ಕರ್ನಾಟಕ ಚುನಾವಣೆಗೆ ಇನ್ನು ಒಂದು ವಾರ ಮಾತ್ರವಿದ್ದು, ಇದೀಗ ಧರ್ಮ ದಂಗಲ್ ಪ್ರಾರಂಭವಾಗಿದೆ.
ಕಾನೂನು ಸುವ್ಯವಸ್ಥೆಗೆ ಚ್ಯುತಿ ಮಾಡಿದರೆ ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದೆ.
ಅಷ್ಟಕ್ಕೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ. ಯಾವ ಪಕ್ಷದವರು ಏನೆಂದರು ಎನ್ನುವ ವಿವರ ಇಲ್ಲಿದೆ.
ಆಂಜನೇಯನಿಗೆ ಬೀಗ ದೌರ್ಭಾಗ್ಯ: ಮೋದಿ
ಆಂಜನೇಯನಿಗೆ ಬೀಗ ಹಾಕಲು ನಿರ್ಧರಿಸಿರುವುದು ದೌರ್ಭಾಗ್ಯವೇ ಸರಿ ಎಂದು ಕಾಂಗ್ರೆಸ್ ಪ್ರಣಾಳಿಕೆಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಂಜನೇಯನಿಗೆ ಬೀಗ ಹಾಕಿ ಬಂದ್ ಮಾಡಲು ನಿರ್ಣಯಿಸಿದೆ ಎಂದಿದ್ದಾರೆ.
ಅಲ್ಲದೇ ಈ ಹಿಂದೆ ಶ್ರೀರಾಮನಿಗೆ ಬೀಗ ಹಾಕಿ ಬಂದ್ ಮಾಡಿದವರು ಇದೀಗ ಬಜರಂಗಬಲಿ ಎಂದು ಹೇಳುವವರಿಗೆ ಬೀಗ ಹಾಕಿ ಬಂದ್ ಮಾಡಲು ಸಂಕಲ್ಪ ಮಾಡಿದ್ದಾರೆ.
ಇದು ಈ ದೇಶದ ದೌರ್ಭಾಗ್ಯ ಕಾಂಗ್ರೆಸ್‌ಗೆ ಇಲ್ಲಿಯವರೆಗೆ ಶ್ರೀರಾಮಚಂದ್ರನ ಬಗ್ಗೆ ತೊಂದರೆ ಇತ್ತು.
ಇದೀಗ ಜೈ ಬಜರಂಗ ಬಲಿ ಎಂಬುವವರ ಬಗ್ಗೆಯೂ ತೊಂದರೆ ಆಗುತ್ತಿದೆ ಎಂದು ರಾಜಕೀಯ ಸಮಾವೇಶದಲ್ಲಿ ಮಾತನಾಡಿದ್ದಾರೆ.
ಹನುಮಂತನಿಗೆ ಮಾಡಿದ ಅವಮಾನ: ಸುರ್ಜೀವಾಲಾ
ಹನುಮಂತನನ್ನು ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡಿದ ಮೋಸ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ಹೇಳಿದ್ದಾರೆ.
ರಾಜಧರ್ಮಪಾಲನೆ, ಗೌರವ, ಕರ್ತವ್ಯ ತ್ಯಾಗ ಹಾಗೂ ಸೇವೆಯ ಪ್ರತೀಕರಾದ ಹನುಮಂತನನ್ನು ಒಂದು ಸಂಘಟನೆಗೆ ಹೋಲಿಕೆ ಮಾಡಿರುವುದು
ಹನುಮಂತನಿಗೆ ಮಾಡಿರುವ ಅವಮಾನ. ಪ್ರಧಾನಿ ನರೇಂದ್ರ ಮೋದಿ ಅವರು ಹನುಮ ಭಕ್ತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
-----
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುವುದೇನು ?
