News

ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ!

21 November, 2022 12:53 PM IST By: Hitesh
Areca palm

ಈಚೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದಲ್ಲಿ ಚಳಿಗಾಲದಲ್ಲೂ ಮಳೆ ಆಗಿತ್ತು.

Ration card: “ದತ್ತಾ” ಬದಲು “ಕುತ್ತಾ”; ಅಧಿಕಾರಿ ಮುಂದೆ ಆತ ಮಾಡಿದ್ದೇನು ಗೊತ್ತಾ! 

ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚಳಿಯ ವಾತಾವರಣ ಇರುತ್ತದೆ. ಆದರೆ, ಈ ಬಾರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗಿದೆ.

ಅದರಲ್ಲಿಯೂ ಅಡಿಕೆ (Areca palm) ಬೆಳೆಯುವ ಪ್ರದೇಶದಲ್ಲಿ ಮಳೆಯಿಂದ ರೈತರಿಗೆ ಅಪಾರ ನಷ್ಟವುಂಟಾಗಿದೆ.  

ವರುಣನ ಆರ್ಭಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಡಿಕೆಗೆ ಎಲೆಚುಕ್ಕಿ ರೋಗದಿಂದ ಮೂಲದಲ್ಲಿಯೇ ಸಾಕಷ್ಟು ಸಂಕಟವುಂಟಾಗಿದೆ.

ರೈತರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದರೆ ಜೋಕೆ: ಆರ್‌. ಅಶೋಕ್‌ ಎಚ್ಚರಿಕೆ!  

ಇದೀಗ ಮಳೆಯಿಂದ ಮತ್ತಷ್ಟು ಬೆಳೆ ಹಾನಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲೂ ಈ ಬಾರಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಮುಂಗಾರು, ಹಿಂಗಾರು ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಪರಿಣಾಮ ಕೆಲವೆಡೆ ಫಸಲು ನೀಡುತ್ತಿದ್ದ ಮರಗಳು ಧರೆಗುರುಳುತ್ತಿದೆ.

ಈಗಾಗಲೇ ಎಲೆಚುಕ್ಕಿ ರೋಗದಿಂದ ಸಂಕಷ್ಟ ಎದುರಿಸಿರುವ ರೈತರು ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಕ್ಕಂತಾಗಿದೆ. ಅಡಿಕೆ ಹಿಂಗಾರು ಹೊಡೆಯುವ ವೇಳೆ ಧಾರಾಕಾರ ಮಳೆ ಬಂದ ಕಾರಣ ಹರಳುಗಳು ಉದುರಿ ಹೋಗಿವೆ.

ಒಂದು ಎಕರೆಗೆ ಕನಿಷ್ಠ ಏಳರಿಂದ ಎಂಟು ಕ್ವಿಂಟಾಲ್ ಒಣ ಅಡಿಕೆ ಫಸಲು ಸಿಗುತ್ತಿತ್ತು. ಆದರೆ, ಇದೀಗ ಎರಡು ಕ್ವಿಂಟಲ್ ಅಡಿಕೆ‌ ಕಡಿಮೆ ಬಂದಿದೆ.

ಶೇಕಡಾ 35ರಿಂದ 40ರಷ್ಟು ನಷ್ಟ ಪೋಲಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ರೈತರಿಗೆ ಎಕರೆಗೆ ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.

ಅಡಿಕೆ ಧಾರಣೆ ಉತ್ತಮವಾಗಿದ್ದು, 47 ಸಾವಿರ ರೂಪಾಯಿಯಿಂದ 52 ಸಾವಿರ ರೂಪಾಯಿವರೆಗೆ ಪ್ರತಿ ಕ್ವಿಂಟಾಲ್‌ಗೆ ಧಾರಣೆ ಇದೆ‌.

ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!  

Rain: difficult for Areca palm farmers!

ಅಡಿಕೆ ಬೆಳೆಗಾರರು ಉತ್ತಮ ಧಾರಣೆ ಇದ್ದರೂ ಫಸಲು ಕಡಿಮೆ ಬಂದ ಕಾರಣ ಈ ವರ್ಷ ಹೆಚ್ಚಿನ ಲಾಭ ಸಿಕ್ಕಿಲ್ಲ.

ಇನ್ನು ಗೊಬ್ಬರ, ಮಳೆ ನೀರು ತೋಟಕ್ಕೆ ನುಗ್ಗಿದ ಕಾರಣ ನೀರಿನಲ್ಲೇ ಅಡಿಕೆ ಕೊಯ್ಲು ತೆಗೆದಿದ್ದಾರೆ. ಇದಕ್ಕೂ ಹೆಚ್ಚಿನ ಹಣ ವೆಚ್ಚವಾದಂತಾಗಿದೆ.  

