News

ಬಿಗ್‌ನ್ಯೂಸ್‌: PM ಕಿಸಾನ್‌ ಫಲಾನುಭವಿಗಳ ಲೆಕ್ಕ ಪರಿಶೋಧನೆಗೆ ಮುಂದಾದ ಸರ್ಕಾರ

25 April, 2022 9:26 AM IST By: Maltesh
ಸಾಂದರ್ಭಿಕ ಚಿತ್ರ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಸರ್ಕಾರವು ಮುಂದಾಗಿದ್ದು ಅನರ್ಹ ರೈತರ ಹೆಸರನ್ನು ಪತ್ತೆ ಮಾಡುತ್ತಿದೆ.

 PM ಕಿಸಾನ್ ಸಾಮಾಜಿಕ ಲೆಕ್ಕ ಪರಿಶೋಧನೆ

ಗ್ರಾಮ ಸಭೆಯ ಮೂಲಕ ಲೆಕ್ಕ ಪರಿಶೋಶೋಧನೆ ನಡೆಯಲಿದೆ ಎಂದು ಹಿಂದೂಸ್ತಾನ್ ಪ್ರಕಟಿಸಿದ ವರದಿ ಹೇಳುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳ ಹೆಸರನ್ನು ಸರ್ಕಾರವು ಮರುಪರಿಶೀಲಿಸುತ್ತದೆ ಮತ್ತು ಅನರ್ಹ ರೈತರ ಹೆಸರನ್ನು ತೆಗೆದುಹಾಕುತ್ತದೆ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ವರದಿಯ ಪ್ರಕಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ದೇವೇಶ್ ಚತುರ್ವೇದಿ ಗುರುವಾರ (21 ಏಪ್ರಿಲ್ 2022) ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲ ಅನರ್ಹ ರೈತರ ಪಟ್ಟಿಯನ್ನು ಗ್ರಾಮಸಭೆ ಮಾಡಲಿದೆ ಎಂದು ವರದಿ ತಿಳಿಸಿದೆ. ನಂತರ ಸರ್ಕಾರದ ಯೋಜನೆಯಿಂದ ವಂಚಿತರಾದ ರೈತರನ್ನು ಅವರ ಜಾಗಕ್ಕೆ ಸೇರಿಸಲಾಗುವುದು.ಸರ್ಕಾರವು ಅನರ್ಹ ರೈತರ ಹೆಸರನ್ನು ತೆಗೆದುಹಾಕುವುದಲ್ಲದೆ , ಸತ್ತವರ ಹೆಸರನ್ನು ಪಟ್ಟಿಯಿಂದ ಅಳಿಸುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಲಾಗುವುದು ಎಂಬುದನ್ನು ಗಮನಿಸಬೇಕು. ಸಮಿತಿಯು ಮುಖ್ಯ ಅಭಿವೃದ್ಧಿ ಅಧಿಕಾರಿ, ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ಅಧಿಕಾರಿಗಳು , ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮತ್ತು ಎಸ್‌ಡಿಎಂಗಳನ್ನು ಒಳಗೊಂಡಿರುತ್ತದೆ. ಇದು ಡಿಎಂ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿರುತ್ತದೆ.

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಪಿಎಂ ಕಿಸಾನ್ ಯೋಜನೆಗೆ ಯಾರು ಅನರ್ಹರು?

 ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು (ಗುಂಪು ಡಿ ನೌಕರರನ್ನು ಹೊರತುಪಡಿಸಿ)

 ವೈದ್ಯರು, ವಕೀಲರು, ಎಂಜಿನಿಯರ್‌ಗಳಂತಹ ವೃತ್ತಿಪರರು.

ತಿಂಗಳಿಗೆ ರೂ 10,000 ಕ್ಕಿಂತ ಹೆಚ್ಚಿನ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು

ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಫಲಾನುಭವಿಗಳು

 ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದವರು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಮೀನುಗಾರರಿಗೆ ಆರ್ಥಿಕ ನೆರವು ನೀಡಲಾಗುವುದು- ಸಚಿವ ಎಸ್. ಅಂಗಾರ