News

ತಿರುಪತಿ ತಿರುಮಲದಲ್ಲಿರುವ ಆಸ್ತಿ ಮೌಲ್ಯ ಐದು ಸಾವಿರ ಕೋಟಿ! 10.25 ಟನ್‌ ಬಂಗಾರ, ಒಟ್ಟಾರೆ ಆಸ್ತಿ ಎಷ್ಟು ಗೊತ್ತೆ?

06 November, 2022 3:41 PM IST By: Hitesh
Tirupati Tirumala

ದೇಶದ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂದೇ ಖ್ಯಾತಿ ಗಳಿಸಿರುವ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಾಲಯದ ಆದಾಯವನ್ನು ಪ್ರಕಟಿಸಲಾಗಿದೆ. ಎಷ್ಟೆದೆ ತಿಮ್ಮಪ್ಪನ ಆಸ್ತಿ ಈ ಸುದ್ದಿ ಓದಿ…

ರೈತರ ಖಾತೆಗೆ ನೇರವಾಗಿ ಡೀಸೆಲ್‌ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್ 

Tirupati Tirumala ತಿರುಪತಿ ತಿಮ್ಮಪ್ಪನ ಒಟ್ಟಾರೆ ಆಸ್ತಿ 2.26 ಲಕ್ಷ ಕೋಟಿ ರೂಪಾಯಿ ಇದೆ ಎಂದು ಘೋಷಿಸಲಾಗಿದೆ.  

ವೆಂಕಟೇಶ್ವರ ಸ್ವಾಮೀಜಿ ದೇವಾಲಯದ ಆದಾಯದ ಬಗ್ಗೆ ಇದೀಗ ಟಿಟಿಡಿ (TTD) ಶ್ವೇತಪತ್ರ ಹೊರಡಿಸಿದ್ದು, ದೇವಾಲಯದ ಒಟ್ಟು ಆಸ್ತಿ ಮೌಲ್ಯ 2.26 ಕೋಟಿ ರೂಪಾಯಿ ಇದೆ ಎಂದು ಬಹಿರಂಗಪಡಿಸಿದೆ.

ಕಬ್ಬು ಬೆಳೆ ಬೆಳೆಯಲು ಇರುವ ಉತ್ತಮ ತಳಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ದೇಶಾದ್ಯಂತ ಒಟ್ಟು 960 ಕಡೆ 7123 ಎಕರೆ ಭೂಮಿ ಇದೆ. ದೇವಸ್ಥಾನದ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟಾರೆ 15,938 ಕೋಟಿ ರೂಪಾಯಿ ಮೊತ್ತದ ಹಣವನ್ನು ಠೇವಣಿ ಇರಿಸಲಾಗಿದೆ.

ತಿರುಪತಿ ತಿರುಮಲದಲ್ಲಿರುವ ಆಸ್ತಿಯ ಮೌಲ್ಯ 5 ಸಾವಿರ ಕೋಟಿ ರೂಪಾಯಿಯಾಗಿದ್ದು,  ವೆಂಕಟೇಶ್ವರ ಸ್ವಾಮಿ ಹೊಂದಿರುವ ಚಿನ್ನದ ದಾಸ್ತಾನು 10.25 ಟನ್ ಎಂದು ವಿವರಿಸಲಾಗಿದೆ.

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಟ್ರಸ್ಟ್ ನೀಡಿರುವ ವಿವರದಂತೆ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ.

ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2019ನೇ ಸಾಲಿನಲ್ಲಿ 13,025 ಕೋಟಿ ರೂಪಾಯಿ ನಿಶ್ಚಿತ ಠೇವಣಿ ಇರಿಸಲಾಗಿತ್ತು.

ಕ್ರಮೇಣ ಇದರ ಗಾತ್ರ 15,938 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 2,900 ಕೋಟಿ ರೂಪಾಯಿ ಠೇವಣಿ ಹೆಚ್ಚಳವಾಗಿದೆ ಎಂದು ಟಿಟಿಡಿ ತನ್ನ ಶ್ವೇತಪತ್ರದಲ್ಲಿ ವಿವರಿಸಿದೆ.

