News

ಡಿಎಂಎಚ್‌–11 ಕುಲಾಂತರಿ ಸಾಸಿವೆ ತಡೆಗೆ ಮನವಿ: ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚನೆ!

04 November, 2022 5:03 PM IST By: Hitesh
Mustard

ಕುಲಾಂತರಿ ಸಾಸಿವೆ (ಡಿಎಂಎಚ್‌–11)ಗೆ ವಿರೋಧ ವ್ಯಕ್ತವಾಗಿದ್ದು, ಸದ್ಯ ಇದಕ್ಕೆ ನೀಡಿರುವ ಅನುಮತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.  

ಮಧುಮೇಹ ತಡೆಗೆ ಕೊತ್ತಂಬರಿ ಸಹಕಾರಿ, ಹೇಗೆ ಗೊತ್ತೆ!

 

ಸದ್ಯ ಕುಲಾಂತರಿ ತಳಿ ಪರಿಶೀಲನಾ ಸಮಿತಿ –ಜಿಇಎಸಿ ನಿರ್ಧಾರಕ್ಕೆ ಸಂಬಂಧಿಸಿ, ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮೌಖಿಕ ಸೂಚನೆಯನ್ನು ನೀಡಿದೆ.

ಜಿಇಎಸಿಯ ಶಿಫಾರಸ್ಸನ್ನು ಅನುಮೋದಿಸಿ ಕೇಂದ್ರ ಸರ್ಕಾರವು ಇದೇ ಅಕ್ಟೋಬರ್ ಕೊನೆಯ ವಾರದಲ್ಲಿ ಆದೇಶ ನೀಡಿತ್ತು. ಡಿಎಂಎಚ್‌–11 ಬಿಡುಗಡೆ ಮಾಡದಂತೆ 2016ರಲ್ಲಿ ಅರುಣಾ ರಾಡ್ರಿಗಸ್ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದ  ಅರ್ಜಿ  ವಿಚಾರಣೆ ನಡೆಯುತ್ತಿದೆ.

ಮೂಲ ಅರ್ಜಿಗೆ ಪೂರಕವಾಗಿ ಅರುಣಾ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಪೀಠವು ಈ ರೀತಿಯ ನಿರ್ದೇಶನವನ್ನು ನೀಡಿದೆ.  

ವಾದ ವಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. 

ಕುಲಾಂತರಿ ಸಾಸಿವೆಗೆ ಹಲವರ ವಿರೋಧ

ಕುಲಾಂತರಿ ಹೈಬ್ರಿಡ್ ಸಾಸಿವೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವುದು ಶುದ್ಧ ಸುಳ್ಳು. ಇದು ಆಧಾರರಹಿತ ಮತ್ತು ದಿಕ್ಕುತಪ್ಪಿಸುವ ಯೋಜನೆ ಇಂತಹ ಕುಲಾಂತರಿ

ಸಾಸಿವೆ ಬೆಂಬಲಿಸುವ ಮೂಲಕ ಜಿಇಎಸಿ ಬೇಜವಾಬ್ದಾರಿ ತೋರಿದೆ ಎಂದು ಸ್ವದೇಶಿ ಜಾಗರಣ್‌ ಮಂಚ್‌ ಈಚೆಗೆ ವಿರೋಧ ವ್ಯಕ್ತಪಡಿಸಿತ್ತು.

ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕುಲಾಂತರಿ (GM) ಹೈಬ್ರಿಡ್ ಸಾಸಿವೆ ಬೆಳೆಯಲು ಪರಿಸರ ಸಚಿವಾಲಯ ಅನುಮತಿ ನೀಡಿರುವುದಕ್ಕೆ RSS ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪರಿಸರ ಸಚಿವಾಲಯದ ಕುಲಾಂತರಿ ನಿಯಂತ್ರಕ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ ಅನುಮತಿಗೆ ಆಸ್ಪದ ನೀಡಿರುವುದು ಅತ್ಯಂತ ಅಪಾಯಕಾರಿಯಾಗಿದೆ.

ಕುಲಾಂತರಿ ಸಾಸಿವೆಗೆ ಸದ್ಯಕ್ಕಲ್ಲ ಮುಂದೆಯೂ ಕೂಡ ಅನುಮತಿ ನೀಡುವುದಿಲ್ಲವೆಂದು ಖಾತ್ರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಎಸ್‌ಜಿಎಂ ಒತ್ತಾಯಿಸಿದೆ.

