News

Monkey pox: ಸೆಕ್ಸ್ ಮೂಲಕವು ಹರಡುತ್ತದಂತೆ ಮಂಕಿ ಫಾಕ್ಸ್; ಸರ್ಕಾರದ ಹೊಸ ಮಾರ್ಗಸೂಚಿ!

01 June, 2022 10:57 AM IST By: Kalmesh T
Monkey pox: Monkey Fox as sex spreads

ಮಂಕಿ ಫಾಕ್ಸ್ ಸೋಂಕಿನ ಲಕ್ಷಣವಿರುವವರೊಂದಿಗೆ ಸೆಕ್ಸ್ ಹೊಂದುವುದನ್ನು ನಿಲ್ಲಿಸಬೇಕು ಅಥವಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಇಂಗ್ಲೆಂಡ್ ಆರೋಗ್ಯ ಪ್ರಾಧಿಕಾರಗಳು ಮಂಗಳವಾರ ಹೊಸ ಮಾರ್ಗಸೂಚಿ ಹೊರಡಿಸಿವೆ.

ಇದನ್ನೂ ಓದಿರಿ:  ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಇಂಗ್ಲೆಂಡ್ ನಲ್ಲಿ ಈ ವಾರದಲ್ಲಿ 71 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟಾರೇ ಪ್ರಕರಣಗಳ ಸಂಖ್ಯೆ 179ಕ್ಕೆ ಏರಿಕೆಯಾಗಿರುವುದರಿಂದ ಸ್ಕಾಟ್ ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ವೆಲ್ಸ್ ಗಳ ಆರೋಗ್ಯ ಪ್ರಾಧಿಕಾರಗಳೊಂದಿಗೆ ಯುಕೆ ಆರೋಗ್ಯ ಸುರಕ್ಷತಾ ಏಜೆನ್ಸಿ ಈ ಹೊಸ ಆದೇಶ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಮಂಕಿಪಾಕ್ಸ್ ಸೋಂಕಿತರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ಸಹ ನಿಲ್ಲಿಸುವಂತೆ ಸಲಹೆ ನೀಡಲಾಗಿದೆ.

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಮಂಕಿಪಾಕ್ಸ್ ಸಾಮಾನ್ಯವಾಗಿ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಭರವಸೆ ನೀಡುತ್ತೇವೆ. ಒಟ್ಟಾರೇ ಸಾಮಾನ್ಯ ಜನರಿಗೆ ತೊಂದರೆ ಕಡಿಮೆಯಾಗಿದೆ ಎಂದು ವೆಲ್ಸ್ ನ  ಹೆಲ್ತ್ ಪ್ರೊಟೆಕ್ಷನ್ ಫಾರ್ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕ  ಅನಿವಾಸಿ ಭಾರತೀಯ ಡಾ. ಗಿರಿ ಶಂಕರ್  ಹೇಳಿದ್ದಾರೆ.

ಈ ಮಾರ್ಗಸೂಚಿ ಅಭಿವೃದ್ಧಿಗೆ ಸ್ಕಾಟ್ ಲ್ಯಾಂಡ್, ಉತ್ತರ ಐರ್ಲೆಂಡ್ ನ ಸಾರ್ವಜನಿಕ ಆರೋಗ್ಯ ಏಜೆನ್ಸಿ  ಹಾಗೂ ಯುಕೆ ಹೆಲ್ತ್ ಸುರಕ್ಷತಾ ಏಜೆನ್ಸಿಯೊಂದಿಗೆ ಕಾರ್ಯೋನ್ಮುಖರಾಗಿರುವುದಾಗಿ ಅವರು ತಿಳಿಸಿದ್ದಾರೆ.

ಯುವಜನತೆಗೆ ಅದ್ಬುತ ಅವಕಾಶ! 67 ಹುದ್ದೆಗಳಿಗೆ ಯುಪಿಎಸ್ಸಿ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ!

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

ಮಂಕಿಪಾಕ್ಸ್ ದೃಢಪಟ್ಟ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಐಸೋಲೆಟೆಡ್ ಆಗಬೇಕು, ತಮ್ಮ ದೇಹದ ಯಾವುದೇ ಭಾಗದಲ್ಲಾದರೂ ಹೊಸ ಗಾಯ ಅಥವಾ ದದ್ದು, ಕಲೆಗಳು, ಕಾಣಿಸಿಕೊಂಡರೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ.

ಸೆಕ್ಸ್ ಮೂಲಕವೂ ಮಂಕಿಪಾಕ್ಸ್ ಹರಡುವ ಬಗ್ಗೆ ಪುರಾವೆಗಳು ದೂರೆತಿರುವುದರಿಂದ ಅದಷ್ಟು ಅದನ್ನು ತಡೆಗಟ್ಟುವುದು ಒಳಿತು. ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸುವಂತೆ  ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.