News

ನಾಳೆ ರಾಜ್ಯದಿಂದಲೇ ರೈತರಿಗೆ ಬಿಡುಗಡೆ ಆಗಲಿದೆ ಪಿ.ಎಂ ಕಿಸಾನ್‌ ಹಣ!

26 February, 2023 2:02 PM IST By: Hitesh
PM Kisan money will be released to the farmers from the state tomorrow!

ರೈತರು ಕಾಯುತ್ತಿರುವ ಸಹಾಯಧನ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್‌ ಹಣ ಈ ಬಾರಿ ರಾಜ್ಯದಿಂದಲೇ ಬಿಡುಗಡರ ಆಗಲಿದೆ.

ಪ್ರಧಾನಮಂತ್ರಿ ಫೆಬ್ರವರಿ 27ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗಾವಿಯಲ್ಲಿ ಪ್ರಧಾನಿ

ರೈತರ ಕಲ್ಯಾಣ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)

ಅಡಿ 13ನೇ ಕಂತಿನ 16,000 ಕೋಟಿ ರೂ.ಗಳನ್ನು 8 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಿದ್ದಾರೆ.  

BBMP Khata ಬೆಂಗಳೂರಿನಲ್ಲಿ ನಡೆಯಲಿದೆ ಅತೀ ದೊಡ್ಡ ಖಾತಾ ಆಂದೋಲನ: ಮಿಸ್‌ ಮಾಡಲೇ ಬೇಡಿ!

ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷ ತಲಾ 2000 ರೂ.ನಂತೆ ಮೂರು ಸಮಾನ ಕಂತುಗಳಲ್ಲಿ 6000 ರೂ. ಧನ ಸಹಾಯ ಮಾಡಲಾಗುವುದು.

ಫೆಬ್ರವರಿ 27 ರಂದು ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ 13ನೇ ಕಂತಿನ ಹಣವನ್ನು ವರ್ಗಾಯಿಸಲಿದ್ದಾರೆ

ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27, 2023 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 11:45ರ ಸುಮಾರಿಗೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪರಿಶೀಲಿಸಲಿದ್ದಾರೆ.

ನಂತರ ಶಿವಮೊಗ್ಗದಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಕೇಂದ್ರದಿಂದ ಕರ್ನಾಟಕಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ಹೂಡಿಕೆ: ಮೋದಿ

ಅದರ ನಂತರ, ಮಧ್ಯಾಹ್ನ 3:15 ರ ಸುಮಾರಿಗೆ, ಬೆಳಗಾವಿಯಲ್ಲಿ ಶಂಕುಸ್ಥಾಪನೆ ಮತ್ತು ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಸಮರ್ಪಿಸಲಿದ್ದಾರೆ ಮತ್ತು ಪಿಎಂ-ಕಿಸಾನ್‌ನ 13 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.

ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಅಡಿಯಲ್ಲಿ ಪ್ರಧಾನಿಯವರು, 16,000 ಕೋಟಿಗಳನ್ನು 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ವರ್ಗಾವಣೆ ಮಾಡಲಿದ್ದಾರೆ.

ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ರೂ. 6000 ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ತಲಾ ರೂ. 2000. ನೀಡಲಾಗುತ್ತದೆ.

ಬೆಳಗಾವಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಆರು ಬಹುಗ್ರಾಮ ಯೋಜನೆ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಲಿದ್ದಾರೆ.

ಇದನ್ನು ಸುಮಾರು 1585 ಕೋಟಿ ರೂ.ಗಳ ಸಂಚಿತ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು 315 ಕ್ಕೂ

ಹೆಚ್ಚು ಹಳ್ಳಿಗಳ ಸುಮಾರು 8.8 ಲಕ್ಷ ಜನಸಂಖ್ಯೆಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.  

ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿತು ಕನ್ನಡದ ಡಿಂಡಿಮ!