News

PM-KISAN ಸಮ್ಮಾನ್ ನಿಧಿ ಮೊತ್ತ ಬರುತ್ತಿಲ್ಲವೇ? ಇಲ್ಲಿ ದೂರು ನೀಡಿ ಹಣ ಪಡೆಯಿರಿ!

24 April, 2022 4:28 PM IST By: Kalmesh T
No PM-KISAN Samman Fund? Make a complaint here and get paid!

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಕೆಲವೆಡೆ ಕೆಲವು ದೋಷಗಳಿಂದ ಬಹುಪಾಲು ರೈತರಿಗೆ ಈ ಹಣ ದೊರೆಯುತ್ತಿಲ್ಲ. ಹೀಗೆ ಯಾರಿಗೆ ಪಿಎಂ ಕಿಸಾನ್‌ ನಿಧಿಯ ಮೊತ್ತ ಬಂದಿಲ್ಲವೋ ಅವರು ಇಲ್ಲಿ ದೂರು ನೀಡುವ ಮೂಲಕ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಮೊತ್ತ ನಿಮ್ಮ ಅಕೌಂಟ್‌ಗೆ ಬರುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ದೂರು ನೀಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈಗಲೇ ಪರಿಶೀಲಿಸಿ.

ಇದನ್ನೂ ಓದಿರಿ:

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

ಪಿಎಂ- ಕಿಸಾನ್ ಯೋಜನೆ ಅಡಿಯಲ್ಲಿ ಸಾಕಷ್ಟು ರೈತರಿಗೆ ಇದರ ಮೊತ್ತವನ್ನು ವಿತರಿಸಿದ್ದಾರೆ. ಆದರೂ ಇನ್ನೂ ಸಾಕಷ್ಟು ರೈತರಿಗೆ ಈ ಯೋಜನೆಯ ಅನುಕೂಲ ಸಿಗಬೇಕಿದೆ. ತಮ್ಮ ಹೆಸರನ್ನು ಸೇರಿಸಲು ಅಂಥವರು ಪಿಎಂ ಕಿಸಾನ್ ವೆಬ್ ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಪ್ರಯತ್ನಿಸಬಹುದು.

ಈ ಮಧ್ಯೆ ಸರ್ಕಾರದಿಂದ ಫೋನ್​ ನಂಬರ್‌ಗಳ ಪಟ್ಟಿಯನ್ನು ನೀಡಲಾಗಿದೆ. ಒಂದು ವೇಳೆ ತಮ್ಮ ಕಂತು ಬಂದಿಲ್ಲ ಎಂದಾದಲ್ಲಿ ಅದರ ಮೂಲಕ ಜನರು ದೂರು ನೀಡಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

ದೂರು ನೀಡುವುದು ಹೇಗೆ?

ನೀವು ಅರ್ಹ ರೈತರಾಗಿದ್ದು ನಿಮ್ಮ ಕಂತಿನ 2 ಸಾವಿರ ರೂಪಾಯಿಯನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪಡೆಯದಿದ್ದಲ್ಲಿ ಪಿಎಂ ಕಿಸಾನ್ ಹೆಲ್ಪ್​ ಡೆಸ್ಕ್‌ನಲ್ಲಿ ದೂರು ನೀಡಬಹುದು. ಸೋಮವಾರದಿಂದ ಶುಕ್ರವಾರದ ತನಕ ಅವಕಾಶ ಇರುತ್ತದೆ. ದೂರು ನೀಡಬಹುದು.

ಅಷ್ಟೇ ಅಲ್ಲ, ಇಮೇಲ್ ಐಡಿ- pmkisan-ict@gov.in ಮತ್ತು pmkisan-funds@gov.in ಅಥವಾ ಕರೆ ಮಾಡುವುದಾದಲ್ಲಿ ಪಿಎಂ-ಕಿಸಾನ್ ಸಹಾಯವಾಣಿ ಸಂಖ್ಯೆ: 011-24300606, 155261 ಪಿಎಂ ಕಿಸಾನ್ ಟೋಲ್-ಫ್ರೀ ಸಂಖ್ಯೆ: 1800-115-526 ಜತೆಗೆ ಆನ್‌ಲೈನ್ ಮೂಲಕ ಈ ಲಿಂಕ್ ಬಳಸಿ ದೂರು ನೀಡಬಹುದು: https://pmkisan.gov.in/grievance.aspx ಆಧಾರ್​ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್​ ಸಂಖ್ಯೆಯನ್ನು ನಮೂದಿಸಿ, ಆ ನಂತರ "Get Details" ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಗುಡ್ ನ್ಯೂಸ್! e-Shram Portalನಲ್ಲಿ ನೋದಾಯಿಸಿಕೊಳ್ಳಿ ಮತ್ತು ಉದ್ಯೋಗ ಪಡೆಯಿರಿ!

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?

ಹಂತ 1: ಅಧಿಕೃತ ಪಿಎಂ ಕಿಸಾನ್ ಪೋರ್ಟಲ್‌ಗೆ ತೆರಳಬೇಕು ಹಂತ

2: Farmers Corner ಅಡಿಯಲ್ಲಿ ಮತ್ತು Beneficiary List ಬಟನ್ ಮೇಲೆ ಕ್ಲಿಕ್ ಮಾಡಬೇಕು ಹಂತ

3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್, ಹಳ್ಳಿ ವಿವರಗಳನ್ನು ನಮೂದಿಸು ಮತ್ತು "Get Report" ಬಟನ್​ ಮೇಲೆ ಕ್ಲಿಕ್ ಮಾಡಬೇಕು

ಪಿಎಂ ಕಿಸಾನ್ ಫಲಾನುಭವಿಯ ಸ್ಥಿತಿಯನ್ನು (Status) ಪ್ರದರ್ಶಿಸಲಾಗುತ್ತದೆ. ಪಿಎಂ ಕಿಸಾನ್ ಫಲಾನುಭವಿಯ ಸಂಪೂರ್ಣ ವಹಿವಾಟು ಇತಿಹಾಸ ಪ್ರದರ್ಶಿಸಲಾಗುತ್ತದೆ. ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಿದ ದಿನಾಂಕ ಮತ್ತು ಅದನ್ನು ಜಮಾ ಮಾಡಿದ ಬ್ಯಾಂಕ್ ಖಾತೆ ಸೇರಿದಂತೆ ಕೊನೆಯ ಕಂತಿನ ವಿವರಗಳು ಸ್ಕ್ರೀನ್​ ಮೇಲೆ ಕಾಣಿಸುತ್ತವೆ. ಫಲಾನುಭವಿಗಳ ನಗದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ವಿನಾ ನಗದು ಮೂಲಕ ಅಲ್ಲ.

ರೈತರಿಗೆ ಸಿಹಿ ಸುದ್ದಿ: Pm Kisan ಸಮ್ಮಾನ್ ನಿಧಿ 11ನೇ ಕಂತು ಈ ದಿನ ನಿಮ್ಮ ಖಾತೆಗೆ ಬರಲಿದೆ!

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!