ಪಿಎಂ ಕಿಸಾನ್ ಯೋಜನೆ (PM Kisan Sammana Nidhi): ದೇಶದ ಸುಮಾರು 11 ಕೋಟಿ ರೈತರು ಕಾಯುತ್ತಿದ್ದ ಪಿಎಂ ಕಿಸಾನ್ 12ನೇ ಕಂತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಅಧಿಕೃತವಾಗಿ ಪಿಎಂ ಮೋದಿ ಅವರು 12ನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿದ್ದು, ಇಂದಿನಿಂದಲೇ ಅಸಂಖ್ಯಾತ ಫಲಾನುಭವಿಗಳ ಖಾತೆಗೆ ಇಂದಿನಿಂದ ಹಣ ಜಮಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇಂದು ಬಿಡುಗಡೆಯಾದ 12 ನೇ ಕಂತಿನಲ್ಲಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 2 ಸಾವಿರ ರೂ. ಈ ಹಣವನ್ನು ಸರ್ಕಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತಿನ ಅಡಿಯಲ್ಲಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳು ಸುಮಾರು 21 ಸಾವಿರ ಕೋಟಿಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 12 ನೇ ಕಂತು ಇಂದು ಬಿಡುಗಡೆ: ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಹೇಗೆ ಪರಿಶೀಲಿಸುವುದು.
ಯೋಜನೆಯ 11 ಕಂತುಗಳು ಬಿಡುಗಡೆಯಾಗಿದ್ದು, ಈಗ ಇದು 12 ನೇ ಕಂತು. ಈ ಸಂದರ್ಭದಲ್ಲಿ ಕಂತು ಬಿಡುಗಡೆಯಾದ ನಂತರ, ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ಪರಿಶೀಲಿಸಬಹುದು? ಹಾಗಾದರೆ ಇದಕ್ಕೆ ದಾರಿಗಳು ಏನು..?
ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್..ವಿಡಿಯೋ
ATM ಮೂಲಕ
ಕೆಲವು ಕಾರಣಗಳಿಂದ ನಿಮಗೆ ಸಂದೇಶ ಬರದಿದ್ದರೆ, ನಿಮ್ಮ ಖಾತೆಗೆ 12 ನೇ ಕಂತಿನ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ನಿಮ್ಮ ಹತ್ತಿರದ ಎಟಿಎಂಗೆ ಹೋಗಬಹುದು.
Passbook ಸಹಾಯದಿಂದ
ನೀವು ಇನ್ನೂ ನಿಮ್ಮ ಎಟಿಎಂ ಕಾರ್ಡ್ ಅನ್ನುಹೊಂದಿರದಿದ್ದರೆ , ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅದನ್ನು ನಿಮ್ಮ ಪಾಸ್‌ಬುಕ್‌ನಲ್ಲಿ ನಮೂದಿಸಬಹುದು. ಇದರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದಾಗಿದೆ.
PM Kisan ಹಣ ಬಾರದಿದ್ದಾಗ ಏನು ಮಾಡಬೇಕು
PM Kisan 12ನೇ ಕಂತಿನ ಹಣ ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ಕಾರಣ ತಿಳಿಯಬಹುದು.
ಗುಡ್‌ನ್ಯೂಸ್: ರೈಲು ಪ್ರಯಾಣಿಕರಿಗೆ ನೀರು ಮತ್ತು ಆಹಾರ ಉಚಿತ- ಆದರೆ ಕಂಡಿಶನ್ಸ್ ಅಪ್ಲೈ
ಜೊತೆಗೆ ನೀವು ಈ ಸಂಖ್ಯೆಗಳಿಗೆ ಸಹ ಕರೆ ಮಾಡಬಹುದು:-
PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
ಪಿಎಂ ಕಿಸಾನ್‌ನ ಹೊಸ ಸಹಾಯವಾಣಿ: 011-24300606
PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109
ಇ-ಮೇಲ್ ಐಡಿ: pmkisan-ict@gov.in