News

PM Kisan: ಈ ಜಿಲ್ಲೆಯ ಬರೋಬ್ಬರಿ 2700 ಕ್ಕೂ ಹೆಚ್ಚು ರೈತರಿಗೆ ಬಂತು ರಿಕವರಿ ನೋಟಿಸ್..!

08 May, 2022 9:47 AM IST By: Maltesh
PM Kisan

PM Kisan: ಪಿಎಂ ಕಿಸಾನ್ ಕುರಿತು ರೈತರಿಗೊಂದು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಪಿಎಂ ಕಿಸಾನ್ (PM Kisan ) ಹಣವನ್ನು ಅನ್ಯ ಮಾರ್ಗಗಳ ಮೂಲಕ ಪಡೆಯುತ್ತಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಚಾಟಿ ಬೀಸಿದೆ. ಹೌದು ಇತ್ತೀಚಿಗೆ ಕೆಲ ಫಲಾನುಭವಿಗಳು ಒಂದೇ ಜಮೀನಿನ ಹೆಸರಿನ ಮೇಲೆ ಇಬ್ಬಿಬ್ಬರು  ಪಿಎಂ ಕಿಸಾನ್ (PM Kisan ) ಹಣವನ್ನು ಪಡೆದಿರುವುದು ಖಾತ್ರಿಯಾಗಿದೆ.  ಇದನ್ನು ಗಂಭಿರವಾಗಿ ಪರಿಗಣಿಸಿರುವ ಕೇಂದ್ರವು ಅನರ್ಹ ಫಲಾನುಭವಿಗಳ ಪತ್ತೆಗೆ ತೀವ್ರವಾದ ಪರಿಶೀಲನೆಯನ್ನು ನಡೆಸಿದೆ ಎನ್ನಲಾಗುತ್ತಿದೆ.

ಪಿಎಂ ಕಿಸಾನ್‌: ಈ ತಪ್ಪು ಮಾಹಿತಿ ನೀಡಿ ಹಣ ಪಡೆದವರಿಗೆ ನೋಟಿಸ್ ಕಳಿಸಲು ಸಿದ್ಧತೆ ನಡೆಸಿದ ಸರ್ಕಾರ

ಉತ್ತರ ಪ್ರದೇಶದ ಹರ್ದೋಯ್‌ನಲ್ಲಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳಲ್ಲಿ ಆದಾಯ ತೆರಿಗೆ ಪಾವತಿದಾರರನ್ನು ಸಹ ಸೇರಿಸಲಾಗಿದೆ. ಜಿಲ್ಲೆಯ 2707 ಅನರ್ಹರಿಗೆ ಒಡೆದ ಮೊತ್ತವನ್ನು ಹಿಂದಿರಗಿಸುವಂತೆ ವಸೂಲಾತಿಗೆ ನೋಟಿಸ್ ನೀಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆದಿರುವ ಅನರ್ಹರ ಮೇಲೆ ಕೃಷಿ ಇಲಾಖೆ ತೀವ್ರವಾದ ಕಣ್ಣಿಟ್ಟಿದೆ. ರೈತರಿಗಾಗಿ ಮೀಸಲಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡಿದ ಮೊತ್ತದ ಲಾಭವನ್ನು ಅನರ್ಹರು ಸಹ ಪಡೆಯುತ್ತಿದ್ದರು. ಈ ಅನರ್ಹರು ಆದಾಯ ತೆರಿಗೆ ಪಾವತಿದಾರರು, ಭೂರಹಿತರು ಮತ್ತು ಮರಣ ಹೊಂದಿದವರು. ಇತ್ತೀಚಿಗೆ  ಈ ಕುರಿತು ತೀವ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಪರಿಣಾಮ ಪರಿಶೀಲನೆಯ ಸಮಯದಲ್ಲಿ ಅದು ಬಹಿರಂಗಗೊಂಡ ನಂತರ, ಇಲಾಖೆಯು 2700 ಕ್ಕೂ ಹೆಚ್ಚು ಅನರ್ಹರಿಗೆ ನೋಟಿಸ್ ನೀಡುವ ಮೂಲಕ ವಸೂಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

ಸದ್ಯ ಉತ್ತರ ಪ್ರದೇಶದ  ಹರ್ದೋಯ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಜಿಲ್ಲೆಯ ಹಲವಾರು ರೈತರು ನೋಂದಾಯಿಸಿಕೊಂಡಿದ್ದು ಹಲವಾರು ಜನ ನಿಯಮ ಉಲ್ಲಂಘಿಸಿ ಹಣ ಪಡೆದಿರುವುದು ಖಾತ್ರಿಯಾಗಿದೆ ಎನ್ನಲಾಗಿದೆ.  ಹೆಚ್ಚಿನ ಪ್ರಮಾಣದಲ್ಲಿ ಅನರ್ಹರಿಂದ ಲಾಭ ಪಡೆದ ನಂತರ, ಇಲಾಖೆಯು ನೋಟಿಸ್‌ಗಳನ್ನು ನೀಡುವ ಮೂಲಕ ವಸೂಲಾತಿ ಪ್ರಕ್ರಿಯೆಯನ್ನು ಜೋರಾಗಿಸಿದೆ.

2707 ಅನರ್ಹರು ಪತ್ತೆ..!

ಜಿಲ್ಲೆಯಲ್ಲಿ 759541 ರೈತರು ನೋಂದಾಯಿಸಿಕೊಂಡಿದ್ದು, ಈ ಸಂಬಂಧ 678770 ರೈತರ ಖಾತೆಗೆ ಮುಂದಿನ ಕಂತು ಕಿಸಾನ್ ಸಮ್ಮಾನ್ ನಿಧಿಯನ್ನು ಕಳುಹಿಸುವಂತೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ.

ಇದುವರೆಗೆ ಮೇ ತಿಂಗಳಲ್ಲಿ 2707 ಅನರ್ಹರು ಪತ್ತೆಯಾಗಿದ್ದು, ಇದರಲ್ಲಿ ಹೆಚ್ಚಿನ ಆದಾಯ ತೆರಿಗೆದಾರರು ಸೇರಿದ್ದರೆ, ಕೆಲವರು ಭೂರಹಿತರಾಗಿದ್ದಾರೆ. ಅದೇ ಸಮಯದಲ್ಲಿ, ಪತಿ-ಪತ್ನಿ ಇಬ್ಬರಿಗೂ ಕಿಸಾನ್ ಸಮ್ಮಾನ್ ನಿಧಿಯ ಲಾಭವನ್ನು ಪಡೆಯುತ್ತಿರುವವರು ಅನೇಕರಿದ್ದಾರೆ. ಅಷ್ಟೇ ಅಲ್ಲ ಮೃತರ ಖಾತೆಗಳಿಗೂ ಕಿಸಾನ್ ಸಮ್ಮಾನ್ ನಿಧಿಯನ್ನು ಕಳುಹಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆಯು ಅನರ್ಹರಾದ 106 ಮೃತರ ಬಂಧುಗಳಿಂದ 6 ಲಕ್ಷ 26 ಸಾವಿರ ರೂಪಾಯಿ ಮರು ಪಾವತಿಸುವಂತೆ ನೋಟಿಸ್ ಕಳಿಸಿದೆ.

ಇನ್ನುಳಿದ ಅನರ್ಹರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತೆಗೆದುಕೊಂಡಿರುವ ಮೊತ್ತವನ್ನು ಹಿಂದಿರುಗಿಸುವಂತೆ ಕೃಷಿ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ತೆಗೆದುಕೊಂಡಿರುವ ಮೊತ್ತವನ್ನು ಎಲ್ಲ ಅನರ್ಹರಿಂದ ವಸೂಲಿ ಮಾಡಲಾಗುವುದು ಎಂದು ಕೃಷಿ ಇಲಾಖೆ ಹೇಳಿದೆ. ಜೂನ್ ಅಂತ್ಯದೊಳಗೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡರೆ ಹೆಚ್ಚಿನ ಸಂಖ್ಯೆಯ ಅನರ್ಹರು ಮುನ್ನೆಲೆಗೆ ಬರಬಹುದು ಎಂದು ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ, ಎಲ್ಲಾ ಅನರ್ಹ ವ್ಯಕ್ತಿಗಳಿಂದ ಕೃಷಿ ಇಲಾಖೆಯಿಂದ ವಸೂಲಾತಿ ಮಾಡಲಾಗುತ್ತದೆ.

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಗುಡ್ ನ್ಯೂಸ್! e-Shram Portalನಲ್ಲಿ ನೋದಾಯಿಸಿಕೊಳ್ಳಿ ಮತ್ತು ಉದ್ಯೋಗ ಪಡೆಯಿರಿ!

ಪಿಎಂ ಕಿಸಾನ್ ಯೋಜನೆಗೆ ಯಾರು ಅನರ್ಹರು?

ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು (ಗುಂಪು ಡಿ ನೌಕರರನ್ನು ಹೊರತುಪಡಿಸಿ)

ವೈದ್ಯರು, ವಕೀಲರು, ಎಂಜಿನಿಯರ್‌ಗಳಂತಹ ವೃತ್ತಿಪರರು.

ತಿಂಗಳಿಗೆ ರೂ 10,000 ಕ್ಕಿಂತ ಹೆಚ್ಚಿನ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು

ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಫಲಾನುಭವಿಗಳು

ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದವರು.

ಬಿಗ್‌ನ್ಯೂಸ್‌: PM ಕಿಸಾನ್‌ ಫಲಾನುಭವಿಗಳ ಲೆಕ್ಕ ಪರಿಶೋಧನೆಗೆ ಮುಂದಾದ ಸರ್ಕಾರ