News

10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

26 October, 2022 10:56 AM IST By: Kalmesh T
Recruitment in KMF 2022

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು (KMF) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

NHIDCL Recruitment 2022: ಪದವೀಧರರಿಗೆ ಇಲ್ಲಿವೆ ಕೇಂದ್ರ ಸರ್ಕಾರದ ಉದ್ಯೋಗಾವಕಾಶ, ₹67,000 ಸಂಬಳ

ಉದ್ಯೋಗದ ಹುಡುಕಾಟದಲ್ಲಿ ತೊಡಗಿರುವ ಯುವಜನತೆಗೆ ಇಲ್ಲಿದೆ ಉತ್ತಮ ಅವಕಾಶ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ಬೆಂಗಳೂರು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

487 ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳಿವೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆ?

  • ಹಿರಿಯ ಉಪ ನಿರ್ದೇಶಕ (ವಿವಿಧ ವಿಭಾಗ): 03
  • ಉಪ ನಿರ್ದೇಶಕ (ವಿವಿಧ ವಿಭಾಗ): 16
  • ವೈದ್ಯಾಧಿಕಾರಿ : 01
  • ಬಯೋ ಸೆಕ್ಯೂರಿಟಿ ಆಫೀಸರ್ : 01
  • ಸಹಾಯಕ ನಿರ್ದೇಶಕರು (ವಿವಿಧ ವಿಭಾಗ): 39
  • ವಿಜಿಲೆನ್ಸ್‌ ಆಫೀಸರ್ : 01
  • ಸುರಕ್ಷತಾ ಅಧಿಕಾರಿ : 01
  • ಕಾರ್ಮಿಕ ಕಲ್ಯಾಣ / ಕಾನೂನು ಅಧಿಕಾರಿ : 01
  • ಅಧೀಕ್ಷಕ (ಖರೀದಿ / ಉಗ್ರಾಣ) (ವಿವಿಧ ವಿಭಾಗ): 20
  • ಹಿರಿಯ ಕೆಮಿಸ್ಟ್‌(ವಿವಿಧ ವಿಭಾಗ) : 6
  • ಲೆಕ್ಕ ಸಹಾಯಕ ದರ್ಜೆ-1 : 13
  • ಡೈರಿ ಮೇಲ್ವಿಚಾರಕ ದರ್ಜೆ-2 : 01

ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ? 

  • ಆಡಳಿತ ಸಹಾಯಕ ದರ್ಜೆ-2: 40
  • ಲೆಕ್ಕ ಸಹಾಯಕ ದರ್ಜೆ-2 : 30
  • ಮಾರುಕಟ್ಟೆ ಸಹಾಯಕ ದರ್ಜೆ-2: 23
  • ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ): 30
  • ಹಿರಿಯ ತಾಂತ್ರಿಕ : 10
  • ಶೀಘ್ರಲಿಪಿಗಾರ ದರ್ಜೆ-02: 01
  • ಕಿರಿಯ ಸಿಸ್ಟಂ ಆಪರೇಟರ್ : 14
  • ಹಿರಿಯ ಕೋ-ಆರ್ಡಿನೇಟರ್ : 06
  • ಕಿರಿಯ ತಾಂತ್ರಿಕ (ವಿವಿಧ ಟ್ರೇಡ್): 200
  • ಕೋ-ಆರ್ಡಿನೇಟರ್ : 10

ಭಾರತ ಮೂಲದ ರಿಷಿ ಸುನಕ್ ಬ್ರಿಟನ್‌ ಪ್ರಧಾನಿ, ಸಂಭ್ರಮಕ್ಕೆ ಮತ್ತೊಂದು ಕಾರಣ!

ನೇಮಕಾತಿ ಪ್ರಕಟಣೆ

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ/ ಐಟಿಐ / ಡಿಪ್ಲೊಮ / ಡಿಗ್ರಿ ಪಾಸ್‌ ಮಾಡಿರಬೇಕು. ಉನ್ನತ ಮಟ್ಟದ ಹುದ್ದೆಗಳಿಗೆ ವಿದ್ಯಾರ್ಹತೆ ಜತೆಗೆ, ಕನಿಷ್ಠ ಕಾರ್ಯಾನುಭವಗಳನ್ನು ಹೊಂದಿರಬೇಕು.

ಅರ್ಜಿಯನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಬೇಕು. ಇತರೆ ಯಾವುದೇ ರೀತಿ ಸಲ್ಲಿಸಲು ಅವಕಾಶ ಇಲ್ಲ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು.

ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದಲ್ಲಿ, ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ ವಿವರ

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ- ರೂ.500

ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ- ರೂ.1000

ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ! 

ಅರ್ಜಿ ಸಲ್ಲಿಕೆಯ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-10-2022

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-11-2022

ಇದರ ಕುರಿತಾದ ಹೆಚ್ಚಿನ ಮಾಹಿತಿಗೆ ಮುಂದಿನ ಲಿಂಕ್‌ನ್ನು ಪರಿಶೀಲಿಸಬಹುದು: 

https://recruitapp.in/kmf2022/uploads/files/notification/1maunw.pdf