ದಕ್ಷಿಣ ಕೊರಿಯಾದೊಂದಿಗೆ ಸದಾ ಒಂದಿಲ್ಲೊಂದು ವಿವಾದವನ್ನು ಸೃಷ್ಟಿಸುವ ಹಾಗೂ ಆತಂಕ ಮೂಡಿಸುವ ಉತ್ತರ ಕೊರಿಯಾ ಇದೀಗ ಅಂತಹದ್ದೇ ಒಂದು ಎಡವಟ್ಟು ಮಾಡಿದೆ.
ಹೌದು ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ದೇಶಗಳ ನಡುವೆ ಒಂದಿಲ್ಲೊಂದು ಕಾರಣಕ್ಕೆ ಸಮಸ್ಯೆಗಳು ಎದುರಾಗುತ್ತಲ್ಲೇ ಇರುತ್ತವೆ.
ಇದೀಗ ಉತ್ತರ ಕೊರಿಯಾವು ಜಪಾನ್ ಹಾಗೂ ದಕ್ಷಿಣ ಕೊರಿಯಾ ನಡುವೆ ಇರುವ ಸಮುದ್ರ ಭಾಗದಲ್ಲಿ ಕ್ಷಿಪಣಿ ಉಡಾವಣೆ ಮಾಡಿದೆ.
ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ಜಪಾನ್‌ನಲ್ಲಿ ಗೊಂದಲವನ್ನು ಹುಟ್ಟುಹಾಕಿದೆ.
ಕ್ಷಿಪಣೆ ಉಡಾವಣೆಯಾದ ನಿರ್ದಿಷ್ಟ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲು ಜಪಾನ್ ಮುಂದಾಗಿತ್ತು.
ಆದರೆ, 30 ನಿಮಿಷಗಳಲ್ಲಿ ಆದೇಶ ಹಿಂತೆಗೆದುಕೊಳ್ಳಲಾಯಿತು.
ಜಪಾನ್‌ನ ಸಮುದ್ರಭಾಗವಾದ ಹೊಕ್ಕೈಡೋದ ಪ್ರದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.
ಅಲ್ಲಿನ ನಿವಾಸಿಗಳಿಗೆ ಗುರುವಾರ ಬೆಳಿಗ್ಗೆ ತುರ್ತಾಗಿ ಸ್ಥಳ ಬದಲಾವಣೆಯನ್ನು ಮಾಡಲು ಸೂಚನೆ ನೀಡಲಾಗಿತ್ತು.
ಕ್ಷಿಪಣಿಯು ದ್ವೀಪದ ಸಮೀಪ ಬರದೆ ಮುಂದೆ ಸಮುದ್ರದಲ್ಲಿ ಇದು ಇಳಿದಿದ್ದರಿಂದಾಗಿ ಭಾರೀ ಸಮಸ್ಯೆ ಎದುರಾಗಲಿಲ್ಲ ಎನ್ನಲಾಗಿದೆ.
ಉತ್ತರ ಕೊರಿಯಾ ಈ ವರ್ಷ ಈಗಾಗಲೇ 27 ಕ್ಷಿಪಣಿಗಳನ್ನು ಹಾರಿಸಿರುವುದರಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.
ಉತ್ಕ್ಷೇಪಕವು ಸುಮಾರು 1,000 ಕಿಮೀ (620 ಮೈಲುಗಳು) ಹಾರಿಹೋಯಿತು.
ದಕ್ಷಿಣ ಕೊರಿಯಾದ ಮಿಲಿಟರಿ ಇದನ್ನು ಗಂಭೀರ ಪ್ರಚೋದನೆ ಎಂದು ತೀವ್ರವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.
ಉತ್ತರ ಕೊರಿಯಾ ಯಾವ ಪ್ರಮಾಣದಲ್ಲಿ ಅಥವಾ ಎಷ್ಟು ತೀವ್ರವಾದ ಕ್ಷಿಪಣೆಯನ್ನು ಉಡಾವಣೆ ಮಾಡಿದೆ ಎನ್ನುವ ಕುರಿತು
ಇಲ್ಲಿಯ ವರೆಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಅಲ್ಲದೇ ಯಾವ ಶಸ್ತ್ರಾಸ್ತ್ರವನ್ನು ಪರೀಕ್ಷಿಸಲಾಗಿದೆ ಎಂಬ ವಿವರಗಳನ್ನು ಇನ್ನೂ ಜಪಾನ್ ಬಹಿಂಗಪಡಿಸಿಲ್ಲ.
ಆದರೆ,ಉತ್ತರ ಕೊರಿಯಾದ ಪೂರ್ವ ಸಮುದ್ರ ಪ್ರದೇಶದಲ್ಲಿ ಕ್ಷಿಪಣಿ ಬಿದ್ದಿದೆ ಎಂದು ಹೇಳಲಾಗಿದೆ.
