ಪಿಎಂ ಕಿಸಾನ್ ಯೋಜನೆ: ಪಿಎಂ ಕಿಸಾನ್ ಯೋಜನೆ (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) ಅಡಿಯಲ್ಲಿ ಈಗ 11 ನೇ ಕಂತನ್ನು ಈಗಾಗಲೇ ಕೋಟ್ಯಾಂತರ ಜನ ಅನ್ನದಾತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಸದ್ಯ ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021 ರಲ್ಲಿ, ಕೇಂದ್ರ ಸರ್ಕಾರವು, ದೊಡ್ಡ ಬದಲಾವಣೆಯನ್ನು ಮಾಡಿದೆ. ಅದರ ಅಡಿಯಲ್ಲಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅಂದರೆ, ಈಗ ರೈತರು ಹೊಸ ನಿಯಮದೊಂದಿಗೆ ಮುಂದಿನ ಕಂತಿಗೆ ಅರ್ಜಿ ಸಲ್ಲಿಸಬೇಕು.
ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
ನಿಟ್ಟುಸಿರು ಬಿಟ್ಟ ರೈತರು
ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರವು ಈಗ ಕಡ್ಡಾಯ eKYC ಗಡುವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ (pmkisan.gov.in) ನಲ್ಲಿ ನೀಡಲಾಗಿದೆ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿನ ಫ್ಲಾಶ್ ಪ್ರಕಾರ, 'ಎಲ್ಲಾ PMKISAN ಫಲಾನುಭವಿಗಳಿಗೆ eKYC ಗಡುವನ್ನು 31 ಜುಲೈ 2022 ರವರೆಗೆ ವಿಸ್ತರಿಸಲಾಗಿದೆ'. ಮೊದಲು ಅದರ ಗಡುವು ಮೇ 31, 2022 ಆಗಿತ್ತು.
ಇ-ಕೆವೈಸಿ ಇಲ್ಲದೆ ಹಣ ಸಿಗೋದಿಲ್ಲ
ಇ-ಕೆವೈಸಿ ಇಲ್ಲದೆ ನಿಮ್ಮ ಖಾತೆಗೆ ಬರೋದಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ಕೂಡ ಬಿಡುಗಡೆಯಾಗಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ, ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ.
ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅರ್ಹ ಫಲಾನುಭವಿಗಳು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೂ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.
Asani Cyclone ನ ಕಾರಣ ಕರ್ನಾಟದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ!
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
PM Kisan eKYC ಪ್ರಕ್ರಿಯೆ
PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಪುಟದ ಬಲಭಾಗದಲ್ಲಿ ಲಭ್ಯವಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.
ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಈಗ 'Get OTP' ಆಯ್ಕೆಯನ್ನು ಕ್ಲಿಕ್ ಮಾಡಿ.
ಇದರ ನಂತರ, ಕೊಟ್ಟಿರುವ ಜಾಗದಲ್ಲಿ OTP ಅನ್ನು ಭರ್ತಿ ಮಾಡಿ.
ನೀವು ನೀಡಿದ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನೀವು ನೀಡಿದ ಮಾಹಿತಿಯು ಸರಿಯಾಗಿ ಕಂಡುಬರದಿದ್ದರೆ ಅದು ಅಮಾನ್ಯವಾಗಿದೆ ಎಂದು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕು. ನಂತರ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಬೇಕು..
PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್ ಮಾಡಿ...
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?