News

ಭಾರತ ಮೂಲದ ರಿಷಿ ಸುನಕ್ ಬ್ರಿಟನ್‌ ಪ್ರಧಾನಿ, ಸಂಭ್ರಮಕ್ಕೆ ಮತ್ತೊಂದು ಕಾರಣ!

25 October, 2022 11:12 AM IST By: KJ Staff
rishi sunak

ಭಾರತೀಯರು ಸಂಭ್ರಮಿಸುವುದಕ್ಕೆ ಈಗ ಮೊತ್ತೊಂದು ಕಾರಣ ಸಿಕ್ಕಿದೆ ಅದೇ ಭಾರತ ಮೂಲದ ರಿಷಿ ಸುನಕ್ (Rishi Sunak) ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವುದು…

ಇದನ್ನೂ ಓದಿರಿ: ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಸಹಜವಾಗಿಯೇ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದೆ. ಅದರಲ್ಲಿಯೂ ಭಾರತದ ಸಂಪ್ರದಾಯವನ್ನು ಅನುಸರಿಸುತ್ತಾರೆ ಎನ್ನುವುದು ಖುಷಿಗೆ ಮತ್ತೊಂದು ಕಾರಣವಾಗಿದೆ. 

ಕೊನೆ ಕ್ಷಣದಲ್ಲಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಪೆನ್ನಿ ಮೊರ್ಡಾಂಟ್  ರೇಸ್ನಿಂದ ಹಿಂದೆ ಸರಿದಿದ್ದರಿಂದಾಗಿ, ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಆಯ್ಕೆ  ಆಗಿದ್ದಾರೆ.

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಾಗಲೇ ರಿಷಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. 

ತಿಂಗಳುಗಳ ಹಿಂದೆಯಷ್ಟೇ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್,  ಲಿಜ್ ಟ್ರಸ್ (Liz Truss) ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿ ಅಧಿಕಾರಕ್ಕೇರಿದ 45ದಿನಗಳಲ್ಲಿ ರಾಜೀನಾಮೆ ಕೊಟ್ಟರು.

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?

ನಾನು ಯಾವ ಭರವಸೆಯ ಮೇಲೆ ಅಧಿಕಾರಕ್ಕೆ ಏರಿದ್ದೆನೋ ಅದನ್ನು ಪೂರೈಸು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಅವರು ವಿದಾಯದ ಭಾಷಣವನ್ನು ಮಾಡಿದ್ದರು.

ಇನ್ನು ಲಿಜ್ ಟ್ರಸ್ ಹೊರ ನಡೆದ ನಂತರ ನೂತನ ಪ್ರಧಾನಿ ಆಯ್ಕೆಗೆ ಸಿದ್ಧತೆ ನಡೆದಿದ್ದು, ರಿಷಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯುವುಗಾಗಿ ಘೋಷಿಸಿದ್ದರು. ಇತ್ತ ಪೆನ್ನಿ ಮೊರ್ಡಾಂಟ್ ಒಬ್ಬರೇ ಸುನಕ್ ಅವರ ಪ್ರತಿಸ್ಪರ್ಧಿಯಾಗಿದ್ದರು.

178 ಟೋರಿ ಸಂಸದರು ಸಾರ್ವಜನಿಕ ಬೆಂಬಲ ವ್ಯಕ್ತಪಡಿಸಿದ್ದರಿಂದ ಕನ್ಸರ್ವೇಟಿವ್ ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ರಿಷಿ ಸುನಕ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಹಲವಾರು ಪ್ರಮುಖ ಕನ್ಸರ್ವೇಟಿವ್ ಸಂಸದರು ರಿಷಿ ಸುನಕ್ ಅವರ ಪ್ರಚಾರ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. 

ರಿಷಿ ಸುನಕ್ ಅವರು ಬ್ರಿಟನ್‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಮೊದಲ ಭಾರತೀಯ ಮೂಲದ ನಾಯಕರಾಗಿದ್ದಾರೆ ಎನ್ನುವುದ ಭಾರತೀಯರ ಖುಷಿಗೆ ಮತ್ತೊಂದು ಕಾರಣ.

ರಿಷಿ ಸುನಕ್ ಭಾರತ ಮತ್ತು ಪೂರ್ವ ಆಫ್ರಿಕಾದಿಂದ ವಲಸೆ ಬಂದ ಶ್ರೀಮಂತ ಹಿಂದೂ ವಂಶಸ್ಥರು. ರಿಷಿ ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.

ಸುನಕ್ ಅವರ ತಂದೆ ಯಶವೀರ್ ಸುನಕ್ ಅವರು ರಾಷ್ಟ್ರೀಯ ಆರೋಗ್ಯ ಸೇವೆಯ ಸಾಮಾನ್ಯ ವೈದ್ಯರು ಮತ್ತು ತಾಯಿ ಉಷಾ ಸುನಕ್ ಅವರು ಕೆಮಿಸ್ಟ್  ಅಂಗಡಿಯನ್ನು ನಡೆಸುತ್ತಿದ್ದರು.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ! 

ಸುನಕ್  ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದಾರೆ.

ಸುನಕ್ ಅವರು 2015 ರಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಮೊದಲು ಸಂಸದರಾಗಿ ಆಯ್ಕೆಯಾಗಿದ್ದು ನಂತರ 2017 ಮತ್ತು 2019 ರಲ್ಲಿ ಮರು ಆಯ್ಕೆಯಾದರು. ಜುಲೈ 2019 ರಲ್ಲಿ,  ಸುನಕ್ ಅವರನ್ನು ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

ಜನವರಿ 2018 ರಲ್ಲಿ ಸ್ಥಳೀಯ ಸರ್ಕಾರದ ಸಚಿವರಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಿದರು. ಫೆಬ್ರವರಿ 2020 ರಲ್ಲಿ, ಅವರು  ವಿತ್ತ ಸಚಿವರಾಗಿದ್ದು ಈ ವರ್ಷದ ಜುಲೈವರೆಗೆ  ಅಧಿಕಾರದಲ್ಲಿದ್ದರು.

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್‌ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪ‍ಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬ್ರಿಟನ್‌ನ ಸುಮಾರು 2 ಶತಮಾನಗಳ ಇತಿಹಾಸದಲ್ಲಿ, 42 ವರ್ಷದ ರಿಷಿ ಅವರು ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

rishi sunak

ರಿಷಿ ಸುನಕ್‌ ಕುರಿತ ಪ್ರಮುಖ ಅಂಶಗಳು

  • ರಿಷಿ ಸುನಕ್‌ ಅವರ ತಂದೆ ತಾಯಿಯರಿಬ್ಬರೂ ಭಾರತೀಯ ಮೂಲದವರು. ಸುನಕ್ ಅವರ ಪೋಷಕರು, ಔಷಧ ತಯಾರಕರಾಗಿದ್ದರು. 1960ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದರು.
  • ರಿಷಿ ಸುನಕ್ ಅವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
  • ರಿಷಿ ಸುನಕ್ ಅವರು ಯಾರ್ಕ್‌ಷೈರ್‌ನಿಂದ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗೆ ಪ್ರಮಾಣವಚನ ಸ್ವೀಕರಿಸಿದ ಮೊದಲ ಬ್ರಿಟನ್‌ ಸಂಸದ ಎನಿಸಿದ್ದರು.
  • ರಿಷಿ ಸುನಕ್ ಆಗಾಗ್ಗೆ ಅವರ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಕುಟುಂಬವು ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಆಗಾಗ್ಗೆ ನೆನಪಿಸುವುದಾಗಿ ಹೇಳಿಕೊಂಡಿದ್ದಾರೆ.
  • 2022 ರ ಬೇಸಿಗೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಯ ಪ್ರಚಾರದ ಸಮಯದಲ್ಲಿ, ರಿಷಿ ಸುನಕ್ ಅವರ ಅದ್ದೂರಿ ಮನೆ, ದುಬಾರಿ ಸೂಟುಗಳು ಮತ್ತು ಬೂಟುಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಟೀಕೆಗಳನ್ನು ಎದುರಿಸಿದ್ದರು. ಈ ಒತ್ತಡದ ಸಂದರ್ಭಗಳಲ್ಲಿ ಭಗವದ್ಗೀತೆಯು ಅವರನ್ನು ರಕ್ಷಿಸುತ್ತದೆ ಮತ್ತು ಕರ್ತವ್ಯನಿಷ್ಠರಾಗಿರಲು ನೆನಪಿಸುತ್ತದೆ ಎಂದು ರಿಷಿ ಹೇಳಿಕೆ ಹಂಚಿಕೊಂಡಿದ್ದಾರೆ.
  • ಫಿಟ್ ಆಗಿರಲು, ರಿಷಿ ಸುನಕ್ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ.
  • ರಿಷಿ ಸುನಕ್ ಅವರು 700 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಮತ್ತು ಯುಕೆಯಲ್ಲಿನ ಆಸ್ತಿಗಳಲ್ಲಿ ಹೆಚ್ಚಿನದಾಗಿ ಹೂಡಿಕೆ ಮಾಡಿದ್ದಾರೆ. ಯಾರ್ಕ್‌ಷೈರ್‌ನಲ್ಲಿ ಮಹಲು ಹೊಂದಿದ್ದಲ್ಲದೆ, ರಿಷಿ ಮತ್ತು ಅವರ ಪತ್ನಿ ಅಕ್ಷತಾ ಮಧ್ಯ ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿ ಆಸ್ತಿ ಹೊಂದಿದ್ದಾರೆ.