 ಅಡಿಕೆಯನ್ನು ಮೂರರಿಂದ ನಾಲ್ಕು ಹಂತಗಳಲ್ಲಿ ಕೊಯ್ಲು ತೆಗೆಯಲಾಗುತ್ತದೆ.

ಈ ಬಾರಿ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಅಡಿಕೆ ಫಸಲು ಉತ್ತಮವಾಗಿದ್ದರೂ, ಕಾಯಿ ಮಾತ್ರ ತೂಕ ಬಂದಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ.

Railways Plan: ರೈಲ್ವೆ ಯೋಜನೆಗಳ ತ್ವರಿತ ಜಾರಿಗೆ ಸಮಿತಿ ರಚನೆ!

Rain: difficult for Areca palm farmers!

ಕಳೆದ ವರ್ಷ ಅಡಿಕೆ ಬೆಳೆ ಹೆಚ್ಚಿನ ಲಾಭ ಬಂದಿರಲಿಲ್ಲ. ಈ ವರ್ಷ ಫಸಲು ಕಡಿಮೆ ಬಂದಿದೆ. ತೋಟಕ್ಕೆ ಗೊಬ್ಬರ, ಟ್ರ್ಯಾಕ್ಟರ್, ಸ್ವಚ್ಛತೆ, ಅಡಿಕೆ ಕೊಯ್ಲು,

ಕಾರ್ಮಿಕರಿಗೆ ವೇತನ ಸೇರಿದಂತೆ ಸಾಕಷ್ಟು ಖರ್ಚು ಆಗಿದೆ. ಈಗ ಎಲ್ಲವೂ ನೀರಿನಲ್ಲಿ ಪೋಲಾದಂತಾಗಿದೆ ಎನ್ನುವುದು ರೈತರ ಅಳಲಾಗಿದೆ.   

ಸದ್ಯ ಅಡಿಕೆ‌ ಫಸಲು ಕಡಿಮೆ ಬಂದಿದೆ. ಮಂಡಿಗೆ ಬರುವ ಅಡಿಕೆ ನೋಡಲು ಉತ್ತಮ ಫಸಲು ಬಂದ ರೀತಿ ಕಾಣುತ್ತದೆ. ತೂಕ ಮಾಡಿದರೆ ಕಡಿಮೆ ಬರುತ್ತಿದೆ. ಮಳೆ ಹೆಚ್ಚು ಸುರಿದ ಪರಿಣಾಮ ಇಳುವರಿ ಕುಂಠಿತವಾಗಿದೆ‌.   

ಪ್ರತಿ ಕ್ವಿಂಟಲ್ ಗೆ 50 ಸಾವಿರ ರೂಪಾಯಿ ದಾಟಿದರೆ ಸ್ವಲ್ಪ ಮಟ್ಟಿಗೆ ಲಾಭ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಅನಿರೀಕ್ಷಿತ ಮಳೆಯಿಂದಾಗಿ ಅಡಿಕೆ ಬೆಳಗಾರರು ಅಷ್ಟೇ ಅಲ್ಲ, ಮೆಕ್ಕೆಜೋಳ, ಭತ್ತ, ತರಕಾರಿ, ರಾಗಿ ಸೇರಿದಂತೆ ಎಲ್ಲಾ ಬೆಳೆಗಳು ನೀರುಪಾಲಾಗಿವೆ.

ಅಡಿಕೆ ಬೆಳೆಗಾರರೂ ಸಹ ನಷ್ಟ ಅನುಭವಿಸಿದ್ದಾರೆ. ಮಾತ್ರವಲ್ಲ ಶೇಕಡಾ 25 ರಷ್ಟು ಅಡಿಕೆ ಹಾಳಾಗಿದ್ದರೆ, ತೂಕ ಬಂದರೂ ಇಳುವರಿ ಕಡಿಮೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದಾಗಿ ಟೊಮೆಟೊ ಮತ್ತು ಆಲೂಗಡ್ಡೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿರುವುದು ಸಹ ವರದಿ ಆಗಿತ್ತು. 

Railways Plan: ರೈಲ್ವೆ ಯೋಜನೆಗಳ ತ್ವರಿತ ಜಾರಿಗೆ ಸಮಿತಿ ರಚನೆ!