ಮದ್ಯ ಸೇವನೆಯ ಚಟಅಂಟಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಮದ್ಯ ಸೇವನೆ ಬಿಡು ಎಂದು ಮಾವ ಬೈದ ಕಾರಣಕ್ಕೆ ಗ್ರಾಮವನ್ನೇ ಬಿಟ್ಟು ಹೋಗಿದ್ದ. ಇದೀಗ ಆಧಾರ್ (Aadhar Card) ಕಾರ್ಡ್‌ಗಾಗಿ ವಾಪಸ್ ಆಗಿದ್ದಾನೆ.
ಕರಾವಳಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ!
ಆತ ಸ್ವಗ್ರಾಮಕ್ಕೆ ಮರಳಿದ್ದೂ ಬರೋಬ್ಬರಿ 24 ವರ್ಷದ ನಂತರ. ಮದ್ಯ ಸೇವನೆ ಮಾಡಬೇಡ ಎಂದು ಹೇಳಿದಕ್ಕೆ ಗ್ರಾಮವನ್ನೇ ಬಿಟ್ಟು ಹೋಗಿದ್ದ ವ್ಯಕ್ತಿ ಮರಳಿ ಬಂದಿದ್ದು, ಆಧಾರ್ ಕಾರ್ಡ್‌ನ ಅನಿವಾರ್ಯತೆಗಾಗಿ..
ಹೌದು ಇಂತಹದೊಂದು ಅಚ್ಚರಿಯ ಬೆಳವಣಿಗೆಗೆ ಕೊಪ್ಪಳ ಸಾಕ್ಷಿಯಾಗಿದೆ. ಗಂಗಾಧರಪ್ಪ ತಳವಾರ್ (51) 24 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಇದೀಗ ಮರಳಿ ಬಂದಿದ್ದಾರೆ.
ಗಂಗಾಧರಪ್ಪ ಅವರು 24 ವರ್ಷಗಳ ಹಿಂದೆ ಗ್ರಾಮ ತೊರೆದಿದ್ದರು. ಅದಾದ ನಂತರ ಸುದೀರ್ಘ ಅವಧಿಗೆ ಅಂದರೆ, ಬರೋಬ್ಬರಿ 24 ವರ್ಷಗಳ ಕಾಲ ಗ್ರಾಮದ ಕಡೆ ತಿರುಗಿಯೂ ನೋಡಿರಲಿಲ್ಲ.
ಕುಟುಂಬದವರು ನಿರಂತರವಗಿ ಗಂಗಾಧರಪ್ಪನ ಹುಡುಕಾಟದಲ್ಲಿದ್ದರು. ಆದರೆ, ಹಲವು ವರ್ಷಗಳ ಅವರನ್ನು ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಕೈಚೆಲ್ಲಿದ್ದರು.
ಚಂದ್ರಗ್ರಹಣ; ಬೆಂಗಳೂರಲ್ಲಿ ಮೊಟ್ಟೆ ಬಿರಿಯಾನಿ ತಿನ್ನುವ ಪ್ರತಿಭಟನೆ!
ಹಲವು ವರ್ಷಗಳ ಕಾಲ ಕಾದಿದ್ದ ಕುಟುಂಬ ಸದಸ್ಯರು ಆತ ಮೃತಪಟ್ಟಿರಬಹುದು ಎಂದು ಭಾವಿಸಿ ಗಂಗಾಧರ್ ಅವರ ಭಾವಚಿತ್ರಕ್ಕೆ ಹೂವು ಸಹ ಹಾಕಿದ್ದರು!
ಆದರೆ, ಈಚೆಗೆ ವ್ಯಕ್ತಿ ಮತ್ತೆ ಗ್ರಾಮಕ್ಕೆ ಹಿಂದಿರುಗಿರುವುದು ಅಚ್ಚರಿ ಮೂಡಿಸಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಣ್ಣ ಗ್ರಾಮದಲ್ಲಿ ನಿವಾಸಿಯಾಗಿದ್ದ ಗಂಗಾಧರ ತಳವಾರ್ ಕೋಪದಲ್ಲಿ ಗ್ರಾಮ ತೊರೆದಿದ್ದರು.
ಮನೆಬಿಟ್ಟು ಹೋದ ಬಳಿಕ ಜೀವನೋಪಾಯಕ್ಕಾಗಿ ಏನು ಮಾಡವುದು ಎಂದು ತಿಳಿದಿರಲಿಲ್ಲ.
ಮಂಗಳೂರಿಗೆ ಹೋಗಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು, ಇದಾದ ಕೆಲ ದಿನಗಳ ಬಳಿಕ ಮಂಗಳೂರಿನ ಜಮೀನಿನಲ್ಲಿ ಉದ್ಯೋಗ ಮಾಡುತ್ತಿದ್ದರು.
ಕೆಲವು ತಿಂಗಳ ಹಿಂದೆ ಜಮೀನಿನ ಮಾಲೀಕರಾದ ತಳವಾರ್‌ಗೆ ಇಂತಿಷ್ಟು ಹಣ ನೀಡಲು ನಿರ್ಧರಿಸಿದ್ದರು.
ನವೆಂಬರ್ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?
