ಕಂಗಾಲಾಗಿದೆ.

ಇದನ್ನು ಓದಿರಿ:

Ration card Holder's Latest Update! ಸರ್ಕಾರದಿಂದ ದೊಡ್ಡ ಘೋಷಣೆ!

ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ, ದ್ರಾಕ್ಷಿ ತೋಟಕ್ಕೆ ಹಾನಿ, ಪರಿಹಾರ ನೀಡುವಂತೆ ರೈತರ ಒತ್ತಾಯ

ತೊಂದರೆಗೊಳಗಾದ Real estate industry.

ಮುಂಬರುವ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷದಿಂದ ಬೆಲೆಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಕಟ್ಟಡ ನಿರ್ಮಾಣದ ಬೆಲೆಗಳು ಪ್ರತಿ ಚದರ ಅಡಿಗೆ ಸರಾಸರಿ ರೂ.400ರಿಂದ 600ರಷ್ಟು ಹೆಚ್ಚಾಗಿದೆ. ಮೂರು ವಾರಗಳ ಹಿಂದೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಕಟ್ಟಡ ನಿರ್ಮಾಣಕ್ಕೆ ಬಳಸುವ ಉತ್ಪನ್ನಗಳ ಬೆಲೆ ಒಂದೇ ಸಮನೆ ಹೆಚ್ಚಾಗಿದ್ದು ಇದಕ್ಕೆ ಮುಖ್ಯ ಕಾರಣ. ಮನೆ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡ ಗ್ರಾಹಕರು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚುವರಿಯಾಗಿ ಹಣಪಾತಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ. ಕೆಲವೆಡೆ ಮನೆ ನಿರ್ಮಾಣ ಚಟುವಟಕೆಗಳು ಬಂದ್‌ ಆಗಿವೆ. 

CREDAI ಅಧ್ಯಕ್ಷರು ಏನೆನ್ನುತ್ತಾರೆ?

ಕಳೆದ 2-3 ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಮೇರೆಗೆ ಕೆಲಸ ಮುಗಿಸಿಕೊಡುವುದು ಸಾಧ್ಯವೇ ಇಲ್ಲ. ವಿಶ್ವವಿದ್ಯಮಾನಗಳು ಏರು-ಪೇರಿನಿಂದಾಗಿ ಗೃಹ ನಿರ್ಮಾಣ ಚಟುವಟಿಕೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎನ್ನುತ್ತಾರೆ Confederation of real estate Developers of india – CREDAI ನ ಅಧ್ಯಕ್ಷ ಭಾಸ್ಕರ್ ನಾಗೇಂದ್ರಪ್ಪ ಅವರು.

ಇದನ್ನು ಓದಿರಿ:

ʼBlinkitʼಗೆ ಬರೋಬ್ಬರಿ 150 ಮಿ.ಡಾಲರ್ಸ್‌ ಸಾಲ ನೀಡಿದ Zomato

POST OFFICE! BIGGEST Scheme! BANK ಗಿಂತಲೂ ಹೆಚ್ಚಿನ ಲಾಭ?

ಈಗಾಗಲೇ ನಿರ್ಮಾಣ ಹಂತ ತಲುಪಿರುವ ಮನೆ ಮತ್ತು ಫ್ಲಾಟ್​ಗಳ ಬೆಲೆಯನ್ನೂ ಶೇಕಡ 10ರಿಂದ 15ರಷ್ಟು ಹೆಚ್ಚಿಸಲು ಗುತ್ತಿಗೆದಾರರು ಹಾಗೂ Real Estate ಕಂಪನಿಗಳು ಸಜ್ಜಾಗಿವೆ. ಸಿಮೆಂಟ್, ಉಕ್ಕು, ಪಿವಿಸಿ ಪೈಪ್, ತಾಮ್ರ, ಅಲ್ಯೂಮಿನಿಯಮ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವ ಹಲವು ವಸ್ತುಗಳ ಬೆಲೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ.

ಹೆಚ್ಚಿದ ಬೆಲೆ; ನೆಲಕಚ್ಚಿದ ಕೆಲಸ

ಸಿಮೆಂಟ್, ಉಕ್ಕು, ಮರ, ಗಾಜು, ಪಿಒಪಿ, ಪ್ಲಾಸ್ಟಿಕ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ನಿರ್ಮಾಣ ಚಟುವಟಿಕೆಯ ಒಟ್ಟು ವೆಚ್ಚದ ಮೇಲೆ ಪರಿಣಾಮ ಬೀರುವ ಉಕ್ಕಿನ ಬೆಲೆ ಹೆಚ್ಚಾಗಿದೆ.

  • ಟಾಟಾ ಸ್ಟೀಲ್ ಬೆಲೆಯು ಒಂದು ಟನ್​ಗೆ ರೂ. 4600ರಷ್ಟು ಹೆಚ್ಚಾಗಿದೆ.
  • ಯುದ್ಧಕ್ಕೆ ಮೊದಲು ಕಬ್ಬಿಣ ಒಂದು ಟನ್​ಗೆ ರೂ 75,000 ಇತ್ತು. ಈಗ 90,000 ಮುಟ್ಟಿದೆ.

ಒಟ್ಟಾರೆಯಾಗಿ ಯುದ್ಧದ ಪರಿಣಾಮವೋ ಅಥವಾ ಇದೊಂದು ನೆಪಮಾತ್ರ ಕಾರಣವೋ ಗೊತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಮಾತ್ರ ದಿನಬಳಕೆಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರು ನಿತ್ಯದ ಖರ್ಚು ವೆಚ್ಚಗಳಿಗೆ ಪರದಾಡುವಂತೆ ಮಾಡುತ್ತಿದೆ. ಈಗಾಗಲೇ ಕೊರೊನಾದ ಆರ್ಭಟಕ್ಕೆ ಸಿಕ್ಕು ಬಳಲಿದ ಜನತೆ ಈ ಬೆಲೆ ಹೆಚ್ಚಳಗಳ ಕಾರಣದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಂತೂ ಗ್ಯಾರಂಟಿ.

ಇನ್ನಷ್ಟು ಓದಿರಿ: 

Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್‌ ಬೆಲೆ.. ಇದೇ ಕಾರಣ

Amul Recruitment 2022: ವಿಶ್ವದ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಲ್ಲಿ ನೇಮಕಾತಿ ಶುರು..! ಇಲ್ಲಿದೆ ಫುಲ್‌ ಡಿಟೈಲ್ಸ್‌