ರೈತರು ಆದಾಯ ವೃದ್ಧಿಸಿಕೊಳ್ಳಲು ಹಲವು ಮಾರ್ಗಗಳು ಇವೆ. ಇಲ್ಲೊಬ್ಬ ರೈತರು ಒಣಹುಲ್ಲಿನಿಂದಲೇ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ!
ಹೌದು ಅಚ್ಚರಿ ಎನಿಸಿದರೂ ಇದು ಸತ್ಯ. ಇಲ್ಲೊಬ್ಬರು ರೈತರು ಒಣಹುಲ್ಲಿನ ನಿರ್ವಹಣೆಯಿಂದ ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.
ಅದರ ವಿವರ ಇಲ್ಲಿದೆ.
ಹರಿಂದರ್‌ಜೀತ್ ಸಿಂಗ್‌ಗಿಲ್ ರೈತ ಕಾನೂನು ಪದವೀಧರನಾಗಿದ್ದು, ಭತ್ತದ ಒಣಹುಲ್ಲಿನ ನಿರ್ವಹಣೆಯಿಂದ 31 ಲಕ್ಷ ರೂಪಾಯಿಗೂ
ಹೆಚ್ಚು ಮೊತ್ತದ ಆದಾಯವನ್ನು ಗಳಿಸಿದ್ದಾರೆ.
ಅವರು ಈ ಋತುವಿನಲ್ಲಿ ಭತ್ತದ ಕೊಯ್ಲು ಪ್ರಕ್ರಿಯೆಗಳನ್ನು ಮಾಡಿದ್ದು, ಇದಾದ ನಂತರ 5 ಲಕ್ಷ ಮೌಲ್ಯದ ಸೆಕೆಂಡ್ ಹ್ಯಾಂಡ್
ಸ್ಕ್ವೇರ್ ಬೇಲರ್ ಮತ್ತು ರ್ಯಾಕ್ ಖರೀದಿಸಿದ್ದಾರೆ. ಈ ಋತುವಿನಲ್ಲಿ ಭತ್ತದ ಕೊಯ್ಲು ಮಾಡಿದ ನಂತರ ತನ್ನ ಹೊಲಗಳಲ್ಲಿ
ಉಳಿದಿರುವ ಸುಮಾರು 17,000 ಕ್ವಿಂಟಾಲ್‌ಗಳಷ್ಟು ಕಡ್ಡಿಗಳಿಂದ ಭತ್ತದ ಒಣಹುಲ್ಲಿನ ಮೂಟೆಗಳನ್ನು ಮಾಡಲು ಅವರು ಮುಂದಾದರು.
ಭತ್ತದ ಹುಲ್ಲಿನಿಂದ 31.45 ಲಕ್ಷ ರೂಪಾಯಿ ಗಳಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 185 ರೂಪಾಯಿಯಂತೆ ಪೇಪರ್
ಮಿಲ್‌ಗಳಿಗೆ ಮಾರಾಟ ಮಾಡಿರುವುದಾಗಿ ಅವರು ಹೇಳಿದ್ದಾರೆ.
Gold Rate Today ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಅಲ್ಪ ಹೆಚ್ಚಳ
ಈ ಪ್ರಗತಿಪರ ರೈತ ಪಂಜಾಬಿನ ಲುಧಿಯಾನದ ನೂರ್‌ಪುರ ಬೆಟ್ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಹರಿಂದರ್‌ಜೀತ್ ಸಿಂಗ್ ಗಿಲ್
ಅವರು ಜಿಲ್ಲೆಯಲ್ಲಿ ಭತ್ತದ ಒಣಹುಲ್ಲಿನ ನಿರ್ವಹಣೆಯಿಂದ 31 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸಿದ್ದಾರೆ.
ಅಷ್ಟೇ ಅಲ್ಲ ಕಸ ಕಡ್ಡಿಗಳನ್ನು ಸುಟ್ಟು ಪರಿಸರಕ್ಕೆ ಹಾನಿ ಮಾಡುವುದನ್ನೂ ತಪ್ಪಿಸಿದ್ದಾರೆ.
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಪಂಜಾಬ್, ಹರಿಯಾಣ ಹಾಗೂ ಜಾರ್ಖಂಡ್ ಸೇರಿದಂತೆ
ವಿವಿಧ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದು ಉಳಿದ ಕಚ್ಚಾ ವಸ್ತುಗಳನ್ನು ಸುಡುತ್ತಾರೆ.