ಮನೆಗೆ ಹಿಂದಿರುಗಿದ್ದರ ಹಿನ್ನೆಲೆ ಗೊತ್ತೆ
ಗಂಗಾಧರಪ್ಪ ತಳವಾರ್ ಅವರು ಮನೆಗೆ ಹಿಂದಿರುಗಿದರ ಹಿಂದೆ ಕೇವಲ ಆಧಾರ್ ಕಾರ್ಡ್‌ನ ಕಾರಣವಷ್ಟೇ ಇರಲಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ,
ನನಗೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಯಾರೂ ಇಲ್ಲ ಎನ್ನುವ ಆತಂಕ ಕಾಡುತ್ತಿತ್ತು.
ಕಷ್ಟ ಕಾಲದಲ್ಲಿ ಮನೆಯವರೊಂದಿಗೆ ಕಾಲ ಕಳೆಯಬೇಕು ಎಂದು ಅನಿಸಿತು. ಆರೋಗ್ಯ ಸಮಸ್ಯೆ ಎದುರಾದಾಗ ಮನೆಯವರ ಅನುಪಸ್ಥಿತಿ ಕಾಡುತ್ತಿತ್ತು,
ನಾನು ದುಡಿದಿದ್ದ ಹಣದಲ್ಲಿ 2 ಲಕ್ಷ ರೂಪಾಯಿಗಳನ್ನು ನೀಡಲು ಜಮೀನಿನ ಮಾಲೀಕರು ಮುಂದಾದರು. ಆದರೆ, ನನ್ನ ಬಳಿ ಬ್ಯಾಂಕ್ ಖಾತೆ ಇರಲಿಲ್ಲ.
ಕೇಳುವವರೇ ಇಲ್ಲ ಕೋವ್ಯಾಕ್ಸಿನ್; 50 ಮಿಲಿಯನ್ ಕೋವ್ಯಾಕ್ಸಿನ್ ನಿಷ್ಕ್ರೀಯತೆಗೆ ತಯಾರಿ!
ಬ್ಯಾಂಕ್ ಖಾತೆ ತೆಗೆಯುವ ಸಂಬಂಧ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಬ್ಯಾಂಕ್ ಖಾತೆ ಪ್ರಾರಂಭಿಸುವುದಕ್ಕೆ ಆಧಾರ್ ಕಾರ್ಡ್ ಅವಶ್ಯ ಎಂದು ಹೇಳಿದ್ದರು.
ಆಧಾರ್ಗಾಗಿ ನಾನು ಮತ್ತೆ ನನ್ನ ಗ್ರಾಮಕ್ಕೆ ಬರುವಂತಾಗಿ ಮನೆಗೆ ಮರಳಿದ್ದು ಸಂತೋಷವಾಗುತ್ತಿದೆ ಗಂಗಾಧರ್ ಅವರು ಸಂತೋಷ ಹಂಚಿಕೊಂಡಿದ್ದಾರೆ.
ಮಕ್ಕಳು ದೊಡ್ಡವರಾಗಿದ್ದಾರೆ!
ಗಂಗಾಧರ್ ಅವರು ಮನೆ ಬಿಟ್ಟು ಹೋದಾಗ ಅವರ ಮಕ್ಕಳು ಎರಡು ವರ್ಷದವರಾಗಿದ್ದರು. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ.
ಈ ಹಿಂದೆ ಗಂಗಾಧರ್ ಅವರು ಕೊಪ್ಪಳದ ಚಿಕ್ಕಖೇಡ ಗ್ರಾಮಕ್ಕೆ ಒಮ್ಮೆ ಹೋಗಿದ್ದರು.
ಗಂಗಾಧರಪ್ಪ ತಳವಾರ್ ಆಗ ಮನೆಯವರು ಸಿಕ್ಕಿರಲಿಲ್ಲ. ಇದೀಗ ಎರಡನೇ ಬಾರಿ ಗ್ರಾಮಕ್ಕೆ ಆಗಮಿಸಿ ಮನೆ ಹುಡುಕಾಡಿದ್ದು, ಅವರ ಕುಟುಂಬದವರ ಬಗ್ಗೆ ಮಾಹಿತಿ ಸಿಕ್ಕಿದೆ.
ಗಂಗಾಧರನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಗೆ 2 ವರ್ಷಗಳು ಆಗಿದ್ದಾಗ ಮನೆ ಬಿಟ್ಟು ಹೋಗಿದ್ದಾನೆ.
ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಮಕ್ಕಳು ತಮಗೆ ಬುದ್ದಿ ತಿಳಿದಾಗಿನಿಂದ ತಂದೆಗಾಗಿ ಹುಡುಕಾಟವನ್ನು ನಡೆಸಿ, ತಂದೆ ಬದುಕಿಲ್ಲ ಎಂದೇ ಭಾವಿಸಿದ್ದರು.
ಆದರೆ, ಹೆಂಡತಿ ಮಾತ್ರ ಗಂಡನು ಇನ್ನೂ ಬದುಕಿದ್ದಾನೆ ಎನ್ನುವ ನಂಬಿಕೆಯಲ್ಲಿಯೇ ತಾಳಿಯನ್ನು ತೆಗೆಯದೇ ಕಾಯುತ್ತಿದ್ದಳು. 24 ವರ್ಷಗಳ ನಂತರ ಗಂಗಾಧರ ಮನೆಗೆ ಬಂದಿರುವುದು ಮಕ್ಕಳು, ಹೆಂಡತಿಯಲ್ಲಿ ಸಂತಸ ಮನೆ ಮಾಡಿದೆ.