News

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ?

26 October, 2022 2:53 PM IST By: Kalmesh T
Ration card big Update: now u can get ration by anywhere

ದೀಪಾವಳಿ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿದಾರರಿಗೆ ಸಂಗತಸದ ಸುದ್ದಿಯೊಂದನ್ನು ನೀಡಿದ್ದಾರೆ. ಇದರಿಂದ ನಿಮ್ಮ ಅರ್ಧ ಟೆನ್ಷನ್‌ ಕಡಿಮೆಯಾಗಲಿದೆ. ಇಲ್ಲಿದೆ ವಿವರ

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

ಭಾರತದಲ್ಲಿ ಜನಸಾಮಾನ್ಯರಿಗೆ ಆರ್ಥಿಕವಾಗಿ ಸಹಾಯ ಮಾಡಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಚಿತ ಪಡಿತರ ಮತ್ತು ಅಗ್ಗದ ಪಡಿತರ ಯೋಜನೆಯನ್ನು ನಡೆಸುತ್ತಿವೆ.

ಇದರಿಂದ ಜನರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಅನುಕ್ರಮದಲ್ಲಿ ಈ ಪಡಿತರ ಯೋಜನೆಯ ಜೊತೆಗೆ ದೇಶದ ಕೋಟ್ಯಂತರ ಜನರಿಗೆ ದೊಡ್ಡ ಉಡುಗೊರೆಯನ್ನು ನೀಡಲು ಯುಐಡಿಎಐ (UIDAI) ಘೋಷಿಸಿದೆ.

ಪಡಿತರ ಚೀಟಿಯ ಸಹಾಯದಿಂದ ನೀವು ಉಚಿತ ಪಡಿತರ ಮತ್ತು ಅಗ್ಗದ ಪಡಿತರ ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು.

ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!

ವಾಸ್ತವವಾಗಿ UIDAI ಸಂಸ್ಥೆಯು ದೇಶದ ಯಾವುದೇ ಮೂಲೆಯಲ್ಲಿ ಉಳಿದುಕೊಂಡು ಪಡಿತರ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು ಎಂದು ತನ್ನ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ತಿಳಿಸಿದೆ.

ಯುಐಡಿಎಐ ಯೋಜನೆಯಿಂದಾಗಿ ತಮ್ಮ ಮನೆಗಳಿಂದ ದೂರ ಬಾಡಿಗೆಯಲ್ಲಿ ವಾಸಿಸುವ ಜನರು ಕೂಡ ಈಗ ಇದರ ಪ್ರಯೋಜನ ಪಡೆಯಬಹುದು.

ಸರಕಾರ ನೀಡುವ ಪಡಿತರ ಸೌಲಭ್ಯವನ್ನು ಜನರು ಈಗ ತಮ್ಮ ಆಧಾರ್ ಕಾರ್ಡ್ ತೋರಿಸಿ ಸರ್ಕಾರಿ ಪಡಿತರ ಅಂಗಡಿಯಿಂದ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದು.

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

UIDAI ಟ್ವೀಟ್

ಈ ಸುದ್ದಿಯನ್ನು ಯುಐಡಿಎಐ (UIDAI) ತನ್ನ ಅಧಿಕೃತ ಟ್ವಿಟರ್‌ನಲ್ಲಿ " ಒಂದು ರಾಷ್ಟ್ರ, ಒಂದು ಪಡಿತರ ಚೀಟಿ " ಅಭಿಯಾನದ ಅಡಿಯಲ್ಲಿ  “ಆಧಾರ್ ಸಹಾಯದಿಂದ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರವನ್ನು ತೆಗೆದುಕೊಳ್ಳಬಹುದುಎಂದು ಬರೆದುಕೊಂಡಿದೆ.

ಇದಕ್ಕಾಗಿ ನೀವು ಮಾಡಬೇಕಾಗಿರುವುದು ನಿಮ್ಮ ಹತ್ತಿರದ ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಆಧಾರ್ ಅನ್ನು ನವೀಕರಿಸಿ.

ಪಡಿತರಕ್ಕಾಗಿ ಈ ಕೆಲಸ ಮಾಡಬೇಕಾಗುತ್ತದೆ

ದೇಶದಲ್ಲಿ ಎಲ್ಲಿಯಾದರೂ ಪಡಿತರವನ್ನು ಪಡೆಯಲು ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಅನ್ನು ನವೀಕರಿಸಬೇಕು.

ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗದಿದ್ದರೆ , UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಆಧಾರ್ ಕೇಂದ್ರವನ್ನು ಹುಡುಕಬಹುದು .

ಇದಲ್ಲದೆ ಟೋಲ್ ಫ್ರೀ ಸಂಖ್ಯೆ 1947 ಅನ್ನು ಸಂಪರ್ಕಿಸುವ ಮೂಲಕ ನೀವು ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.