News

Noel Hanna 10 ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದ ನೋಯೆಲ್‌ ಹನ್ನಾ ವಿಧಿವಶ!

19 April, 2023 12:08 PM IST By: Hitesh
Noel Hanna, who climbed Mount Everest 10 times, died!

ಮೌಂಟ್ ಎವರೆಸ್ಟ್ ಅನ್ನು ಸತತ 10 ಬಾರಿ ಏರಿದ್ದ ಐರಿಶ್ ಖ್ಯಾತ ಪರ್ವತಾರೋಹಿ ನೋಯೆಲ್ ಹನ್ನಾ ಅವರು ವಿಧಿವಶರಾಗಿದ್ದಾರೆ.   

ವಿಶ್ವದ ಅತಿ ಎತ್ತರದ ಪರ್ವತವಾದ 26,545 ಅಡಿ ಎತ್ತರದ ಶ್ರೇಣಿಯ ಎತ್ತರದ ಶಿಖರವನ್ನು ಅವರು ಏರಿದ್ದರು.

ನಂತರ ಪಶ್ಚಿಮ ನೇಪಾಳದ ತನ್ನ ಶಿಬಿರದಲ್ಲಿ ತಡರಾತ್ರಿ ನಿಧನರಾದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅವರು ಮಾಜಿ ಅಂಗರಕ್ಷಕರಾಗಿದ್ದು, ಹನ್ನಾ ಕಳೆದ ಬುಧವಾರ ಅನ್ನಪೂರ್ಣ ಶಿಖರವನ್ನು ಏರಿರುವುದು ವರದಿ ಆಗಿದ್ದು,

ಅವರ ಮೃತದೇಹವನ್ನು ಅನ್ನಪೂರ್ಣ ಬೇಸ್ ಕ್ಯಾಂಪ್‌ನಿಂದ ಕಠ್ಮಂಡುವಿಗೆ ತರಲಾಗಿದೆ.

ಆದರೆ, ಈ ನಡುವೆ ಹನ್ನಾ  ಅವರ ಸಾವು ಯಾವ ಸಮಯದಲ್ಲಿ ಆಗಿದೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಯುಬರಾಜ್ ಖತಿವಾಡ ಎಂಬವರು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.    

ಸೋಮವಾರ ಅವರು ಪರ್ವತವನ್ನು ಹತ್ತುವ ಸಂದರ್ಭದಲ್ಲಿ ಆಮ್ಲಜನಕದ ಪ್ರಮಾಣವು ತೀರ ಕಡಿಮೆ ಇತ್ತು ಎಂದು ಹೇಳಲಾಗಿದೆ. 

ಹಲವು ಗಂಟೆಗಳ ಕಾಲ ಹುಡುಕಾಟದ ನಂತರ, ಭಾರತೀಯ ಪರ್ವತಾರೋಹಿ ಬಲ್ಜೀತ್ ಕೌರ್ (28) ಮತ್ತು ಸಹ ಪರ್ವತಾರೋಹಿ

ಅರ್ಜುನ್ ವಾಜಪೇಯ್ (30) ಅವರನ್ನು ರಕ್ಷಿಸಲಾಗಿದೆ ಎಂದು ವರದಿ ಆಗಿದೆ.  

ಇನ್ನು 34 ವರ್ಷದ ಮತ್ತೊಬ್ಬ ಭಾರತೀಯ ಪರ್ವತಾರೋಹಿಗಾಗಿ ಶೋಧ ಮುಂದುವರಿದಿದ್ದು,

ಸೋಮವಾರ ಅದೇ ಪರ್ವತದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Jagdish Shettar ಜಗದೀಶ್‌ ಶೆಟ್ಟರ್‌ ಜೊತೆ ಗುರುತಿಸಿಕೊಳ್ಳದಂತೆ ಬಿಜೆಪಿ ನಾಯಕರಿಗೆ ಖಡಕ್‌ ಸೂಚನೆ?!

ಆರೋಹಿಗಳಲ್ಲಿ ನೋಯೆಲ್ ಹಾನ್ನಾ ಅವರು ಅತ್ಯುತ್ತಮ ಪರ್ವತರೋಹಿ ಎಂದು ಹೇಳುತ್ತಾರೆ.   

ಎವರೆಸ್ಟ್ ಶಿಖರವನ್ನು ತಲುಪಿದ ಅತ್ಯಂತ ಕಿರಿಯ ಬ್ರಿಟಿಷ್ ಮಹಿಳೆ ಬೋನಿಟಾ ನಾರ್ರಿಸ್, ಟ್ವಿಟ್ಟರ್‌ನಲ್ಲಿ ಹನ್ನಾ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.  

ಅವರ ಜೊತೆಗೆ ಒಡನಾಟದ ಸಮಯವನ್ನು ಸ್ಮರಿಸಿದ್ದಾರೆ. ಅವರ ತಾಳ್ಮೆ, ತಮಾಷೆಯಾಗಿರುತ್ತಿದ್ದರು.

ಅವರ ಅಗಲಿಕೆಯನ್ನು ಇಲ್ಲಿಯವರೆಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.  

Noel Hanna, who climbed Mount Everest 10 times, died!

ಹಾನ್ನಾ ತನ್ನ ಕಾರ್ಪೊರೇಟ್ ಮ್ಯಾನೇಜ್‌ಮೆಂಟ್ ಉದ್ಯೋಗವನ್ನು ತ್ಯಜಿಸಲು ಮತ್ತು ತನ್ನದೇ ಆದ ಪರ್ವತಾರೋಹಣ

ವ್ಯವಹಾರವನ್ನು ಪ್ರಾರಂಭಿಸಲು ಮಾರ್ಷ್‌ಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ.

ಅವರ ಪರಂಪರೆಯ ಭಾಗವೆಂದರೆ ಅವರು ಜನರಿಗೆ ನೀಡಿದ ಸ್ಫೂರ್ತಿ ಎಂದು ಮಾರ್ಷ್ ಅವರು ತಿಳಿಸಿದ್ದಾರೆ.

ಹನ್ನಾ 2021 ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ತನ್ನ 10 ನೇ ಆರೋಹಣವನ್ನು ಮಾಡಿದ್ದರು.

ಅವರು ಮತ್ತು ಅವರ ಪತ್ನಿ ಎರಡೂ ಕಡೆಯಿಂದ 2009 ಮತ್ತು 2016 ರಲ್ಲಿ ಮೌಂಟ್

ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದರು ಎಂದು ದಿ ಐರಿಶ್ ಟೈಮ್ಸ್ ವರದಿ ಮಾಡಿದೆ.

ಹೆಸರಾಂತ ಸಾಹಸಿ, ಅವರು ಶಿಖರಗಳನ್ನು ಅಳೆಯುತ್ತಿದ್ದರು ಮತ್ತು ಪ್ರಪಂಚದಾದ್ಯಂತ ಕ್ರೀಡೆಗಳಲ್ಲಿ ಸ್ಪರ್ಧಿಸಿದರು. 

Today Weather Update ರಾಜ್ಯದಲ್ಲಿ ಮುಂದುವರಿದ ಒಣಹವೆ; ಅಲ್ಲಲ್ಲಿ ಮಳೆ