ಕೇಂದ್ರ ಶಿಕ್ಷಣ ಸಚಿವಾಲಯ National Institutional Ranking Framework (NIRF Rankings) ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಇದರಲ್ಲಿ 'ಟಾಪ್ 10 ವಿಶ್ವವಿದ್ಯಾಲಯ' ವಿಭಾಗದಲ್ಲಿ 'ಐಐಎಸ್ಸಿ' ಮೊದಲ ರ‍್ಯಾಂಕ್ ಗಳಿಸಿದೆ.
ಇದನ್ನೂ ಓದಿರಿ: ಗುಡ್‌ನ್ಯೂಸ್: ರೈತರ ಬೆಳೆಹಾನಿಗೆ ಹೆಚ್ಚುವರಿ ದರ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ! ಎಷ್ಟು ಗೊತ್ತೆ?
ಕೇಂದ್ರ ಶಿಕ್ಷಣ ಸಚಿವಾಲಯವು 'ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್‌ವರ್ಕ್' (NIRF Rankings) ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಇದರಲ್ಲಿ 'ಟಾಪ್ 10 ವಿಶ್ವವಿದ್ಯಾಲಯ' ಸಂಶೋಧನಾ ವಿಭಾಗದಲ್ಲಿ ಶೇ. 88.62 ಅಂಕಗಳನ್ನು ಗಳಿಸಿರುವ ಐಐಎಸ್ಸಿ, 2021ರಲ್ಲಿ ಪಡೆದಿದ್ದ 86.48 ಅಂಕಗಳ ದಾಖಲೆಯನ್ನು ಮೀರಿ ಸಾಧನೆ ಮಾಡಿದೆ.
ಇದೇ ವೇಳೆ, ಸಮಗ್ರ ವಿಭಾಗದಲ್ಲಿ ದೇಶದ ಶ್ರೇಷ್ಠ ಉನ್ನತ ಶಿಕ್ಷಣ ಸಂಸ್ಥೆಗಳ ಅಗ್ರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈ ವಿಭಾಗದಲ್ಲಿ ಮೊದಲ ಸ್ಥಾನವು ಮದ್ರಾಸ್‌ನ ಐಐಟಿ ಪಾಲಾಗಿದೆ.
ರೈತರಿಗೆ ಬಂಪರ್ ಸುದ್ದಿ: ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?
ವಿಶ್ವವಿದ್ಯಾಲಯ ವಿಭಾಗದಲ್ಲಿ ಟಾಪ್ 10
1. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
2. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ದಿಲ್ಲಿ
3. ಜಾಮಿಯ ಮಿಲಿಯ ಇಸ್ಲಾಮಿಯಾ, ದಿಲ್ಲಿ
4. ಜಾದವಪುರ ವಿಶ್ವವಿದ್ಯಾಲಯ, ಕೋಲ್ಕೊತಾ (ಪಶ್ಚಿಮ ಬಂಗಾಳ)
5. ಅಮೃತ ವಿಶ್ವ ವಿದ್ಯಾಪೀಠಮ್, ಕೊಯಮತ್ತೂರು (ತಮಿಳುನಾಡು)
World Snake Day: “ವಿಶ್ವ ಹಾವುಗಳ ದಿನ”ದ ಕುರಿತು ನಾಗರಾಜ್ ಬೆಳ್ಳೂರು ಅವರು ಬರೆದ ಕುತೂಹಲಕಾರಿ ಲೇಖನ!
6. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ (ಉತ್ತರ ಪ್ರದೇಶ)
7. ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ, ಮಣಿಪಾಲ (ಕರ್ನಾಟಕ)
8. ಕೋಲ್ಕತ್ತ ವಿಶ್ವವಿದ್ಯಾಲಯ, ಕೋಲ್ಕೊತಾ (ಪಶ್ಚಿಮ ಬಂಗಾಳ)
9. ವೇಲೂರು ತಾಂತ್ರಿಕ ಸಂಸ್ಥೆ , ವೇಲೂರು (ತಮಿಳುನಾಡು)
10. ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್ (ತೆಲಂಗಾಣ)