ಕ್ಷಿಪಣಿಯು ಜಪಾನ್‌ನ ವಿಶೇಷ ಆರ್ಥಿಕ ವಲಯದ ಮೇಲೆ ಹಾರಿದೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಇನ್ನು ಜಪಾನ್‌ನ ಹೊಕ್ಕೈಡೋದಲ್ಲಿನ ಶಾಲೆಗಳು ತಡವಾಗಿ ಪ್ರಾರಂಭವಾದವು.
ಅಲ್ಲದೇ ಕೆಲವು ರೈಲು ಹಾಗೂ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಪ್ಯೊಂಗ್ಯಾಂಗ್‌ನ ಪುನರಾವರ್ತಿತ ಕ್ಷಿಪಣಿ ಉಡಾವಣೆಗಳು ಜಪಾನ್‌ನ ಭದ್ರತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಒಡ್ಡುತ್ತದೆ
ಎಂದು ಜಪಾನ್‌ನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ಇತ್ತೀಚಿನ ಉಡಾವಣೆಯು ಅನಾವಶ್ಯಕವಾಗಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು
ಅಸ್ಥಿರಗೊಳಿಸುವ ಅಪಾಯವನ್ನು ಉಂಟುಮಾಡುತ್ತದೆ ಎಂದು US ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ತಿಳಿಸಿದ್ದಾರೆ.
ಈ ಇತ್ತೀಚಿನ ಉಡಾವಣೆಯು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ತನ್ನ ಮಿಲಿಟರಿಗೆ
ಯುದ್ಧ ತಡೆಗೆ "ಹೆಚ್ಚು ಪ್ರಾಯೋಗಿಕ ಮತ್ತು ಆಕ್ರಮಣಕಾರಿ" ವಿಧಾನವನ್ನು ಅಳವಡಿಸಿಕೊಳ್ಳಲು ಆದೇಶಿಸಿದ ಕೆಲವು ದಿನಗಳ ನಂತರ ಬಂದಿದೆ ಎನ್ನಲಾಗಿದೆ.
ಉತ್ತರ ಹಾಗೂ ದಕ್ಷಿಣ ಕೊರಿಯಾಗಳು ಸಾಮಾನ್ಯವಾಗಿ ಸ್ಥಳೀಯ ಸಮಯ 09:00 ಮತ್ತು 15:00 ಕ್ಕೆ
(00:00 ಮತ್ತು 06:00 GMT) ಮಿಲಿಟರಿ ಹಾಟ್‌ಲೈನ್ ಮೂಲಕ ಕರೆಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.
ಈ ದೈನಂದಿನ ಚೆಕ್-ಇನ್‌ಗಳು ದೇಶಗಳ ಗಡಿಯಲ್ಲಿ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿದೆ.
ಆದರೆ, ಕಳೆದ ಎರಡು ದಿನಗಳಿಂದ ಎರಡೂ ದೇಶಗಳ ಭದ್ರತಾ ಪಡೆಗಳು ಕರೆ ಮಾಡಿಲ್ಲ ಎಂದು ಹೇಳಲಾಗಿದೆ.
ಉತ್ತರ ಕೊರಿಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲು ಮತ್ತು ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ.
ಇದು ಯುಎಸ್ ಮತ್ತು ದಕ್ಷಿಣ ಕೊರಿಯಾ ನಡುವಿನ ಜಂಟಿ ಮಿಲಿಟರಿ ವ್ಯಾಯಾಮಗಳನ್ನು ಟೀಕಿಸಿದೆ, ಅವುಗಳು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿವೆ ಎಂದು ಆರೋಪಿಸಿದೆ.
ಅಕ್ಟೋಬರ್ 2022 ರಲ್ಲಿ, ಉತ್ತರ ಕೊರಿಯಾವು ಜಪಾನ್‌ನ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದ
ನಂತರ ಉತ್ತರ ಜಪಾನ್‌ನ ನಿವಾಸಿಗಳು ಇದೇ ರೀತಿಯ ಸೈರನ್‌ಗಳ ಸದ್ದು ಕೇಳಿಸಿಕೊಂಡಿದ್ದರು.
ಈ ಬಾರಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿರುವುದು ವರದಿ ಆಗಿಲ್ಲ.
ಇದನ್ನೂ ಓದಿರಿ: Rain in Bengaluru ಕನಿಷ್ಠ ಮಳೆಯಾದರೂ ಬೆಂಗಳೂರಿನಲ್ಲಿ ಸಮಸ್ಯೆ: ಎಚ್ಚರಿಕೆ
Tiger Population ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಳ: ಎಷ್ಟಿದೆ ನಮಲ್ಲಿ ಹುಲಿ?!