News

Elections ರಾಜ್ಯದಲ್ಲಿ ಮತ್ತೆ ಬರಲಿದೆ ಸಾಲು ಸಾಲು ಚುನಾವಣೆ: ಮತದಾನಕ್ಕೆ ಸಿದ್ಧರಾಗಿರಿ!

16 May, 2023 2:28 PM IST By: Hitesh
Row Elections Coming Again in the State: Get Ready to Vote!

ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳ ಅಂತರದಲ್ಲಿ ಸಾಲು ಸಾಲು ಚುನಾವಣೆಗಳು ನಡೆಯಲಿವೆ.

ಅದೇನು ಈಗಷ್ಟೇ ಕರ್ನಾಟಕ ಸಾರ್ವತ್ರಿಕ ಚುನಾವಣೆ ನಡೆಯಿತಲ್ಲ ಅಂದ್ರ, ರಾಜ್ಯ ಚುನಾವಣೆಯೇನೋ ಆಯ್ತು ಆಗಿದ್ರೆ ಇನ್ನೂ ಯಾವ ಚುನಾವಣೆ ಬಾಕಿ ಇದೆ ಎನ್ನುವ ವಿವರ ಇಲ್ಲಿದೆ!

ರಾಜ್ಯದಲ್ಲಿ ಮೇ 10ಕ್ಕೆ ಕರ್ನಾಟಕ ಸಾರ್ವತ್ರಿಕ ಚುನಾವಣೆ ನಡೆದಿದ್ದು, ಮೇ 13ಕ್ಕೆ ಫಲಿತಾಂಶವೂ ಪ್ರಕಟವಾಗಿದೆ.

ಅಷ್ಟೇ ಅಲ್ಲ ಕಾಂಗ್ರೆಸ್‌ ಸರ್ಕಾರವು ಪೂರ್ಣಬಹುಮತ ಸಾಧಿಸಿದೆ. ಆದರೆ, ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಹಲವು ಚುನಾವಣೆಗಳು ನಡೆಯಲಿವೆ!

ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ: ಇನ್ನು ಕೆಲವೇ ತಿಂಗಳಲ್ಲಿ ಅಂದರೆ 10 ತಿಂಗಳ ಅಂತರದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.

ಈ ಬಾರಿಯ ಲೋಕಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ಹೆಚ್ಚಾಗಿಯೇ ಇರುವ ಸಾಧ್ಯತೆ ಇದೆ.

ಏಕೆಂದರೆ, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಬಿಜೆಪಿ ಹೀನಾಯವಾಗಿ ಸೋತಿದೆ.

ಅಲ್ಲದೇ ರಾಜ್ಯದಿಂದ 25+1 ಜನ ಬಿಜೆಪಿ ಸಂಸದರು ಈ ಹಿಂದೆ ಅಂದರೆ 2018ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಇದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿಯೂ ಇದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯದ ಮತದಾರರು ಮತ್ತೊಮ್ಮೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದಾಗಿದೆ.

ರಾಜ್ಯದ ಜನತೆಗೆ ಸಿಗಲಿದೆ ಮತ್ತೆ ಮತದಾನದ ಅವಕಾಶ!

ಕರ್ನಾಟಕದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮಹತ್ವದ ತೀರ್ಪನ್ನು ನೀಡುವ ಮೂಲಕ

ಇಡೀ ದೇಶವೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ.

ಇದೀಗ ಇದೇ ವಿಷಯ ದೇಶದ ಹಲವು ರಾಜ್ಯದ ಚುನಾವಣೆಯಲ್ಲಿ ಚರ್ಚೆ ಆಗುತ್ತಿದೆ.

ವಿವಿಧ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕದ ಮಾದರಿಯನ್ನು ನಾವು ಅನುಸರಿಸಲಿದ್ದೇವೆ ಎಂದು ವಿರೋಧ ಪಕ್ಷಗಳು ಹೇಳುತ್ತಿರುವುದು

ಸಹಜವಾಗಿಯೇ ಕಾಂಗ್ರೆಸ್‌ನ ಹುರುಪು ಹೆಚ್ಚಿಸಿದ್ದರೆ, ಬಿಜೆಪಿಯಲ್ಲಿ ನಡುಕವನ್ನುಂಟು ಮಾಡಿದೆ.

ಇಷ್ಟೆಲ್ಲ ಸ್ವಾರಸ್ಯಕರ ರಾಜಕೀಯ ಬೆಳವಣಿಗೆಗಳ ನಡುವೆ ರಾಜ್ಯದ ಮತದಾರರಿಗೆ ಮತ ಚಲಾಯಿಸುವ ಅಧಿಕಾರ ಸಿಗಲಿದ್ದು,

ಮತದಾರರ ಯಾರ ಪರವಾದ ತೀರ್ಪು ನೀಡಲಿದ್ದಾನೆ ಎನ್ನುವ ಕುತೂಹಲವೂ ಸಹಜವಾಗಿಯೇ ಹೆಚ್ಚಾಗಿದೆ.  

Row Elections Coming Again in the State: Get Ready to Vote!

ರಾಜ್ಯದ ಪ್ರಮುಖ ಚುನಾವಣೆಗಳು ಬಾಕಿ

ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬೆನ್ನಲ್ಲಿಯೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ.

ಅಲ್ಲದೇ ರಾಜ್ಯದಲ್ಲಿ ಸಾಲು ಸಾಲು ಚುನಾವಣೆಗಳು ನಡೆಯುವುದು ಬಾಕಿ ಉಳಿದಿದೆ.

ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಪ್ರಮುಖವಾಗಿದೆ.

ಅಲ್ಲದೇ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯೂ ಬಾಕಿ ಇದೆ.  

ಅವಧಿ ಮುಕ್ತಾಯ

2021ರ ಏಪ್ರಿಲ್‌ ವೇಳೆಗೆ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅವಧಿ ಮುಕ್ತಾಯವಾಗಿದೆ.

ಈ ಹಿಂದೆ ಇದ್ದ ಸರ್ಕಾರ ಈ  ಚುನಾವಣೆಯನ್ನು  ವಿವಿಧ ಕಾರಣ ನೀಡಿ ಮುಂದೂಡಿತ್ತು.

ಇದೀಗ ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ವಿವಿಧ ಚುನಾವಣೆಗೂ ಭರದ ಸಿದ್ಧತೆ ನಡೆಸಿದೆ.

ಕಳೆದ ಎರಡು ವರ್ಷಗಳಿಂದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದಿಲ್ಲ.

ಮೀಸಲಾತಿ ವಿಚಾರವೂ ಸೇರಿ ಹಲವು ವಿಷಯದ ಕುರಿತು ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಇನ್ನು ಚುನಾವಣೆ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್‌ 5 ಲಕ್ಷ ರೂ.

ದಂಡವನ್ನೂ ಸರ್ಕಾರಕ್ಕೆ ವಿಧಿಸಿದ್ದು, ಈ ದಂಡವನ್ನೂ ಕಟ್ಟಲಾಗಿದೆ.   

ಈ ಸುದ್ದಿಗಳನ್ನೂ ಓದಿ 

ಜೆಡಿಎಸ್‌ ಪಕ್ಷ ವಿಸರ್ಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!

ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು, ಈ ಹೊತ್ತಿನ ಚರ್ಚೆ ಏನು ?