ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಎರಡನೆ ಬಾರಿಗೆ ರಾಗಿ ಖರೀದಿಯನ್ನು ಪ್ರಾರಂಭಿಸಬೇಕಿದ್ದು, ತಾಂತ್ರಿಕ ತೊಂದರೆಯಿಂದ ಖರೀದಿಸದೆ ಟೋಕನ್ ನೀಡಿದ್ದರಿಂದ ರೈತರು ಆಕ್ರೋಶಗೊಂಡರು. 2021-22ನೆ ಮುಂಗಾರು ಋತುವಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಅನ್ವಯದಂತೆ ಸೋಮವಾರ ನೋಂದಣಿ ಮಾಡಿಸಲು ರೈತರು ಭಾನುವಾರ ರಾತ್ರಿಯಿಂದ ಬಂದು ತಂಗಿದ್ದರು.
ಇದನ್ನೂ ಓದಿರಿ:
ಕೆರೂರು ಏತ ನೀರಾವರಿ ಯೋಜನೆಗೆ CM ಬೊಮ್ಮಾಯಿ ಶಂಕುಸ್ಥಾಪನೆ!
“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್
ಕಳೆದ ಬಾರಿ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದ ರೈತರಿಗಾಗಿ ಸರ್ಕಾರವು ರಾಜ್ಯದಲ್ಲಿ ಪುನಃ 1.14 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಆದೇಶ ಹೊರಡಿಸಿತ್ತು. ನಿನ್ನೆ ಬೆಳಿಗ್ಗೆ 9.30ಕ್ಕೆ ಖರೀದಿ ಕೇಂದ್ರದ ಬಳಿಯಲ್ಲಿ ಬಂದ ಅಧಿಕಾರಿಗಳು ನೋಂದಣಿಗೆ ಮುಂದಾದಾಗ ಸರ್ವರ್ ಸಮಸ್ಯೆ ಎದುರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ತಮ್ಮ ದಾಖಲೆಗಳನ್ನು ಪಡೆದು ಕೂಡಲೇ ನೋಂದಣಿ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಧ್ಯಾಹ್ನದವರಗೆ ಕಾಲಹರಣ ಮಾಡಿದ ಅಧಿಕಾರಿಗಳು ರೈತರ ಆಕ್ರೋಶವನ್ನು ತಡೆದುಕೊಳ್ಳಲಾಗದೆ ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ದಿನಾಂಕ ನಮೂದಿಸಿ ಟೋಕನ್ ವಿತರಣೆ ಮಾಡಿದ್ದಾರೆ. ಇಲ್ಲಿಯವರೆಗೂ ಒಟ್ಟು 800ಕ್ಕೂ ಅಧಿಕ ಟೋಕನ್ ನೀಡಲಾಗಿದ್ದು, ತಾಂತ್ರಿಕ ತೊಂದರೆ ಯಾವಾಗ ಬಗೆಹರಿಯುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
ಕರ್ನಾಟಕದಲ್ಲಿ ಕೇಜ್ರಿವಾಲ್ ಅಲೆ! ಇಲ್ಲೂ ಸೃಷ್ಟಿಸಲಿದ್ದಾರಾ ಆಮ್ ಆದ್ಮಿ ಪಾರ್ಟಿಯ ನೆಲೆ ?
ತಾಂತ್ರಿಕ ಸಮಸ್ಯೆ- ಧಿಕ್ಕಾರ ಕೂಗಿದ ರೈತರು:
ನಗರದ ಎಪಿಎಂಸಿ ಆವರಣದಲ್ಲಿ ನಿನ್ನೆ ಸಾವಿರಾರು ಮಂದಿ ರೈತರು ನೋಂದಣಿಗಾಗಿ ದಾಖಲೆ ಸಮೇತವಾಗಿ ತಡರಾತ್ರಿಯಿಂದಲೇ ಬಂದು ಕುಳಿತಿದ್ದರು. ಬಂದವರು ಸರದಿ ಸಾಲಿಗಾಗಿ ಕಲ್ಲು, ಚಪ್ಪಲಿ, ಬ್ಯಾಗ್, ಜೊತೆಗೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಕಾದು ಕುಳಿತಿದ್ದರು. ಆದರೆ, ಬೆಳಿಗ್ಗೆ ಸರ್ವರ್ ಸಮಸ್ಯೆ ಎದುರಾದ ತಕ್ಷಣವೇ ರೈತರು ತಾಳ್ಮೆ ಕಳೆದುಕೊಂಡು ಪ್ರತಿಭಟನೆಗೆ ಮುಂದಾಗಿದ್ದು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಏಪ್ರಿಲ್ 25-30 ರವರೆಗೆ 'ಆಜಾದಿ ಕಾ ಅಮೃತ್ ಮಹೋತ್ಸವ'; 'ಕಿಸಾನ್ ಭಾಗಿದರಿ, ಪ್ರಾಥಮಿಕ ಹಮಾರಿ' ಅಭಿಯಾನ!