News

ಆಕರ್ಷಕ "ಮಣ್ಣಿನ ಮನೆ" ನಿರ್ಮಿಸಿದ ಸಂಸದ ಸಾರಂಗಿ! ಈ ಮನೆ ನೋಡಿದ್ರೆ ನೀವೆಲ್ಲ ಅಚ್ಚರಿಪಡ್ತೀರಾ!

26 February, 2023 4:40 PM IST By: Kalmesh T
MP Sarangi built an attractive mud house! You will all be surprised if you see this house!

ಈಗೆಲ್ಲ ಎಲ್ಲಿ ನೋಡಿದರೂ ಬರಿ ಬಿಲ್ಡಿಂಗ್‌ಗಳೆ ಕಾಣುತ್ತಿರುವ ಸಂದರ್ಭದಲ್ಲಿ ಈ ಸಂಸದರೊಬ್ಬರು ಹಳ್ಳಿ ಸೊಗಡನ್ನು ಕಟ್ಟಿಕೊಡುವ ಮಣ್ಣಿನ ಮನೆ ಕಟ್ಟಿಕೊಂಡಿದ್ದಾರೆ. ಇದನ್ನು ನೋಡಿದ್ರೆ ಎಂಥವರು ಅರೆಕ್ಷಣ ಬೆರಗಾಗದೆ ಇರಲಾರರು.

150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ

ಸಂಸದ ಪ್ರತಾಪ್ ಚಂದ್ರ ಸಾರಂಗಿ (MP Pratap Chandra Sarangi) ರಾಜಧಾನಿ ದೆಹಲಿಯಲ್ಲಿ ಹಳ್ಳಿ ಸೊಗಡನ್ನು ನೆನಪಿಸುವ "ಮಣ್ಣಿನ ಮನೆ" ನಿರ್ಮಿಸಿದ್ದಾರೆ. ಅಲ್ಲದೇ ಈ ಮನೆ ಇದೀಗ ಭಾರೀ ಚರ್ಚೆಯ ವಿಷಯವಾಗಿದ್ದು, ಸಾಕಷ್ಟು ಜನರಿಗೆ ತುಂಬಾ ಮೆಚ್ಚುಗೆಯಾಗುತ್ತಿದೆ ಕೂಡ.

ಪ್ರತಾಪ ಚಂದ್ರ ಸಾರಂಗಿರವರು ಭಾರತ ಸರ್ಕಾರದಲ್ಲಿ ಪಶುಪಾಲನೆ, ಮೀನುಗಾರಿಕೆ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಾಜ್ಯ ಸಚಿವರಾಗಿದ್ದಾರೆ.

ಅವರು ಒಡಿಶಾದ ಬಾಲಸೋರ್ ನ ರಾಜಕಾರಣಿಯಾಗಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷ (BJP)ಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Success Story : ಮನೆಯಲ್ಲಿ ಸಾವಯವ ಕೃಷಿ ಮಾಡಿ 7 ಲಕ್ಷ ಗಳಿಸುತ್ತಿದ್ದಾರೆ ಈ ವ್ಯಕ್ತಿ!

ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ಉನ್ನತ ಚಿಂತನೆ ಮತ್ತು ಸರಳ ಜೀವನದಿಂದಾಗಿ ಈಗಾಗಲೇ ಪ್ರಸಿದ್ಧರಾಗಿದ್ದಾರೆ.  ಅಲ್ಲದೇ ಅವರ ಸರಳತೆ ಮತ್ತು ಮಿತವ್ಯಯದ ಜೀವನದಿಂದ ಜನರು ತುಂಬಾ ಪ್ರಭಾವಿತರಾಗಿದ್ದಾರೆ.

ಇಂತಹ ಕಾರಣಗಳೀಂದಲೇ ಸಂಸದ ಸಾರಂಗಿಯವುರ ಸದಾ ಜನ ಸಾಮಾನ್ಯರಲ್ಲಿ ಚರ್ಚೆಯ ವಿಷಯವಾಗಿ ಉಳಿಯುತ್ತಾರೆ. 

ಈ ಆಟೋ ಹತ್ತಿದ್ರೆ ಸಾಕು ಬುಕ್ಸ್‌, ಬಿಸ್ಕೆಟ್‌, ಸ್ಯಾನಿಟರಿ ಪ್ಯಾಡ್‌, ನೀರು ಉಚಿತ! ಎಲ್ಲಿ ಅಂತೀರಾ ಈ ಸುದ್ದಿ ಓದಿ...

ಸಂಸದ ಸಾರಂಗಿ ಹುಮಾಯೂನ್ ರಸ್ತೆ ಪಕ್ಕದ ನಗರದಲ್ಲಿ ಮಣ್ಣಿನ ಮನೆ ನಿರ್ಮಿಸಿದ್ದಾರೆ. ಈ ಸುಂದರವಾದ ಮತ್ತು ಸ್ವಚ್ಛವಾದ ಮನೆಯ ವೈಶಿಷ್ಟ್ಯಗಳ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ.

ಮನೆಯ ನಿರ್ಮಾಣ ಶೈಲಿ, ವಿನ್ಯಾಸ ಹಾಗೂ ಸರಳವಾದ ಯೋಜನೆಗಳಿಂದಲೇ ಇದೀಗ ಹೆಚ್ಚು ಸುದ್ದಿಯಾಗುತ್ತಿದೆ.

ಈ ಮನೆಯೂ ಒಂದು ಮಹಡಿ ಮತ್ತು ಎರಡು ಮಲಗುವ ಕೋಣೆಯ ರಚನೆಯನ್ನು ಹೊಂದಿದೆ. ನೋಡುವುದಕ್ಕೆ ಬಹಳ ಆಕರ್ಷಕವಾಗಿದ್ದು, ಮಣ್ಣಿನ ಗೋಡೆಗಳು , ಬಿದಿರಿನ ಛಾವಣಿಗಳು ಮತ್ತು ಗೋಡೆಗಳ ಮೇಲೆ ಸುಂದರವಾದ ಮಣ್ಣಿನಿಂದಲೇ ಮಾಡಲಾದ ಕೆತ್ತನೆಗಳನ್ನು ಹೊಂದಿದೆ.

ಎಲೆ ಬಳ್ಳಿಯಂಥಹ ಮಣ್ಣಿನಿಂದಲೇ ಸುಂದರವಾಗಿ ಚಿತ್ರಣಗಳನ್ನು ಕೆತ್ತಲಾಗಿದೆ. ಅಲ್ಲದೇ ಗೋಡೆಯ ಮೇಲೆ ಪಸೆಚಿತ್ತಾರಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಮನೆಯ ಹಿಂದೆ ಮಣ್ಣಿನ ಮುಖಮಂಟಪ , ಹಸುವಿನ ಸಗಣಿ ಬಳಿದ ಗೋಡೆಗಳು , ಮನೆಯಲ್ಲಿ ತಯಾರಿಸಿದ ಮಂಚ,  

ಹೀಗೆ ಅತ್ಯಂತ ಸರಳತೆಯೊಂದಿಗೆ ವಿಶಿಷ್ಟ ಸೌಂದರ್ಯದೊಂದಿಗೆ ಈ ಮನೆಯನ್ನು ಕಟ್ಟಲಾಗಿದೆ. ಅಪ್ಪಟ ಗ್ರಾಮೀಣ ಪ್ರದೇಶದ ಚಿತ್ರಣವನ್ನೇ ಕಟ್ಟಿಕೊಡುವಂತಹ ಮನೆಯನ್ನು ಕಟ್ಟಲಾಗಿದೆ.

ಪ್ರತಾಪ್ ಚಂದ್ರ ಸಾರಂಗಿ ಕುರಿತು

ಗಮನಾರ್ಹವೆಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರತಾಪ್ ಸಾರಂಗಿ ಅವರು ತಮ್ಮ ಸರಳತೆಗೆ ಹೆಸರಾದವರು. ಒಡಿಶಾದ ಬಾಲಸೋರ್‌ನ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು 2019 ರಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅವರು ಜುಲೈ 2021 ರಲ್ಲಿ ಕೇಂದ್ರ ರಾಜ್ಯ ಸಚಿವರಾದರು.

ಪ್ರತಾಪ್ ಚಂದ್ರ ಸಾರಂಗಿ ಅವರು ಬಡ ಕುಟುಂಬದಲ್ಲಿ ಜನಿಸಿದರು. ಸಾರಂಗಿಯವರು ಪ್ರಾರಂಭದಿಂದಲೂ ಸರಳತೆಯನ್ನು ಇಷ್ಟಪಡುತ್ತ ಬದುಕಿದ್ದರು. ಅವರು ಒಡಿಶಾದ ನೀಲಗಿರಿ ಫಕೀರ್ ಮೋಹನ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಇದಾದ ನಂತರ ತಮ್ಮ ಜೀವನದುದ್ದಕ್ಕೂ ಮದುವೆಯಾಗದಿರಲು ನಿರ್ಧರಿಸಿದರು. ಅಲ್ಲದೇ ಕೊನೆಯ ದಿನಗಳವರೆಗೂ ತಮ್ಮ ತಾಯಿಯ ಸೇವೆಯನ್ನು ಮುಂದುವರೆಸಿದರು. ಸಂಸದ ಸಾರಂಗಿ ಅವರು 2004ರಿಂದ 2009ರವರೆಗೆ ಶಾಸಕರಾಗಿದ್ದರು.