News

ಹೊಸ ವರ್ಷಕ್ಕೆ ಮೋದಿ ಸಿಹಿಸುದ್ದಿ: 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರಧಾನ್ಯ ವಿತರಣೆ - 2 ಲಕ್ಷ ಕೋಟಿ ಸಬ್ಸಿಡಿ!

01 January, 2023 11:31 AM IST By: Kalmesh T
Free food grain Distribution to 81.35 Crore Beneficiaries - Rs 2 Lakh Crore Subsidy!

ಕೇಂದ್ರದ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯು ಇಂದಿನಿಂದ (ಜನವರಿ 1, 2023) ಪ್ರಾರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟ ಮಾಡಿದ ನಿರ್ಧಾರದ ಪ್ರಕಾರ, ಹೊಸ ಯೋಜನೆಯು NFSA 2013ರ ಕಾಯ್ದೆಯಡಿಯಲ್ಲಿ 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು 2023ಕ್ಕೆ ಒದಗಿಸುತ್ತದೆ.

Fitment Factor: ಸರ್ಕಾರಿ ನೌಕರರೇ ಗಮನಿಸಿ, ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿದ್ಧತೆ!

ಹೊಸವರ್ಷ ಜನವರಿ 1, 2023 ರಿಂದ ಕೇಂದ್ರ ಸರ್ಕಾರದಿಂದ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆ ಅಂತ್ಯೋದಯ ಅನ್ನ ಯೋಜನೆ(AAY) ಮತ್ತು ಆದ್ಯತೆಯ ಕುಟುಂಬಗಳು( Priority house hold) PHH ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಶೂನ್ಯ ಬೆಲೆಯನ್ನು ಪ್ರತಿಬಿಂಬಿಸುವ ಮಾರ್ಪಡಿಸಿದ ವೇಳಾಪಟ್ಟಿ I ರ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಭಾರತೀಯ ಆಹಾರ ನಿಗಮ(FCI)ದ ಪ್ರಧಾನ ವ್ಯವಸ್ಥಾಪಕರು ಮೊದಲ ವಾರದಲ್ಲಿ ಪ್ರತಿದಿನ ಮೂರು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು.

ಕೇಂದ್ರದ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯು ಇಂದಿನಿಂದ (ಜನವರಿ 1, 2023) ಪ್ರಾರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟ ಮಾಡಿದ ನಿರ್ಧಾರದ ಪ್ರಕಾರ, ಹೊಸ ಯೋಜನೆಯು NFSA 2013ರ ಕಾಯ್ದೆಯಡಿಯಲ್ಲಿ 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು 2023ಕ್ಕೆ ಒದಗಿಸುತ್ತದೆ.

ಈ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (NFSA) ಪರಿಣಾಮಕಾರಿ ಮತ್ತು ಏಕರೂಪದ ಅನುಷ್ಠಾನವಾಗಿದೆ.

ಗುಡ್‌ನ್ಯೂಸ್‌: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಒಪ್ಪಿಗೆ– ಸಿಎಂ ಬಸವರಾಜ ಬೊಮ್ಮಾಯಿ

ಭಾರತ ಸರ್ಕಾರವು ರಾಷ್ಟ್ರದ ಜನರ ಬಗ್ಗೆ ಸಾಮಾಜಿಕ ಮತ್ತು ಕಾನೂನು ಬದ್ಧತೆಯನ್ನು ಹೊಂದಿದೆ. ಸಾಕಷ್ಟು ಪ್ರಮಾಣದ ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯ ಮೂಲಕ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಹೊಂದಿದೆ ಎಂದು ಕೇಂದ್ರ ವರದಿಯಲ್ಲಿ ತಿಳಿಸಿದೆ.