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!

 

ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್ ಅವರಿಗೆ ಬರೆದಿರುವ ಪತ್ರದಲ್ಲಿ ಕುಲಾಂತರಿ ಹೈಬ್ರಿಡ್ ಸಾಸಿವೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವುದು ಶುದ್ಧ ಸುಳ್ಳು.

ಇದು ಆಧಾರರಹಿತ ಮತ್ತು ದಿಕ್ಕುತಪ್ಪಿಸುವ ಯೋಜನೆ ಇಂತಹ ಕುಲಾಂತರಿ ಸಾಸಿವೆ ಬೆಂಬಲಿಸುವ ಮೂಲಕ ಜಿಇಎಸಿ ಬೇಜವಾಬ್ದಾರಿ ತೋರಿದೆ' ಎಂದು ಎಸ್‌ಟಿಎಂ ಆರೋಪಿಸಿದೆ.

ಸಾರ್ವಜನಿಕ ವಲಯಕ್ಕೆ ಹಿಂಬಾಗಿಲಿನಿಂದ ಪ್ರವೇಶಿಸಲು ಕುಲಾಂತರಿ ಸಾಸಿವೆಗೆ ಅನುಮತಿಸಿರುವುದು ಸರಿಯಲ್ಲ

ಈ ಹಿಂದೆ ಕುಲಾಂತರಿ ಸಾಸಿವೆ ಬೆಳೆ ಪರವಾಗಿ ಜಿಇಎಸಿ ಶಿಫಾರಸು ಮಾಡಿದಾಗ ಕಳವಳ ವ್ಯಕ್ತಪಡಿಸಿ, ನಿರ್ಧಾರ ಮರುಪರಿಶೀಲನೆಗೂ ಒತ್ತಾಯಿಸಲಾಗಿತ್ತು.

ಆದ್ದರಿಂದ ಆಗ ಅನುಮತಿ ನೀಡಿರಲಿಲ್ಲ. ಆದರೆ, ಈಗ ಕುಲಾಂತರಿ ಬೆಳೆ ಸಂಶೋಧಕರ ಜತೆಗೆ ಜಿಇಎಸಿ ಕೈಜೋಡಿಸಿದೆ. ಆಡಳಿತದಲ್ಲಿ ರಾಜಿಯಾಗಿದೆ.

ಕುಲಾಂತರಿ ಸಾಸಿವೆ ವಿಚಾರದಲ್ಲೂ ಇಂತಹದೇ ಬೆಳವಣಿಗೆ ಆಗಿದೆ' ಎಂದು ಎಸ್‌ಟಿಎಂ ಸಹ ಸಂಚಾಲಕ ಅಶ್ವಾನಿ ಮಹಾಜನ್ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಕುಲಾಂತರಿ ಸಾಸಿವೆ ಬೆಳೆಗೆ ಜಿಇಎಸಿಯಿಂದ ಅನುಮತಿ ಪಡೆದಿರುವ ತಳಿ ವಿಜ್ಞಾನಿ ದೀಪಕ್ ಪೆಂಟಲ್ ಅವರ ಹೆಸರನ್ನು ಉಲ್ಲೇಖಿಸಿರುವ ಮಹಾಜನ್,

'ಪೆಂಟಲ್ ಮತ್ತು ಅವರ ತಂಡ ಪ್ರಚುರಪಡಿಸುತ್ತಿರುವ ಡಿಎಂಎಚ್-11 ರೀತಿಯದ್ದೇ ಆದ ಕುಲಾಂತರಿ ಹೈಬ್ರಿಡ್ ಸಾಸಿವೆಗೆ ವಾಣಿಜ್ಯ ಅನುಮತಿಗಾಗಿ ಪ್ರೊಆಗೊ ಸೀಡ್ಸ್ ಕಂಪನಿ (ಬೇಯರ್ ಸಬ್ಸಿಡಿ ಪಡೆಯುವ ಕಂಪನಿ) 2002ರಲ್ಲಿ ಅರ್ಜಿ ಸಲ್ಲಿಸಿತ್ತು.