News

ಚಂದ್ರಗ್ರಹಣ: ಬೆಂಗಳೂರಲ್ಲಿ ಮೊಟ್ಟೆ ಬಿರಿಯಾನಿ ತಿನ್ನುವ ಪ್ರತಿಭಟನೆ!

08 November, 2022 11:03 AM IST By: Hitesh
lunar eclipse; Egg biryani eating protest in Bangalore!

ಚಂದ್ರಗ್ರಹಣದಲ್ಲಿ ಹೀಗೆ ಮಾಡಿ, ಹೀಗೆ ಮಾಡಬೇಡಿ ಎನ್ನುವ ಹಲವು ರೀತಿಯ ಸಂದೇಶಗಳನ್ನು ನೋಡಿರುತ್ತೀರಿ. ಮೊಟ್ಟೆ ಬಿರಿಯಾನಿ ತಿನ್ನುವ ಪ್ರತಿಭಟನೆಯ ಬಗ್ಗೆ ಕೇಳಿದ್ದೀರ!

Breaking: ಬರೋಬ್ಬರಿ 10 ಲಕ್ಷ ಜನರ ಪಡಿತರ ಚೀಟಿ ರದ್ದು ಮಾಡಿದ ಸರ್ಕಾರ! ಯಾಕೆ ಗೊತ್ತೆ?

ಹೌದು “ಮೂಢನಂಬಿಕೆ ವಿರೋಧಿ ಒಕ್ಕೂಟ”ವು ಈ ಬಾರಿಯೂ ವಿನೂತ ಮಾದರಿಯಲ್ಲಿ ಜಾಗೃತಿ ಮತ್ತು ತನ್ನ ಸಾತ್ವಿಕ ಪ್ರತಿಭಟನೆಗೆ ಮುಂದಾಗಿದೆ.

ಮಂಗಳವಾರ ದೇಶದಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವೂ ಹೌದು. ರಾಜ್ಯದ ಹಲವು ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ.

ಚಂದ್ರಗ್ರಹಣ ಎಂದ ಕೂಡಲೇ ಯಾವ ರಾಶಿಗೆ ಯಾವ ಫಲ, ಈ ಸಂದರ್ಭದಲ್ಲಿ ಎನೆಲ್ಲ ಮಾಡಬಾರದು ಎನ್ನುವ ದೊಡ್ಡ ದೊಡ್ಡ ಪಟ್ಟಿಗಳೇ ಸಿದ್ಧವಾಗಿದೆ.  

ಮೂಢನಂಬಿಕೆ ವಿರೋಧಿ ಒಕ್ಕೂಟವು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಗ್ರಹಣ ಮೂಡುವ ಸಂದರ್ಭದಲ್ಲಿ ಆಹಾರ ಸೇವನೆ ಮಾಡುವುದರಿಂದ ಯಾವುದೇ ಅಪಾಯವಾಗುವುದಿಲ್ಲ

ಎಂದು ಮನದಟ್ಟು ಮಾಡುವ ಉದ್ದೇಶದಿಂದ ವಿನೂತನ ಅಭಿಯಾನವನ್ನು ನಡೆಸುತ್ತಿದೆ.

ನವೆಂಬರ್‌ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?

ಮೂಢನಂಬಿಕೆ ವಿರೋಧಿ ಒಕ್ಕೂಟವು ವಿವಿಧ ಗ್ರಹಣದ ಸಂದರ್ಭದಲ್ಲಿ ಈ ಮಾದರಿಯ ವಿನೂತನ ಜಾಗೃತಿಯನ್ನು ಹಮ್ಮಿಕೊಳ್ಳುವುದಿದೆ.

ಇದೀಗ ಮಂಗಳವಾರ ಅಂದರೆ, 08-11-2022 ರಂದು (ಮಂಗಳವಾರ) ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮೆನು ಬಿಡುಗಡೆ ಮಾಡಿದೆ.

ಚಂದ್ರಗ್ರಹಣ (ಸಾಂದರ್ಭಿಕ ಚಿತ್ರ)

“ಮಂಗಳವಾರ ಸಂಭವಿಸುವ ವೈಜ್ಞಾನಿಕ ಮನೋಧರ್ಮದೊಂದಿಗೆ ಚಂದ್ರ ಗ್ರಹಣ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಸದರಿ ಕಾರ್ಯಕ್ರಮಕ್ಕೆ ಪ್ರಗತಿಪರ ಸಂಘಟನೆಗಳು ಮುಖ್ಯವಾಗಿ ಯುವಕರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಣ್ಣುಗಳು, ಸಿಹಿ,ಕಾಯಿ ಒಬ್ಬಟ್ಟು, ಸಮೋಸ, ಮೊಟ್ಟೆ ಬಿರಿಯಾನಿ ಮತ್ತು ಬ್ಲಾಕ್ ಟೀ ಮತ್ತು ಇನ್ನಿತರೆ ತಿನಿಸುಗಳನ್ನು ಭಾಗವಹಿಸಿರುವ ಸದಸ್ಯರಿಗೆ ಚಂದ್ರ ಗ್ರಹಣದ ಸಂದರ್ಭದಲ್ಲಿ ವಿತರಿಸಲಾಗುತ್ತದೆ” ಎಂದು ಮೂಢನಂಬಿಕೆ ವಿರೋಧಿ ಒಕ್ಕೂಟ ಪ್ರಕಟಣೆ ತಿಳಿಸಿದೆ.  

ಕೇಳುವವರೇ ಇಲ್ಲ ಕೋವ್ಯಾಕ್ಸಿನ್‌; 50 ಮಿಲಿಯನ್‌ ಕೋವ್ಯಾಕ್ಸಿನ್‌ ನಿಷ್ಕ್ರೀಯತೆಗೆ ತಯಾರಿ!

ಚಂದ್ರಗ್ರಹಣ (ಸಾಂದರ್ಭಿಕ ಚಿತ್ರ)

ಎಲ್ಲಿ?
ಟೌನ್ ಹಾಲ್ ಹತ್ತಿರ

ಸಮಯ
ಮಂಗಳವಾರ ಸಂಜೆ 05 ರಿಂದ 06 ಗಂಟೆವರೆಗೆ