News

ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

25 October, 2022 12:31 PM IST By: KJ Staff
Narendra Modi

ಭಾರತ ಮೂಲದ ರಿಷಿ ಸುನಾಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ಹಿನ್ನೆಯಲ್ಲಿ ಭಾರತದಾದ್ಯಂತ ಸಂಭ್ರಮಾಚರಣೆ ಮನೆ ಮಾಡಿದೆ…

ಇದನ್ನೂ ಓದಿರಿ: ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಾಕ್‌ ಅವರಿಗೆ ಶುಭಾಕೋರಿದ್ದಾರೆ.  

ಈ‌ ಕುರಿತು ಪ್ರಧಾನಿ ಮೋದಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ: 

ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

“ಹೃತ್ಪೂರ್ವಕ ಅಭಿನಂದನೆಗಳು ರಿಷಿ ಸುನಾಕ್ http://@RishiSunak!  ನೀವು ಬ್ರಿಟನ್ ಪ್ರಧಾನಿಯಾಗುತ್ತಿದ್ದಂತೆಯೇ, ಜಾಗತಿಕ ಸಮಸ್ಯೆಗಳ ಕುರಿತು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ.

ಜೊತೆಗೆ  ‘ಮಾರ್ಗಸೂಚಿ 2030’ ಅನ್ನು ಕಾರ್ಯಗತಗೊಳಿಸಲು ನಾನು ಕಾತುರನಾಗಿದ್ದೇನೆ. ನಾವು ನಮ್ಮ ಐತಿಹಾಸಿಕ ಸಂಬಂಧಗಳನ್ನು ಆಧುನಿಕ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ.‌

ಇದಕ್ಕಾಗಿ ‘ಸಜೀವ ಸೇತುವೆ'ಯಾದ ಬ್ರಿಟನ್ನಿನ ಭಾರತೀಯರಿಗೆ‌ ದೀಪಾವಳಿಯ ವಿಶೇಷ ಶುಭಾಶಯಗಳು. ಎಂದು ಹೇಳಿದ್ದಾರೆ.

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ? 

ರಿಷಿ ಸುನಕ್‌ ಅವರು ಮಂಗಳವಾರ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ದೇಶದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು.

ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.