News

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

07 April, 2022 12:41 PM IST By: Kalmesh T
PM Kisan: More than 46 lakh farmers receive 2,616 crore!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Samman Nidhi Yojana) ಜಾರಿಗೆ ತರಲು ಕೇಂದ್ರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಇಲ್ಲಿಯವರೆಗೆ ಸರ್ಕಾರವು ತನ್ನ ಅತ್ಯಂತ ಯಶಸ್ವಿ ಯೋಜನೆಯಾದ PM Kisan  ಅಡಿಯಲ್ಲಿ ಪಶ್ಚಿಮ ಬಂಗಾಳದ 46 ಲಕ್ಷಕ್ಕೂ ಹೆಚ್ಚು ಅರ್ಹ ರೈತರಿಗೆ 2,616 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ ಎಂದು ಮಂಗಳವಾರ (5 ಏಪ್ರಿಲ್ 2022) ಸಂಸತ್ತಿಗೆ ತಿಳಿಸಲಾಯಿತು.

ಇದನ್ನು ಓದಿರಿ: 

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯಾವುದೇ ರಾಜ್ಯವಾರು ಹಣ ವಿತರಣೆ ಇಲ್ಲ ಎಂದು ತೋಮರ್ ಮಾಹಿತಿ ನೀಡಿದರು.

ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಸರಿಯಾದ ಪರಿಶೀಲನೆಯ ನಂತರ ದಾಖಲಾದ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ಯೋಜನೆಯಡಿಯಲ್ಲಿ ಹಣ/ ಕಂತುಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!

IMDಯಿಂದ ಎಚ್ಚರಿಕೆ: ಕರ್ನಾಟಕದಲ್ಲಿ ಏಪ್ರಿಲ್ 10 ರವರೆಗೆ ಭಾರೀ ಮಳೆ!

ಕೃಷಿ ಸಚಿವರು, “ಇದುವರೆಗೆ, ಮಾರ್ಚ್ 23, 2022 ರಂತೆ, ಪಶ್ಚಿಮ ಬಂಗಾಳದ ಒಟ್ಟು 46,18,934 ಅರ್ಹ ರೈತರಿಗೆ ಪಿಎಂ-ಕಿಸಾನ್ ಯೋಜನೆಯ ಲಾಭವನ್ನು ನೀಡಲಾಗಿದೆ ಮತ್ತು ಅವರಿಗೆ 2,616.14 ಕೋಟಿ ರೂಪಾಯಿಗಳ ಹಣವನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

PM ಕಿಸಾನ್ eKYC ಅಪ್‌ಡೇಟ್

PM ಕಿಸಾನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಎಲ್ಲಾ PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ದಯವಿಟ್ಟು ನಿಮ್ಮ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ. OTP ದೃಢೀಕರಣದ ಮೂಲಕ ಆಧಾರ್ ಆಧಾರಿತ eKYC ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಮತ್ತು ಎಲ್ಲಾ PMKISAN ಫಲಾನುಭವಿಗಳಿಗೆ eKYC ಯ ಗಡುವನ್ನು 31 ನೇ ಮೇ 2022 ರವರೆಗೆ ವಿಸ್ತರಿಸಲಾಗಿದೆ.

Money Tips! Rs. 5 ನೋಟ್ ನಿಂದ ನೀವು ಲಕ್ಷ ಗಳಿಸಬಹುದು!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಪಿಎಂ ಕಿಸಾನ್ 11 ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ

ಈ ಯೋಜನೆಯಡಿ ಮುಂದಿನ ಕಂತು ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಮೋದಿ ಸರ್ಕಾರವು ಈ ವಾರ 11 ನೇ ಕಂತನ್ನು ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ (ಬಹುಶಃ 10 ಏಪ್ರಿಲ್ 2022 ರಂದು).

ಪಿಎಂ ಕಿಸಾನ್ ಪ್ರಯೋಜನಕಾರಿಯೇ?

ಪಿಎಂ-ಕಿಸಾನ್ ಯೋಜನೆಯು ಭಾರತದ ರೈತರಿಗೆ ಅತ್ಯಂತ ಪ್ರಮುಖ ಮತ್ತು ಪ್ರಯೋಜನಕಾರಿ ಯೋಜನೆಗಳಲ್ಲಿ ಒಂದಾಗಿದೆ. ಯೋಜನೆಯಡಿ, ಅರ್ಹ ರೈತರಿಗೆ ಸರ್ಕಾರವು ವರ್ಷಕ್ಕೆ 6,000 ರೂ.ಗಳ ಆರ್ಥಿಕ ನೆರವು ನೀಡುತ್ತದೆ. ಮೊತ್ತವನ್ನು ತಲಾ 2,000 ರೂ.ಗಳಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಸಾಂಕ್ರಾಮಿಕ ಸಮಯದಲ್ಲಿ, ಇದು ದೇಶದ ಕೋಟಿಗಟ್ಟಲೆ ರೈತರಿಗೆ ಹಣವನ್ನು ನೀಡುವ ಮೂಲಕ ಸಹಾಯ ಮಾಡಿದೆ.

TAFE ನಿಂದ ವಿಶ್ವ ದರ್ಜೆಯ ಹೆವಿ ಟ್ರ್ಯಾಕ್ಟರ್ ಪರಿಚಯ!

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಬಂಪರ್‌ ಸುದ್ದಿ..ಹೆಚ್ಚಳವಾಗುತ್ತಾ HRA..?