News

Mann Ki Baat: ಮನ್‌ ಕಿ ಬಾತ್‌ ನಲ್ಲಿ ಪರಿಸರ ರಕ್ಷಣೆಗೆ ಪ್ರಧಾನಿ ಮೋದಿ ಕರೆ!

30 October, 2022 3:55 PM IST By: Kalmesh T
PM Modi calls for environmental protection in Mann Ki Baat!

ಈ ಸಲದ ಮನ್‌ ಕಿ ಬಾತ್‌ ನಲ್ಲಿ ಪರಿಸರ ಸಂರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇದನ್ನೂ ಓದಿರಿ: RBI ನಿಂದ ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆ; ಒಟ್ಟು 20 ದಿನ ಬಂದ್‌ ಇರಲಿವೆ ಈ ಬ್ಯಾಂಕ್‌ಗಳು!

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ಹಾಗೂ ಸೌರಶಕ್ತಿ ಬಳಕೆಯ ಕುರಿತಾದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಬೆಂಗಳೂರಿನ ಸಹಕಾರ ನಗರ ಬಸ್ ನಿಲ್ದಾಣದಲ್ಲಿ ಸ್ಥಾಪನೆಯಾಗಿರುವ ವಾಚನಾಲಯದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ವಿದ್ಯಾರ್ಥಿ ಶಕ್ತಿಯು ಭಾರತದ ಬಲ ಹೆಚ್ಚಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Milk Price: ಹಾಲು ಉತ್ಪಾದಕರಿಗೆ ಸಿಹಿಸುದ್ದಿ; ನವೆಂಬರ್‌ 1ರಿಂದ ಲೀಟರ್‌ಗೆ 2ರೂ ಹೆಚ್ಚಳ!

ಬಾಹ್ಯಾಕಾಶ ಕ್ಷೇತ್ರವನ್ನು ಭಾರತದ ಯುವಜನರಿಗೆ ಮುಕ್ತಗೊಳಿಸಿದ ನಂತರ ಅಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡು ಬರುತ್ತಿವೆ. ನವೋದ್ಯಮಗಳು ತಾಂತ್ರಿಕ ಆವಿಷ್ಕಾರಗಳ ಮೂಲಕ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ’ ಎಂದರು.

‘ಭಾರತವು ಏಕಕಾಲಕ್ಕೆ 36 ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಯಲ್ಲಿ ಸ್ಥಾಪಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಇದು ಭಾರತಕ್ಕೆ ಇಸ್ರೋ ಕೊಟ್ಟ ದೀಪಾವಳಿ ಉಡುಗೊರೆ.

ಇದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಛ್ನಿಂದ ಕೊಹಿಮಾವರೆಗೆ ಇಡೀ ದೇಶಕ್ಕೆ ಇದು ಹೆಮ್ಮೆಯ ವಿಚಾರವಾಗಿದೆ.

10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!

‘ಸೋಲಾರ್ ಕ್ಷೇತ್ರದಲ್ಲಿ ಭಾರತವು ಹಲವು ಮಹತ್ತರ ಸಾಧನೆಗಳನ್ನು ಮಾಡಿದೆ. ಭಾರತದ ಸಾಧನೆಯಿಂದ ಇಡೀ ಜಗತ್ತು ಇತ್ತು ನೋಡುತ್ತಿದೆ. ಗುಜರಾತ್ನ ಮೋಧೇರಾ ಗ್ರಾಮದ ಬಹುತೇಕ ಮನೆಗಳು ಸೌರಶಕ್ತಿ ಉತ್ಪಾದಿಸುತ್ತಿವೆ.  ಇದನ್ನು ಭಾರತದ ಮೊದಲ ಸೌರ ಗ್ರಾಮ ಎಂದು ಘೋಷಿಸಲಾಗಿದೆ.

‘ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರ ಸಾಧನೆಯನ್ನು ಮೋದಿ ಶ್ಲಾಘಿಸಿದರು.

ಮಿಷನ್ ಲೈಫ್ ಆಶಯವನ್ನು ಎಲ್ಲ ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗಾಗಿ ಭಾರತವು ಮುನ್ನಡೆಸುತ್ತಿರುವ ಜಾಗತಿಕ ಅಭಿಯಾನ ಇದು ಎಂದು ಮೋದಿ ಹೇಳಿದರು.