News

PM Kisan ಇಂದು ಮಧ್ಯಾಹ್ನ ಬೆಳಗಾವಿಯಿಂದ ಪಿ.ಎಂ ಕಿಸಾನ್‌ ಬಿಡುಗಡೆ ಮಾಡಲಿದ್ದಾರೆ: ಪ್ರಧಾನಿ ಮೋದಿ

27 February, 2023 12:07 PM IST By: Hitesh
PM Kisan will release PM Kisan from Belgaum this afternoon: Prime Minister Modi

ಪಿ.ಎಂ ಕಿಸಾನ್‌ನ 13ನೇ ಕಂತಿನ ಹಣ ಈ ಬಾರಿ ಕರ್ನಾಟಕದ ಬೆಳಗಾವಿಯಿಂದಲೇ ರಾಷ್ಟ್ರದ ಜನರ ಖಾತೆಗೆ  ಬಿಡುಗಡೆ ಆಗಲಿದೆ.  

ನಾಳೆ ರಾಜ್ಯದಿಂದಲೇ ರೈತರಿಗೆ ಬಿಡುಗಡೆ ಆಗಲಿದೆ ಪಿ.ಎಂ ಕಿಸಾನ್‌ ಹಣ!

ರೈತರು ಕಾಯುತ್ತಿರುವ ಸಹಾಯಧನ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪಿಎಂ ಕಿಸಾನ್‌ ಒಂದಾಗಿದೆ.

ಕೇಂದ್ರ ಸರ್ಕಾರವು ರೈತರ ಕಲ್ಯಾಣ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)ಅನ್ನು ಪರಿಚಯಿಸಿದ್ದಾರೆ.  

ಬರೋಬ್ಬರಿ 1.5 ಕೋಟಿ ಮೌಲ್ಯದ ಅನಧಿಕೃತ ರಸಗೊಬ್ಬರ ಮತ್ತು ಕೀಟನಾಶಕ ವಶಕ್ಕೆ

ಇನ್ನು ಪಿ.ಎಂ ಕಿಸಾನ್‌ನ 13ನೇ ಕಂತಿನ 16,000 ಕೋಟಿ ರೂ.ಗಳನ್ನು 8 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಿದ್ದಾರೆ. 

ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷ ತಲಾ 2000 ರೂ.ನಂತೆ ಮೂರು ಸಮಾನ ಕಂತುಗಳಲ್ಲಿ 6000 ರೂ. ಧನ ಸಹಾಯ ಮಾಡಲಾಗುವುದು.  

ಫೆಬ್ರವರಿ 27 ರಂದು ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ನಡೆಯಲಿದೆ.

7th pay commission 7ನೇ ವೇತನ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮಾ. 1ರಿಂದ ಕೆಲಸಕ್ಕೆ ಗೈರು!

ಈ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ 13ನೇ ಕಂತಿನ ಹಣವನ್ನು ವರ್ಗಾಯಿಸಲಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪರಿಶೀಲಿಸಲಿದ್ದಾರೆ.

ನಂತರ ಶಿವಮೊಗ್ಗದಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಅದರ ನಂತರ, ಮಧ್ಯಾಹ್ನ 3:15 ರ ಸುಮಾರಿಗೆ, ಬೆಳಗಾವಿಯಲ್ಲಿ ಶಂಕುಸ್ಥಾಪನೆ ಮತ್ತು ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಸಮರ್ಪಿಸಲಿದ್ದಾರೆ

ಮತ್ತು ಪಿಎಂ-ಕಿಸಾನ್‌ನ 13 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.

PMKisanUpdate ಪಿ.ಎಂ ಕಿಸಾನ್‌ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!

ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಅಡಿಯಲ್ಲಿ ಪ್ರಧಾನಿಯವರು, 16,000 ಕೋಟಿಗಳನ್ನು

8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ವರ್ಗಾವಣೆ ಮಾಡಲಿದ್ದಾರೆ.

ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ರೂ. 6000 ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ತಲಾ ರೂ. 2000. ನೀಡಲಾಗುತ್ತದೆ.  

Aadhar Card -Sim Card Link ಸಿಮ್‌ ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಜೋಡಣೆ: ಕಾರಣ ಏನು ಗೊತ್ತೆ ?