Tirupati Tirumala

ಯಾವ ಬ್ಯಾಂಕ್‌ನಲ್ಲಿ ಎಷ್ಟು ಠೇವಣಿ ಇರಿಸಲಾಗಿದೆ

ಪ್ರಸಕ್ತ ವರ್ಷ ಸೆಪ್ಟೆಂಬರ್ 30ರವರೆಗೆ ಬ್ಯಾಂಕ್‌ಗಳಲ್ಲಿನ ಒಟ್ಟು ಠೇವಣಿ 15,938, 68 ಕೋಟಿ ರೂಪಾಯಿ ಇರಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5358.11 ಕೋಟಿ, ಯೂನಿಯನ್ ಬ್ಯಾಂಕ್‌ನಲ್ಲಿ 1694.25 ಕೋಟಿ, ಬ್ಯಾಂಕ್ ಆಫ್ ಬರೋಡಾದಲ್ಲಿ 1839.36 ಕೋಟಿ, ಕೆನರಾ ಬ್ಯಾಂಕ್‌ನಲ್ಲಿ 1351 ಕೋಟಿ ರೂಪಾಯಿ, ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ 1006.20 ಕೋಟಿ, ಎಚ್‌ಡಿಎಫ್‌ಸಿಯಲ್ಲಿ 2122.85 ಕೋಟಿ ರೂಪಾಯಿ ಠೇವಣಿ ಇರಿಸಲಾಗಿದೆ.  

Gold coin

ವಿವಿಧ ಬ್ಯಾಂಕ್‌ಗಳಲ್ಲಿರುವ ಹಣ

ಭಾರತ ಸರ್ಕಾರದ ಬಾಂಡ್‌ಗಳು-555.17 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 660.43 ಕೋಟಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 306.31 ಕೋಟಿ,

ಇಂಡಿಯನ್ ಬ್ಯಾಂಕ್ 101.43 ಕೋಟಿ ರೂಪಾಯಿ, ಸಪ್ತಗಿರಿ ಗ್ರಾಮೀಣ ಬ್ಯಾಂಕ್ 99.91 ಕೋಟಿ, ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ 18.54 ಕೋಟಿ,

ಐಸಿಐಸಿಐ ಬ್ಯಾಂಕ್ 9.70 ಕೋಟಿ, ಕರೂರ್ ವೈಶ್ಯ ಬ್ಯಾಂಕ್ 4.31 ಕೋಟಿ, ಎಪಿ ರಾಜ್ಯ ಹಣಕಾಸು ನಿಗಮ 4.00 ಕೋಟಿ, ಎಪಿ ರಾಜ್ಯ ಸಹಕಾರಿ ಬ್ಯಾಂಕ್ 1.30 ಕೋಟಿ ಹಾಗೂ ಸೆಂಟ್ರಲ್ ಬ್ಯಾಂಕ್‌ನಲ್ಲಿ 1.28 ಕೋಟಿ ರೂಪಾಯಿ ಇದೆ ಎಂದು ಟಿಟಿಡಿ ತಿಳಿಸಿದೆ.

Tirupati Tirumala

ದೇವಾಲಯಕ್ಕೆ ಚಿನ್ನವನ್ನು ಕಾಣಿಕೆಯಾಗಿ ನೀಡುವ ಭಕ್ತರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

2019ರಲ್ಲಿ ಟಿಟಿಡಿ 7.3 ಟನ್‌ ಚಿನ್ನವನ್ನು ಹೊಂದಿತ್ತು. ಇದಕ್ಕೆ ಈಗ 2.9 ಟನ್‌ ಚಿನ್ನ ಸೇರಿಕೊಂಡಿದೆ. ಈ ಮೂಲಕ ಒಟ್ಟಾರೆ ಚಿನ್ನದ ಠೇವಣಿ 10.25 ಟನ್‌ಗೆ ಮೂರೇ ವರ್ಷದಲ್ಲಿ ಏರಿಕೆ ಕಂಡಂತಾಗಿದೆ.

ಇನ್ನು ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯು 5,309 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಠೇವಣಿ ಇರಿಸಿದೆ ಎಂದು ಹೇಳಲಾಗಿದೆ.

ನಾಗರಹಾವನ್ನು ಕಚ್ಚಿಕೊಂದ ಎಂಟು ವರ್ಷದ ಬಾಲಕ!

Tirupati Tirumala

ಈಚೆಗೆ ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿ ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ವದಂತಿ ಹಬ್ಬಿತ್ತು.

ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹರಿದಾಡಿತ್ತು. ಈ ಆರೋಪವನ್ನು ಟ್ರಸ್ಟ್ ನಿರಾಕರಿಸಿದೆ.

ಹೆಚ್ಚುವರಿ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ತನ್ನ ಶ್ವೇತ ಪತ್ರದಲ್ಲಿ ವಿವರಿಸಿದೆ.