News

Rain Update: ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆ ಸಾಧ್ಯತೆ..!

29 June, 2022 11:20 AM IST By: Kalmesh T
Rain Update : Heavy rains in Karnataka

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:  ಬ್ರೇಕಿಂಗ್‌: ರಾಜ್ಯದ ಜನತೆಗೆ ಕರೆಂಟ್‌ ಶಾಕ್‌: ಜುಲೈ 1ರಿಂದ ವಿದ್ಯುತ್‌ ದರ ಏರಿಕೆ!

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Heavy rains in Karnataka) ಸಾಧ್ಯತೆ ಇದ್ದು, 2 ದಿನ ಆರೆಂಜ್ ಅಲರ್ಟ್  (Orrange Alert ) ಘೋಷಿಸಲಾಗಿದೆ.

ಗುಡುಗು ಮಿಂಚು ಸಹಿತ 115 ಮಿಮೀ.ಯಿಂದ 204 ಮಿಮೀ.ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುಡ್‌ನ್ಯೂಸ್‌: 5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥ..!

ರಾಜ್ನಯದ ಇತರೆ ನಗರಗಳ ಹವಾಮಾನ ವರದಿ:

ಬೆಂಗಳೂರು: 28-19

ಮಂಗಳೂರು: 28-24

ಶಿವಮೊಗ್ಗ: 27-21

ಬೆಳಗಾವಿ: 26-21

ಮೈಸೂರು: 28-21

ಮಂಡ್ಯ: 29-21

ಕೊಡಗು: 22-18

ರಾಮನಗರ: 29-21

ಹಾಸನ: 26-19

ಚಾಮರಾಜನಗರ: 29-21

ಚಿಕ್ಕಬಳ್ಳಾಪುರ: 29-20

ಕೋಲಾರ: 31-21

ತುಮಕೂರು: 28-20

ಉಡುಪಿ: 28-24

ಕಾರವಾರ: 28-25

40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?

ಚಿಕ್ಕಮಗಳೂರು: 24-19

ದಾವಣಗೆರೆ: 29-22

ಚಿತ್ರದುರ್ಗ: 29-21

ಹಾವೇರಿ: 28-22

ಬಳ್ಳಾರಿ: 33-23

ಗದಗ: 29-22

ಕೊಪ್ಪಳ: 31-23

ರಾಯಚೂರು: 34-24

ಯಾದಗಿರಿ: 33-24

ವಿಜಯಪುರ: 31-23

ಬೀದರ್: 30-22

ಕಲಬುರಗಿ: 32-23

ಬಾಗಲಕೋಟೆ: 31-23