News

ಈರುಳ್ಳಿ ಬೆಲೆ ಕುಸಿತ; ಕೆ.ಜಿ ಈರುಳ್ಳಿಗೆ 3 ರೂಪಾಯಿ! ಕಂಗಾಲಾದ ರೈತರು

25 May, 2022 4:30 PM IST By: Kalmesh T
ಸಾಂದರ್ಭಿಕ ಚಿತ್ರ

ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಇದ್ದರೇ ರೈತನ ಪರಿಸ್ಥಿತಿ ಏನಾಗುತ್ತದೆ ಹೇಳಿ. ಅಂತೆಯೇ ಚಿತ್ರದುರ್ಗದ ರೈತರು ಈರುಳ್ಳಿ ಬೆಲೆ 3 ರೂಪಾಯಿಗೆ ಕುಸಿದ ಕಾರಣ ಕಂಗಾಲಾಗಿದ್ದಾರೆ.

ಇದನ್ನೂ ಓದಿರಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

Shocking News: Fix Deposit ಇಟ್ಟಿದ್ದ 1 ಕೋಟಿ ಹಣವನ್ನ IPL ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್ ಮಾಸ್ಟರ್!

ಮಳೆ, ರಫ್ತು ನಿಷೇಧ ಮತ್ತಿತರ ಕಾರಣಗಳಿಗೆ ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು ಚಿತ್ರದುರ್ಗದ ಈರುಳ್ಳಿ ಬೆಳೆಗಾರ ಮತ್ತೆ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾನೆ.

ಕಳೆದ ಎರಡು ತಿಂಗಳಿನಿಂದ ಕುಸಿತ ಕಂಡ ಈರುಳ್ಳಿ ದರ ಮತ್ತೆ ಚೇತರಿಸಿಲ್ಲ. ಬೆಂಗಳೂರಿನಲ್ಲಿ ವಿವಿಧ ದರ್ಜೆಯ ಈರುಳ್ಳಿ .5ರಿಂದ .12ರವರೆಗೆ ಮಾರಾಟವಾಗುತ್ತಿದ್ದು, ಚಿತ್ರದುರ್ಗದಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿದರೆ ಕೆ.ಜಿ.ಗೆ ಮೂರೂವರೆ ರುಪಾಯಿಯಷ್ಟೇ ಸಿಗುತ್ತಿದೆ.

EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಟಮಟ್ಟದ ಈರುಳ್ಳಿ ಸೋಮವಾರದ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲ. 500ರಿಂದ .600ರವರೆಗೆ ಮಾರಾಟವಾಗಿದೆ. ಎರಡನೇ ದರ್ಜೆಯ ಈರುಳ್ಳಿ ಚೀಲಕ್ಕೆ .250ರಿಂದ .300ರಂತೆ ಬಿಕರಿಯಾಗಿದೆ.

ಒಂದು ಚೀಲ ಈರುಳ್ಳಿ ಬೆಳೆಯಲು ಸರಿಸುಮಾರು .600 ಖರ್ಚಾಗುತ್ತದೆ. ಹೀಗಿರುವಾಗ ಸದ್ಯ ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಒಯ್ದರೆ ಲಾರಿ ಬಾಡಿಗೆ ಕೂಡಾ ಸಿಗುವುದಿಲ್ಲವೆಂಬುದು ರೈತರ ಅಳಲಾಗಿದೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಸ್ಥಳೀಯವಾಗಿ ಕೇಳುವವರಿಲ್ಲ:

ಚಿತ್ರದುರ್ಗದಿಂದ ಬೆಂಗಳೂರಿಗೆ ಸಾಗಾಣಿಕೆ ವೆಚ್ಚ ದುಬಾರಿಯಾಗಿರುವುದರಿಂದ ಸಿಕ್ಕಷ್ಟೇ ಸಿಗಲಿ ಎಂಬ ಕಾರಣಕ್ಕೆ ರೈತರು ಸ್ಥಳೀಯವಾಗಿಯೇ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ಹಾಗಾಗಿ ಶಿವಮೊಗ್ಗ, ದಾವಣಗೆರೆ ಭಾಗದ ಈರುಳ್ಳಿ ಖರೀದಿದಾರರು ರೈತರ ಜಮೀನಿಗೆ ಆಗಮಿಸಿ 250 ರುಪಾಯಿಗೆ ಪ್ಯಾಕೆಟ್‌ ಕೊಂಡುಕೊಳ್ಳುತ್ತಿದ್ದಾರೆ.

ಒಂದು ಪ್ಯಾಕೆಟ್‌ ಈರುಳ್ಳಿ ಎಪ್ಪತ್ತು ಕೆಜಿ ತೂಗಲಿದ್ದು ಸರಾಸರಿ ಮೂರುವರೆ ರುಪಾಯಿಗೆ ಒಂದು ಕೆ.ಜಿ.ಯಂತೆ ಬಿಕರಿಯಾಗುತ್ತಿದೆ.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!