News

Milk Price Hike | ಗ್ರಾಹಕರ ಗಮನಕ್ಕೆ: ಹಾಲಿನ ದರದಲ್ಲಿ ಮತ್ತೆ ಹೆಚ್ಚಳ, ಇಂದು ಸಿಎಂ ಬೊಮ್ಮಾಯಿ ಸಭೆ

21 November, 2022 10:16 AM IST By: Kalmesh T
Milk Price Hike | Attention Consumers: Another increase in milk price

ದೆಹಲಿ: ಮದರ್ ಡೈರಿ ಮತ್ತೊಮ್ಮೆ ಜನಸಾಮಾನ್ಯರಿಗೆ ಕಹಿಸುದ್ದಿ ನೀಡಿದೆ. ಕಂಪನಿಯು ಹಾಲಿನ ದರದಲ್ಲಿ ಮತ್ತೊಮ್ಮೆ ಹೆಚ್ಚಳ ಮಾಡಿದ್ದು ಇಲ್ಲಿದೆ ವಿವರ.

ಇದನ್ನೂ ಓದಿರಿ: Paddy Price: ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ, ಜಿಲ್ಲಾಡಳಿತದಿಂದ ಸ್ಪಷ್ಟನೆ

ಸೋಮವಾರದಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ. ಈ ಅನುಕ್ರಮದಲ್ಲಿ, ಈಗ ಇತರ ಹಾಲು ಕಂಪನಿಗಳು ಹಾಲಿನ ದರವನ್ನು ಹೆಚ್ಚಿಸಬಹುದು.

ಮದರ್ ಡೇರಿ (Mother Dairy) ಹಾಲಿನ ದರವನ್ನು ಹೆಚ್ಚಿಸಿದೆ. ಮದರ್ ಡೈರಿ ಫುಲ್ ಕ್ರೀಮ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 1 ರೂ. ಹೆಚ್ಚಿಸಲು ನಿರ್ಧರಿಸಿದೆ.

ಇದರೊಂದಿಗೆ ಟೋಕನೈಸ್ಡ್ ಹಾಲಿಗೆ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಮದರ್ ಡೈರಿ ಈ ಬೆಲೆಗಳನ್ನು ಹೆಚ್ಚಿಸಿದೆ. ಸೋಮವಾರದಿಂದಲೇ ಹೊಸ ದರಗಳು ಅನ್ವಯವಾಗಲಿದೆ.

ರೈತರಿಗೆ ಸಿಹಿಸುದ್ದಿ: ಜಮೀನಿನಲ್ಲಿ ಶ್ರೀಗಂಧದ ಬೆಳೆಯಲು ಸಚಿವ ಸಂಪುಟ ಅನುಮೋದನೆ!

ಒಂದೇ ವರ್ಷ 4 ನಾಲ್ಕನೇ ಬಾರಿ ಬೆಲೆ ಏರಿಕೆ

ಮದರ್ ಡೈರಿಯು ಈ ವರ್ಷ ನಾಲ್ಕನೇ ಬಾರಿಗೆ ಹಾಲಿನ ದರ ಹೆಚ್ಚಿಸಿದೆ. ಮದರ್ ಡೈರಿ ದೆಹಲಿ NCRನಲ್ಲಿ ಅತಿ ದೊಡ್ಡ ಹಾಲು ಸರಬರಾಜುದಾರರಲ್ಲಿ ಒಂದಾಗಿದೆ.

ಇಲ್ಲಿ ದಿನಕ್ಕೆ 30 ಲಕ್ಷ ಲೀಟರ್ ಬಳಕೆಯಾಗಿದೆ. ಮದರ್ ಡೈರಿ ಫುಲ್ ಕ್ರೀಮ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 1 ರೂ. ಏರಿಕೆಯಾಗಿದ್ದು, 64 ರೂ.ಗೆ ತಲುಪಿದೆ.

ಈ ಕುರಿತು ಕಂಪನಿಯ ವಕ್ತಾರರು ಮಾಹಿತಿ ನೀಡಿದ್ದಾರೆ. ಆದರೆ, ಕಂಪನಿಯು 500 ಮಿ.ಲೀ. (ಅರ್ಧ ಕೆಜಿ) ಪ್ಯಾಕ್‌ಗಳಲ್ಲಿ ಪೂರ್ಣ ಕೆನೆಭರಿತ ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ.

ಅಡಿಕೆ ಬೆಳೆಗೆ ಕೀಟ ದಾಳಿ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ ಮಂಜೂರು-ಸಿಎಂ ಬೊಮ್ಮಾಯಿ

ಹಾಲು ದರ ಏರಿಕೆ: ಇಂದು ಸಿಎಂ ಸಭೆ

ಸಿಎಂ ಬಸವರಾಜ ಬೊಮ್ಮಾಯಿ ಕೆಎಂಎಫ್‌(KMF) ಮನವಿಯನ್ನು ಯಥಾವತ್ತಾಗಿ ಪುರಸ್ಕರಿಸಿದರೆ ಲೀಟರ್‌ಗೆ 3 ರು. ಹೆಚ್ಚಾಗಲಿದೆ. ಇಲ್ಲದಿದ್ದರೆ ಕನಿಷ್ಠ 2 ರು.ಗಳಷ್ಟಾದರೂ ಹೆಚ್ಚಳವಾಗಬಹುದು.

ಕೆಎಂಎಫ್‌ ನಂದಿನಿ ಹಾಲು ಹಾಗೂ ಮೊಸರು ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ಸಂಜೆ ಮಹತ್ವದ ಸಭೆ ನಡೆಯಲಿದ್ದು, ಹಾಲಿನ ದರವು ಪ್ರತಿ ಲೀಟರ್‌ಗೆ 2 ರಿಂದ 3 ರು. ಹೆಚ್ಚಳವಾಗುವ ಸಾಧ್ಯತೆಯಿದೆ.

ಕೆಎಂಎಫ್‌ ಸಂಸ್ಥೆಯು ನ.14ರಂದು ಹೊರಡಿಸಿ ಹಿಂಪಡೆದಿದ್ದ ಆದೇಶದಲ್ಲಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಿತ್ತು.

ರೈತಮಿತ್ರರ ಗಮನಕ್ಕೆ: ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಈಗಲೂ ಕನಿಷ್ಠ ಅಷ್ಟು ಪ್ರಮಾಣದ ದರ ಹೆಚ್ಚಳ ಮಾಡಬೇಕು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಪದಾಧಿಕಾರಿಗಳು, ವಿವಿಧ ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್‌ ಮನವಿಯನ್ನು ಯಥಾವತ್ತಾಗಿ ಪುರಸ್ಕರಿಸಿದರೆ ಲೀಟರ್‌ಗೆ 3 ರು. ಹೆಚ್ಚಾಗಲಿದೆ. ಇಲ್ಲದಿದ್ದರೆ ಕನಿಷ್ಠ 2 ರು.ಗಳಷ್ಟಾದರೂ ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ.