News

ಆರ್ಥಿಕ ಹಿಂಜರಿತ ಸಾಧ್ಯತೆ, ಹಣಕಾಸಿನ ಬಗ್ಗೆ ಎಚ್ಚರ ಇರಲಿ: ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌!

21 November, 2022 1:55 PM IST By: Hitesh
Recession likely, be careful about finances: Amazon founder Jeff Bezos

ಕೆಲವು ದಿನಗಳ ಮಟ್ಟಿಗೆ ಹೆಚ್ಚು ವೆಚ್ಚವನ್ನು ಮಾಡಬೇಡಿ, ಹಣ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಖುದ್ದು ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ (Amazon founder Jeff Bezos) ಹೇಳಿದ್ದಾರೆ.

ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ!

ಹೌದು ಅನವಶ್ಯಕ ಮತ್ತು ದುಬಾರಿ ವಸ್ತುಗಳ ಖರೀದಿಗೆ ಬ್ರೇಕ್‌ ಹಾಕಿ ಎಂದು ಖುದ್ದು ಅಮೆಜಾನ್‌ನ (Amazon)   ಸಂಸ್ಥಾಪಕ ಜೆಫ್‌ ಬೆಜೋಸ್‌ ತಿಳಿಸಿದ್ದಾರೆ.

Ration card: “ದತ್ತಾ” ಬದಲು “ಕುತ್ತಾ”; ಅಧಿಕಾರಿ ಮುಂದೆ ಆತ ಮಾಡಿದ್ದೇನು ಗೊತ್ತಾ! 

ಜಾಗತಿಕ ಹಿಂಜರಿತದ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಹೀಗಾಗಿ, ತಾತ್ಕಾಲಿಕವಾಗಿ ದೊಡ್ಡ ಮೊತ್ತದ ಖರ್ಚುಗಳಿಗೆ ಕಡಿವಾಣ ಹಾಕಿ ಎಂದು ಜೆಫ್‌ ಬೆಜೋಸ್‌ ಅವರು ಗ್ರಾಹಕರು ಹಾಗೂ ಉದ್ಯಮ ಸಂಸ್ಥೆಗಳನ್ನು  ಎಚ್ಚರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಿಮ್ಮ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ.

ಮುಂದಿನ ತಿಂಗಳುಗಳಲ್ಲಿ ಅನಗತ್ಯ ಖರ್ಚುಗಳನ್ನು ಮಾಡಲೇಬೇಡಿ. ಅಲ್ಲದೇ ಹೊಸ ಕಾರು, ಟಿ.ವಿ, ಫ್ರಿಡ್ಜ್‌ಗಳು ಸೇರಿದಂತೆ ಯಾವುದೇ ದುಬಾರಿ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

124 ಬಿಲಿಯನ್‌ ಡಾಲರ್‌ ಸಂಪತ್ತು ದಾನಕ್ಕೆ ಮುಂದಾದ ಅಮೆಜಾನ್‌ ಸಂಸ್ಥಾಪಕ ಬೆಜೋಸ್‌! 

ಸಣ್ಣ ಉದ್ಯಮಗಳಲ್ಲಿ ಹಣಕಾಸಿನ ಏರುಪೇರಾದ ದೊಡ್ಡ ಬದಲಾವಣೆಗಳು ಆಗಲಿವೆ. ಹೀಗಾಗಿ, ರಿಸ್ಕ್‌ ತೆಗೆದುಕೊಳ್ಳುವು ಬೇಡ. ಕೆಲವು ರಿಸ್ಕ್‌ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದರೆ, ಸಣ್ಣ ಉದ್ಯಮದಲ್ಲಿ ಅಗಾಧ ಬದಲಾವಣೆ ಉಂಟಾಗಲಿದೆ ಎಂದಿದ್ದಾರೆ.  

Recession likely, be careful about finances: Amazon founder Jeff Bezos

ವಿಶ್ವದಲ್ಲಿ ಇದೀಗ ಆರ್ಥಿಕ ಪರಿಸ್ಥಿತಿ ಸರಿಇಲ್ಲ. ಕೆಲವು ನಿರ್ದಿಷ್ಟ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಹಲವಾರು ಕಂಪನಿಗಳು ಕೆಲಸದಿಂದ ಉದ್ಯೋಗಿಗಳನ್ನು ವಜಾ ಮಾಡುತ್ತಿವೆ.  

ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಆರ್ಥಿಕ ಹಿಂಜರಿತದ ಸಂಕೇತ. ಹೀಗಾಗಿ ಹಣ ಉಳಿಸಿ. ರಜಾ ದಿನಗಳಲ್ಲಿ ದುಂದು ವೆಚ್ಚ ಬೇಡ ಎಂದು ಬೆಜೋಸ್‌ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟ್ವಿಟರ್‌, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಸೇರಿದಂತೆ ಹಲವು ಬೃಹತ್‌ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿವೆ.

ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಉದ್ಯೋಗ ಕಳೆದುಕೊಳ್ಳುವ ಆತಂಕವೂ ಶುರುವಾಗಿದೆ. ಈ ಎಲ್ಲದರ ನಡುವೆ ಆರ್ಥಿಕ ವೆಚ್ಚ ಮಾಡಬೇಡಿ ಎಂದು ಎಚ್ಚರಿಸಿರುವುದು ಆಘಾತಕಾರಿ ಆಗಿದೆ.   

ರಾಸುಗಳಲ್ಲಿ ಕೆಚ್ಚಲು ಬಾವು ಕಾಯಿಲೆ: ಪರೀಕ್ಷೆಗೆ ನಾಲ್ಕು ಹನಿ ಹಾಲು ಸಾಕು!