ಈ ಮೂಲಕ ಜನರು ಗೌರವಯುತ ಜೀವನ ನಡೆಸಬೇಕೆಂದು ಬಯಸುತ್ತದೆ. ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡುವ 81.35 ಕೋಟಿ ಜನಸಂಖ್ಯೆಯ ಅತ್ಯಂತ ದುರ್ಬಲ ಶೇಕಡಾ 67ರಷ್ಟು ಜನರಿಗೆ ಈ ಬದ್ಧತೆಯನ್ನು ಪೂರೈಸಲು, ಒಂದು ರಾಷ್ಟ್ರ - ಒಂದು ಬೆಲೆ - ಒಂದು ಪಡಿತರ ಯೋಜನೆ ಪೂರೈಸಲು ಹೊಸ ಕೇಂದ್ರ ವಲಯ ಯೋಜನೆಯನ್ನು ಪ್ರಾರಂಭಿಸಲು ಸಚಿವ ಸಂಪುಟ ನಿರ್ಧರಿಸಿತು.

ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ಎಲ್ಲಾ NFSA ಫಲಾನುಭವಿಗಳಿಗೆ ಅಂದರೆ ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳು ಮತ್ತು ಆದ್ಯತಾ ಕುಟುಂಬ (PHH) ವ್ಯಕ್ತಿಗಳಿಗೆ ಮುಂದಿನ ಒಂದು ವರ್ಷಕ್ಕೆ ದೇಶಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳ ವ್ಯಾಪಕ ಜಾಲದ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತದೆ.

ಈ ನಿರ್ಧಾರವು ಎನ್‌ಎಫ್‌ಎಸ್‌ಎ-2013 ರ ನಿಬಂಧನೆಗಳನ್ನು ಬಡವರಿಗೆ ಆಹಾರ ಧಾನ್ಯಗಳ ಲಭ್ಯತೆಯ ವಿಷಯದಲ್ಲಿ ಬಲಪಡಿಸುತ್ತದೆ.

ಹೊಸ ಸಂಯೋಜಿತ ಯೋಜನೆಯು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಎರಡು ಆಹಾರ ಸಬ್ಸಿಡಿ ಯೋಜನೆಗಳನ್ನು ಒಳಗೊಳ್ಳುತ್ತದೆ- a) NFSA ಗಾಗಿ ಭಾರತೀಯ ಆಹಾರ ನಿಗಮ-FCI ಗೆ ಆಹಾರ ಸಬ್ಸಿಡಿ, ಮತ್ತು b) NFSA ಅಡಿಯಲ್ಲಿ ರಾಜ್ಯಗಳು ವಿಕೇಂದ್ರೀಕೃತ ಖರೀದಿ ರಾಜ್ಯಗಳಿಗೆ ಆಹಾರ ಸಬ್ಸಿಡಿ, ಉಚಿತ ಆಹಾರ ಧಾನ್ಯಗಳ ಸಂಗ್ರಹಣೆ, ಹಂಚಿಕೆ ಮತ್ತು ವಿತರಣೆಯೊಂದಿಗೆ ವ್ಯವಹರಿಸುತ್ತದೆ.

ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೊರೆಯಲಿದೆ ಬರೋಬ್ಬರಿ 2 ಲಕ್ಷ ಮಾಸಿಕ ಪಿಂಚಣಿ!

ಉಚಿತ ಆಹಾರಧಾನ್ಯಗಳು ಏಕಕಾಲದಲ್ಲಿ ದೇಶಾದ್ಯಂತ ಒಂದು ರಾಷ್ಟ್ರ ಒಂದು ರೇಷನ್ ಕಾರ್ಡು(ONORC) ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನವನ್ನು ಹೊಂದಿರುತ್ತದೆ. ಆಯ್ಕೆ ಆಧಾರಿತ ವೇದಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.

