News

15 ಸಾವಿರ ಶಿಕ್ಷಕರ ನೇಮಕಾತಿ: ಎಂಜಿನಿಯರಿಂಗ್‌ ಪದವಿಧರರಿಗೆ ಭರ್ಜರಿ ನ್ಯೂಸ್‌ ನೀಡಿದ ಸರ್ಕಾರ

20 March, 2022 10:54 AM IST By: KJ Staff
primary teacher notification 2022

ಒಂದುಕಡೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತ ಕಳೆದ ಎರಡ್ಮೂರು ವರ್ಷಗಳಿಂದ ಮಹಾಮಾರಿ ಕೋವಿಡ್‌ ಕೂಡ ಮಕ್ಕಳ ಶಿಕ್ಷಣಕ್ಕೆ ಅಡ್ಡುಗಾಲು ಹಾಕಿದೆ. ಇದರಿಂದ ಮಕ್ಕಳ ಭವಿಷ್ಯ ಅಂತತ್ರ ಸ್ತೀತಿಯಲ್ಲಿ ತಲುಪಿದೆ. ಇದರ ಬೆನ್ನಲ್ಲೆ ಸರ್ಕಾರ ಶಿಕ್ಷಕರ ಮೇಮಕಾತಿಗೆ ಮುಂದಾಗಿದೆ. ಹೌದು ರಾಜ್ಯದಲ್ಲಿ 15 ಸಾವಿರ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿಯಲ್ಲಿ ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯು ಮೇ 21 ಮತ್ತು 22 ರಂದು ನಡೆಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಇದನ್ನೂ ಓದಿ:Share ಮಾರ್ಕೇಟ್‌ನಲ್ಲಿ ಸ್ವಲ್ಪನಾದ್ರು ಹಣ ಗಳಿಸೋದು ಹೇಗೆ..? ಇಲ್ಲಿವೆ Top 5 ಸೂತ್ರಗಳು

ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳಿಗೂ ಅವಕಾಶ..!
ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ಮೀಸಲಿರಿಸಿದೆ. ಜೊತೆಗೆ ಉಳಿದ ಭಾಗದಿಂದ 10 ಸಾವಿರ ಶಿಕ್ಷಕರ ನೇಮಕ ಮಾಡುತ್ತಿದ್ದು, ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳಿಗೂ ಕೂಡ ಈ ಬಾರಿ ಗಣಿತ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಕೋವಿಡ್ ಕಾರಣದಿಂದ ಎಲ್ಲಾ ವರ್ಗದವರಿಗೆ ವಯೋಮಿತಿಯಲ್ಲಿ 2 ವರ್ಷ ಸಡಿಲಿಕೆ ತೃತೀಯ ಲಿಂಗಿಗಳಿಗೆ ವಿಶೇಷವಾಗಿ ಶೇ.1ರಷ್ಟು ಮೀಸಲು ಕಲ್ಪಿಸಲಾಗಿದೆ.

ಇದನ್ನೂ ಓದಿ: ನಿಮಗೆ ಮಹಿಳಾ ಉದ್ಯಮಿಯಾಗೋ ಆಸೆ ಇದೆಯೇ..?ಹಾಗಾದ್ರೆ ಇಲ್ಲಿವೆ Top 10 Business Ideas

ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುವ ವಿಧಾನ
* ಮಾರ್ಚ್ 21ರಂದು ನೇಮಕಾತಿಗೆ ಅಧಿಸೂಚನೆ
* ಮಾರ್ಚ್ 23 ರಿಂದ ಏಪ್ರಿಲ್ 22ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ
* ಒಟ್ಟು 400 ಅಂಕಗಳಿಗೆ ಪರೀಕ್ಷೆ
* ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ - ಜೀವವಿಜ್ಞಾನ, ಸಮಾಜಪಾಠಗಳು ಶಿಕ್ಷಕರ ಹುದ್ದೆಗಳಿಗೆ ಅವಕಾಶ
* ನೇಮಕಾತಿ ಪರೀಕ್ಷೆ ಮೇ 21- 22 ಎರಡು ದಿನ ನಡೆಯಲಿದೆ

*ಸಾಮಾನ್ಯ ಜ್ಞಾನ 150, ವಿಷಯವಾರು 150, ಮೂಲ ವಿಷಯ -100
6 ರಿಂದ 8 ತಿಂಗಳ ಒಳಗೆ ಶಿಕ್ಷಕರ ಹುದ್ದೆ ಭರ್ತಿ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಯಲಿದೆ..

ಇದನ್ನೂ ಓದಿ:PVC ಪೈಪ್‌ ಹಾಗೂ ಮೋಟಾರ್‌ ಕೊಳ್ಳುವ ರೈತರಿಗೆ ಭರ್ಜರಿ ಸಹಾಯಧನ..ಇಲ್ಲಿದೆ Details