Mahila Samman Saving Certificate: ಮಹಿಳೆಯರಿಗೆ ಉಳಿತಾಯದ ಕುರಿತಾಗಿ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ಒಂದಿದೆ. ಪಿಎಂ ಮೋದಿ ನೀಡಿರುವ ಈ ಮಹತ್ವದ ಸಲಹೆಯೊಂದಿಗೆ ನಿಮ್ಮ ಹಣಕಾಸಿನ ಉಳಿತಾಯ ಮಾಡಿರಿ
Mahila Samman Saving Certificate: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆ ಆರಂಭ: ಮಹಿಳೆಯರಿಗೆ ಪಿಎಂ ಮೋದಿ ಮಹತ್ವದ ಸಲಹೆ! ಏನಿದು?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಕ್ಕೆ (Mahila Samman Saving Certificate) ದಾಖಲಾಗುವಂತೆ ಪ್ರಧಾನಮಂತ್ರಿ ಮಹಿಳೆಯರನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ (MSSC) ಮೂಲಕ ಮಹಿಳೆಯರಿಗೆ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ಮತ್ತು
ಉತ್ತಮ ಆದಾಯವನ್ನು ಒದಗಿಸುವ ಕುರಿತು ಮಾಡಿದ ಟ್ವೀಟ್ ಅನ್ನು ಮರುಟ್ವೀಟ್ ಮಾಡುತ್ತಾ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ.
"ಹೆಚ್ಚು ಮಹಿಳೆಯರು MSSC ಗೆ ದಾಖಲಾಗುವಂತೆ ನಾನು ಒತ್ತಾಯಿಸುತ್ತೇನೆ. ಇದು ನಮ್ಮ ನಾರಿ ಶಕ್ತಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್‌ನ್ನು ಮರುಟ್ವೀಟ್ ಮಾಡಿದ್ದಾರೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆ ಆರಂಭ
ಸಂಸದ್ ಮಾರ್ಗ ಪೋಸ್ಟ್ ಆಫೀಸ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಖಾತೆಯನ್ನು ಸಚಿವೆ ಸ್ಮೃತಿ ಇರಾನಿ ಅವರಿಂದ ತೆರೆಯಲಾಯಿತು.
Azadi Ka Amrit Mahotsav : 'ಆಜಾದಿ ಕಾ ಅಮೃತ್ ಮಹೋತ್ಸವ' ಸ್ಮರಣಾರ್ಥ ಬಜೆಟ್ 2023-24 ರಲ್ಲಿ ಘೋಷಿಸಲಾದ MSSC ಯೋಜನೆಯು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ಮತ್ತು ಮಹಿಳೆಯರಿಗೆ ಉತ್ತಮ ಆದಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಮಹಿಳೆಯರು ಮತ್ತು ಯುವತಿಯರು MSSC ಗೆ ದಾಖಲಾಗುವಂತೆ ಮತ್ತು ಈ ಸಣ್ಣ ಉಳಿತಾಯ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.