News

PM Kisan ಬಿಗ್‌ ನ್ಯೂಸ್‌: ಪಿಎಂ ಕಿಸಾನ್‌ 12ನೇ ಕಂತಿನ ಜೊತೆ ಕೃಷಿ ಸಾಲ ಮನ್ನಾ ಆಗುತ್ತಿದೆ..! ಎಲ್ಲಿ..?

25 June, 2022 9:41 AM IST By: Maltesh
PM Kisan 12 installment

ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಕಾಲ ಕಾಲಕ್ಕೆ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ.  ಇದೀಗ ಮತ್ತೊಂದು ದೊಡ್ಡ ಬದಲಾವಣೆಯನ್ನು ನಾವು ಕಾಣಬಹುದಾಗಿದೆ.

ಬರೋಬ್ಬರಿ 300 ಕೆ.ಜಿ ತೂಕ, 13 ಅಡಿ ಉದ್ದದ ವಿಶ್ವದ ಅತಿ ದೊಡ್ಡ ಮೀನು ಪತ್ತೆ..! ಏನಿದರ ವಿಶೇಷ ಗೊತ್ತೆ?

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

ಯೆಸ್‌ ರೈತರ ಆರ್ಥಿಕ ಸ್ಥಿತಿ ಮತ್ತು ಅವರ ಸಮಸ್ಯೆಗಳನ್ನು ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತಿನ 2000 ರೂ.ಗಳನ್ನು ವರ್ಗಾಯಿಸಿದ ನಂತರ, ಇದೀಗ ರೈತರು 12 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಪಿಎಂ ಕಿಸಾನ್‌ನ 11 ನೇ ಕಂತನ್ನು ಮೇ 31 ರಂದು ಬಿಡುಗಡೆ ಮಾಡಲಾಗಿತ್ತು. ಆದರೆ 12ನೇ ಕಂತಿನ ಹಣ ರೈತರ ಖಾತೆ ಸೇರುವ ಮುನ್ನವೇ ಮತ್ತೊಂದು ಸಿಹಿ ಸುದ್ದಿ ರೈತರಿಗೆ ಸಿಗಲಿದೆ. 

ಸಿಎಂ ಯೋಗಿ ಆದಿತ್ಯಾನಾಥ್‌ ಉತ್ತರ ಪ್ರದೇಶದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಕೃಷಿ ಸಾಲ ಮನ್ನಾ ಯೋಜನೆಯನ್ನು ಮತ್ತೆ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿಎಂ ಯೋಗಿ ಆದಿತ್ಯಾನಾಥ್‌ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಒಸಲಾಗಿತ್ತು. ಸದ್ಯ ಮತ್ತೆ ಈ ಯೋಜನೆಯನ್ನು ಆರಂಭಿಸುತ್ತಿದ್ದಾರೆ ಎನ್ನುವ ಸುದ್ದಿಗಳು ವರದಿಯಾಗುತ್ತಿವೆ.

2019 ರಲ್ಲಿಯೇ ಈ ಯೋಜನೆಯನ್ನು ಸಿಎಂ ಯೋಗಿ ಆದಿತ್ಯಾನಾಥ್‌ ನೇತೃತ್ವದ  ಉತ್ತರಪ್ರದೇಶ ಸರ್ಕಾರ ತಡೆ ಹಿಡಿದಿತ್ತು. ಸರ್ಕಾರದ ಈ ಉತ್ತಮವಾದ  ಸಾಲ ಮನ್ನಾದ ಬಂಪರ್‌ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದ ರೈತ ಸಮೂಹ  ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!

ಇಷ್ಟೆಲ್ಲ ಬೆಳವಣಿಗೆಗಳು ನಡೆದ ನಂತರ ಪುನಃ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ನೆರವಾಗಲು ಇದನ್ನು ಆರಂಭಿಸುವ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಅಲ್ಲಿಯ ಮುಖ್ಯ ಕಾರ್ಯದರ್ಶಿ ಡಿ. ಮಿಶ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ ಎನನ್ನಲಾಗಿದೆ. ಅಷ್ಟೆ ಅಲ್ಲದೆ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ಅವಧಿಯಲ್ಲಿ ರೈತರ ಖಾತೆಗಳಿಗೆ ಈ ಹಣ ಜಮೆಯಾಗುವ ಸಾಧ್ಯತೆ ಹೆಚ್ಚಿದೆ.

7th Pay Big Update: ಈಗ ತುಟ್ಟಿಭತ್ಯೆ ಜೊತೆಗೆ HRA ಯಲ್ಲಿ ಕೂಡ ಹೆಚ್ಚಳ! ಎಷ್ಟು ಶೇಕಡ ಗೊತ್ತೆ?

Audi E-rickshaw: 2023 ಹೊತ್ತಿಗೆ ಭಾರತದ ರೋಡಿಗೆ ಬರಲಿವೆ ಆಡಿ ಇ-ರಿಕ್ಷಾಗಳು..! ಇವುಗಳ ವಿಶೇಷತೆ ಏನು ಗೊತ್ತೆ?