ಹೀಗಾಗಿ, ಈ ಭಾಗದಲ್ಲಿ ಹವಾಮಾನ ವೈಪರೀತ್ಯ ಎದುರಾಗುವುದರ ಜೊತೆಗೆ ವಾಯುಮಾಲಿನ್ಯವೂ ಹೆಚ್ಚಾಗುತ್ತದೆ.
ಆದರೆ, ಈ ರೈತ ಎಲ್ಲರಿಗೂ ಮಾದರಿಯಾಗಿದ್ದು, ಕಚ್ಚಾ ವಸ್ತುಗಳಿಂದ ಲಾಭವನ್ನೇ ಗಳಿಸಿದ್ದಾರೆ.
Fertilizer ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ: ಪ್ರಧಾನಿ ಮೋದಿ ಅನುಮೋದನೆ!
ಯಶಸ್ವಿ ಭತ್ತದ ಒಣಹುಲ್ಲಿನ ನಿರ್ವಹಣೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು ತಮ್ಮ ಭತ್ತದ ಹುಲ್ಲು ನಿರ್ವಹಣೆ ವ್ಯವಹಾರವನ್ನು
ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದಾರೆ.
ಒಂದು ಬೇಲರ್ ಮತ್ತು ಎರಡು ಟ್ರಾಲಿಗಳನ್ನು ಖರೀದಿ ಮಾಡುವುದಕ್ಕೆ ಅವರಿಗೆ 11 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಎಲ್ಲಾ
ಖರ್ಚುಗಳನ್ನು ಪೂರೈಸಿದ ನಂತರ ಅವರು 20.45 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದಾರೆ.
ಒಣಹುಲ್ಲಿನ ನಿರ್ವಹಣೆ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ 40 ಲಕ್ಷ ರೂಪಾಯಿ ಮೌಲ್ಯದ ಎರಡು
ರೇಕ್‌ಗಳು ಮತ್ತು 17 ಲಕ್ಷ ರೂಪಾಯಿ ಮೌಲ್ಯದ ಒಂದು ಚದರ ಬೇಲರ್ ಸೇರಿದಂತೆ ರೌಂಡ್ ಬೇಲರ್ ಅನ್ನು ಖರೀದಿಸಿ ಉಳಿದ ರೈತರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಏಳು ವರ್ಷದಿಂದ ವ್ಯವಸಾಯ
ಹರಿಂದರ್‌ಜೀತ್ ಸಿಂಗ್‌ಗಿಲ್ ಅವರು ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಭತ್ತ ಅಥವಾ ಗೋಧಿ ಒಣಹುಲ್ಲಿನ
ಸುಡಲಿಲ್ಲ ಮತ್ತು ಗೋಧಿ ಬಿತ್ತನೆಗೆ ಹ್ಯಾಪಿ ಸೀಡರ್ ಅನ್ನು ಬಳಸುತ್ತಿರುವುದಾಗಿ ಹೇಳಿದ್ದಾರೆ.
ಕೋಲು ಸುಡುವುದನ್ನು ನಿಲ್ಲಿಸಿದ್ದಾಗಿನಿಂದ ಅವರ ಬೆಳೆ ಉತ್ಪಾದನೆಯೂ ಹೆಚ್ಚಳವಾಗಿದೆ ಎನ್ನುತ್ತಾರೆ.
ಅಷ್ಟೇ ಅಲ್ಲದೇ ಈ ವರ್ಷ ಅವರು ತಮ್ಮ 30 ಎಕರೆಯಲ್ಲಿ 900 ಕ್ವಿಂಟಾಲ್ ಭತ್ತವನ್ನು ಬೆಳೆದಿದ್ದಾರೆ.
ಹಲವು ರೈತರಿಗೆ ಮಾದರಿ
ಹರಿಂದರ್‌ಜೀತ್ ಸಿಂಗ್‌ಗಿಲ್ ಅವರು ಅನುಸರಿಸುತ್ತಿರುವ ಕ್ರಮವು ಈ ಭಾಗದ ಹಲವು ರೈತರಿಗೆ ಮಾದರಿಯಾಗಿದೆ.
ಹರಿಂದರ್‌ಜೀತ್ ಸಿಂಗ್‌ಗಿಲ್ ಅವರು ಕಳೆದ ಎರಡು ವರ್ಷಗಳಿಂದ ಒಣ ಹುಲ್ಲಿನ ನಿರ್ವಹಣೆ
ಮಾಡುತ್ತಿದ್ದು, ಅವರ ಹಳ್ಳಿ ಮತ್ತು ಸುತ್ತಮುತ್ತಲಿನ ಹಲವಾರು ರೈತರು ಸಹ
ಇದೇ ಅಭ್ಯಾಸವನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಅವರು.