News

ಇಂದು ನಾಳೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ “ಸಾವಯವ ಹಬ್ಬ”

15 October, 2022 2:02 PM IST By: Kalmesh T
Preparations for Organic fest Exhibition and sale of organic products

ತೋಟಗಾರಿಗೆ ಇಲಾಖೆ, ಲಾಲ್‌ಬಾಗ್, ಬೆಂಗಳೂರು ಹಾಗೂ ಮೈಸೂರು ಉದ್ಯಾವ ಕಲಾಸಂಘ, ಲಾಲ್‌ಬಾಗ್, ಬೆಂಗಳೂರು ಇವರ ಸಹಯೋಗದೊಂದಿಗೆ, ಜೈವಿಕ್ ಕೃಷಿಕ್ ಸೊಸೈಟಿ ಲಿ., ಲಾಲ್ ಬಾಗ್, ಬೆಂಗಳೂರು ವತಿಯಿಂದ  ಸಾವಯವ ಹಬ್ಬ (ಪ್ರದರ್ಶನ ಮತ್ತು ಮಾರಾಟ) ವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿರಿ: ತೆಂಗು ಕೃಷಿ ಉತ್ತೇಜನೆಗೆ ಕೇಂದ್ರ ಸರ್ಕಾರದಿಂದ ರೈತರಿಗೆ ಬೆಂಬಲ- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌

ಬೆಂಗಳೂರಿನ ಲಾಲ್‌ಬಾಗ್‌ನ ಎಂ.ಹೆಚ್, ಮರೀಗೌಡ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಬೆಳಗ್ಗೆ 10-30 ಗಂಟೆಗೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಕೆ. ನಾಗೇಂದ್ರ ಪ್ರಸಾದ್‌, ಐ.ಎ.ಎಸ್‌ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ  ಖ್ಯಾತ ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ, ಸಾವಯವ ಕೃಷಿಕರು ಮತ್ತು ತೇಜ ನರ್ಸರಿ ಸಂಸ್ಥಾಪಕರಾದ ಶಿವನಾಪುರ ರಮೇಶ‌, ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ  ಬಿ.ಆರ್. ವಾಸುದೇವ್ ಇರಲಿದ್ದಾರೆ.

ಜೈವಿಕ್ ಕೃಷಿಕ್ ಸೊಸೈಟಿ ಡಿ. ಗೌರವಾಧ್ಯಕ್ಷರಾದ ಕೆ. ರಾಮಕೃಷ್ಣ ಹ, ಜೈವಿಕ್‌ ಕೃಷಿಕ ಸೊಸೈಟಿ ಕಾರ್ಯಾಧ್ಯಕ್ಷರಾದ ಕೆ.ಎಂ. ಪರಶಿವಮೂರ್ತಿ ಘನ ಉಪಸ್ಥಿತಿ ವಹಿಸಿಕೊಳ್ಳಲಿದ್ದಾರೆ.

ಲಂಪಿ ಚರ್ಮರೋಗ ನಿರ್ವಹಣೆಗಾಗಿ 13 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶ

ಮೇಳದಲ್ಲಿ ಏನೇನು ಇರಲಿವೆ?

ಮೇಳದಲ್ಲಿ ಹಾಸನದ ಭೂಮಿ ಗುಂಪಿನ ಭತ್ತದ ವೈವಿಧ್ಯತೆ, ಸಹಜ ಸಮೃದ್ಧ- ಮಾಯಸಂದ್ರ ಗುಂಪಿನ ತರಕಾರಿಗಳು, ನೆಲಮಂಗಲದ ಕುಮುದಾವತಿ ಸಂಘದ ರೈತರಿಂದ ಸೊಪ್ಪು, ತರಕಾರಿ ಹಣ್ಣುಗಳು, ಮೈಸೂರಿನ ನಮ್ದು ರೈತ ಗುಂಪಿನ ಸೊಪ್ಪು, ಹಣ್ಣು, ತರಕಾರಿಗಳು, ತಿಪಟೂರಿನ ಅಕ್ಷಯಕಲ್ಪ ರೈತ ಸಂಸ್ಥೆಯ ಸಾವಯವ ಹಾಲಿನ ಪದಾರ್ಥಗಳು, ಅಭಯ್ ನಾಚುರಲ್ಸ್ ನವರಿಂದ ಬಾಳೆ ಹಣ್ಣಿನ ಲಾಡು, ಗುಲ್ಕನ್ ಇತ್ಯಾದಿ ಮೌಲ್ಯವರ್ದಿತ ಪದಾರ್ಥಗಳು, ಸಹಜ ಸೀಡ್ಸ್ ನವರಿಂದ ದೇಸಿ ಬೀಜಗಳು ಹೀಗೆ ಹತ್ತಾರು ಸಾವಯವ ರೈತ ಗುಂಪುಗಳು, ಸಂಘ ಸಂಸ್ಥೆಯವರು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಾರೆ.

ಗಮನಿಸಿ: 8.83 ಲಕ್ಷ ರೈತರ ಮುಂಗಾರು ಹಂಗಾಮಿನ ಬೆಳೆಹಾನಿಗೆ ₹947.8 ಕೋಟಿ ಪರಿಹಾರ-ಬಿ.ಸಿ.ಪಾಟೀಲ್‌

ಅಲ್ಲದೆ ಬಂದವರಿಗೆಲ್ಲಾ ಸಾವಯವ ಊಟ / ತಿಂಡಿ ಸರಬರಾಜಿಗೆ ಗ್ರೀನ್ ಪಾತ್, ಬೆಂಗಳೂರು ನವರು ಬರುತ್ತಾರೆ.

ಕಾರ್ಯಕ್ರಮ ಭಾನುವಾರ ಸಂಜೆ 6 ಘಂಟೆಯವರೆಗೆ ನಡೆಯುತ್ತದೆ. ಈ ವಿಶೇಷ ಹಬ್ಬದಲ್ಲಿ ಪಾಲ್ಗೊಂಡು, ರಾಜ್ಯದ ಸಾವಯವ/ಪರಿಸರ ಕೃಷಿಕರಿಗೆ ಪ್ರೋತ್ಸಾಹ ನೀಡಿ ಎಂದು ಪ್ರಕಟನೆಯಲ್ಲಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.