2023 ರ ವರ್ಷಕ್ಕೆ 2 ಲಕ್ಷ ಕೋಟಿ ಹೆಚ್ಚಿನ ಆಹಾರ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ಹೊಸ ಯೋಜನೆಯು ಫಲಾನುಭವಿ ಮಟ್ಟದಲ್ಲಿ NFSA ಅಡಿಯಲ್ಲಿ ಆಹಾರ ಭದ್ರತೆಯ ಮೇಲೆ ಏಕರೂಪತೆ ಮತ್ತು ಸ್ಪಷ್ಟತೆಯನ್ನು ತರುವ ಗುರಿಯನ್ನು ಹೊಂದಿದೆ.

ಈ ಕ್ಷೇತ್ರದಲ್ಲಿ ನಿರ್ಧಾರವನ್ನು ಕಾರ್ಯಗತಗೊಳಿಸಲು:

ಎ.ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಗಳು-Department of Food and Public Distribution-DFPD) ಮೊನ್ನೆ ಡಿಸೆಂಬರ್ 29ರಂದು ಎಲ್ಲಾ ರಾಜ್ಯ ಆಹಾರ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದಾರೆ.

ಉಚಿತ ಆಹಾರಧಾನ್ಯ ವಿತರಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತಾಂತ್ರಿಕ ನಿರ್ಣಯಗಳನ್ನು ಒಳಗೊಂಡಂತೆ ಚರ್ಚಿಸಲಾಯಿತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 1 ಜನವರಿ 2023 ರಿಂದ ಉಚಿತ ಆಹಾರಧಾನ್ಯ ಯೋಜನೆಯನ್ನು ಜಾರಿಗೆ ತರಲು ಭರವಸೆ ನೀಡಿವೆ.

ಆಧಾರಕಾರ್ಡ್‌ ಹೊಂದಿರುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ: ನೀವಿದನ್ನು ಪಾಲಿಸಲೇಬೇಕು!

ಬಿ.ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತೆಯ ಕುಟುಂಬಗಳು ಫಲಾನುಭವಿಗಳಿಗೆ 1ನೇ ಜನವರಿ 2023 ರಿಂದ 31ನೇ ಡಿಸೆಂಬರ್ 2023 ರವರೆಗೆ ಆಹಾರ ಧಾನ್ಯಗಳ ಶೂನ್ಯ ಬೆಲೆಯನ್ನು ಮಾರ್ಪಡಿಸಿದ ವೇಳಾಪಟ್ಟಿ I ರ ಅಧಿಸೂಚನೆಯನ್ನು ಇಂದು ಹೊರಡಿಸಿ, ರಾಜ್ಯಗಳು/UTಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಸಿ. ಎಫ್‌ಸಿಐನ ಎಲ್ಲಾ ಪ್ರಧಾನ ವ್ಯವಸ್ಥಾಪಕರು ತಮ್ಮ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರತಿ ದಿನ ಮೂರು ಪಡಿತರ ಅಂಗಡಿಗಳಿಗೆ ಕಡ್ಡಾಯವಾಗಿ ನಾಳೆ ಜನವರಿ 1ರಿಂದ 7ರವರೆಗೆ ಭೇಟಿ ನೀಡುವಂತೆ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ-DFPD ನೋಡಲ್ ಅಧಿಕಾರಿಗೆ ಪ್ರತಿದಿನ ಪರಿಶೀಲನೆಗಾಗಿ ಮತ್ತು ಸರಿಪಡಿಸುವ ಕ್ರಮ ತೆಗೆದುಕೊಳ್ಳಲು ನೀಡಿರುವ ವಿಧಾನದಲ್ಲಿ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಲಾಗಿದೆ.

ಡಿ. ಉಚಿತ ಆಹಾರಧಾನ್ಯಗಳ ದೃಷ್ಟಿಯಿಂದ, ಫಲಾನುಭವಿಗಳಿಗೆ ಆಹಾರಧಾನ್ಯಗಳನ್ನು ವಿತರಿಸಲು ವಿತರಕರ ಮೊತ್ತವನ್ನು ಒದಗಿಸುವ ಕಾರ್ಯವಿಧಾನದ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ಸಹ ನೀಡಲಾಗಿದೆ.