ಕರ್ನಾಟಕ ಸಾರ್ವತ್ರಿಕ ಚುನಾವಣಿಗೆ ಇನ್ನು ಕೇಲವ ಏಳು ದಿನಗಳಷ್ಟೇ ಇವೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಧರ್ಮದಂಗಲ್ ಪ್ರಾರಂಭವಾಗಿದ್ದು, ಸಾರ್ವಜನಿಕರಲ್ಲೂ ಆತಂಕಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದು ಇಷ್ಟು, “ಸಂವಿಧಾನದ ವಿಧಿಗಳನ್ನು
ಯಾರೇ (ಭಜರಂಗದಖ, ಪಿಎಫ್‌ಐ ಯಾರೇ ಆಗಲಿ) ಉಲ್ಲಂಘಿಸಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಉಲ್ಲೇಖಿಸಿತ್ತು.
ಈ ನಿರ್ದಿಷ್ಟ ಅಂಶವೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧ ಚರ್ಚೆ ಪ್ರಾರಂಭವಾಗಿದೆ.
ಪತ್ರಕರ್ತ ಶ್ರೀರಾಜ್ ವಕ್ವಾಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ,
“ಈ ಬಿಜೆಪಿ ಅವರು ಜನರ ಬುದ್ಧಿಯನ್ನು ಎಷ್ಟರ ಮಟ್ಟಿಗೆ ಲದ್ದಿ ಮಾಡಿದ್ದಾರೆಂದರೇ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನದ
ವಿಧಿಗಳನ್ನು ಯಾರೇ (ಭಜರಂಗದಖ, ಪಿಎಫ್‌ಐ ಯಾರೇ ಆಗಲಿ) ಉಲ್ಲಂಘಿಸಿದರೆ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು
ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದನ್ನು ಓದಿ, ಅರ್ಥ ಮಾಡಿಕೊಳ್ಳವುದಕ್ಕೆ ಆಗದೇ ಇರುವಷ್ಟು!
ಬೆಂಗಳೂರಿನ ಗಾರೇಬಾವಿಪಾಳ್ಯದ ಪುರಾತನ ಆಂಜನೇಯ ಸ್ವಾಮಿ ಗುಡಿಯನ್ನು 2020ರಲ್ಲಿ
ಇದೇ ಬಿಜೆಪಿ ಸರ್ಕಾರ ಜೆಸಿಬಿಗಳಿಂದ ನೆಲಸಮಗೊಳಿಸಿದ್ದನ್ನು ಈ ನಾಡಿನ ಜನ ಕಂಡಿದ್ದಾರೆ.
ಇವೊತ್ತು ಕಾಂಗ್ರೆಸ್ ಪ್ರಣಾಳಿಕೆ ಬಿಟ್ಟಿದ್ದೇ ಬಿಟ್ಟಿದ್ದು, ದೇವಸ್ಥಾನ ಹೇಗಿದೆ ಅಂತ ಗೊತ್ತಿಲ್ಲದವುಗಳೆಲ್ಲಾ ನಾನು ಭಜರಂಗಿ ಅಂತಿದ್ದಾವೆ.
ಅದೇ ಆಂಜನೇಯ ಶಾಪ ನೆಲಸಮಗೊಳಿಸಿದವರಿಗೆ ತಟ್ಟದೇ ಇದ್ದಿತೆ ? ಎಂದಿದ್ದಾರೆ.
ಈ ಸುದ್ದಿಗಳನ್ನು ಓದಿರಿ
ಸಿಹಿಸುದ್ದಿ: ಭಾರತದ ಸೇವಾ ವಲಯದಲ್ಲಿ ಹೊಸ ದಾಖಲೆ!
ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ ಸೃಷ್ಟಿ, ಒಂದೇ ದಿನ ಪ್ರಯಾಣಿಸಿದ್ರಾ ಇಷ್ಟು ಜನ!
StarBerrySense ಇಸ್ರೋದಿಂದ ಸ್ಟಾರ್‌ಬೆರಿಸೆನ್ಸ್ ಪ್ರಯೋಗ ಏನಿದರ ವಿಶೇಷತೆ ?