ಏನು ಕಾರಣ?
ಉಕ್ರೇನ್-ರಷ್ಯಾ ಯುದ್ಧದ ನಡುವೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಮಾರ್ಚ್ 1 ರಂದು ಎಲ್ಪಿಜಿ(LPG) ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಸಿಲಿಂಡರ್ ದರದಲ್ಲಿ 105 ರೂಪಾಯಿ ಭಾರಿ ಏರಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಈ ಹೆಚ್ಚಳ ಮಾಡಲಾಗಿದೆ. ಮತ್ತು ಮೊದಲೇ LPG Cylinderಗಳ ಬೆಲೆ ಗಗನ ಚುಂಬಿ ಆಗಿದ್ದವು ಮತ್ತೆ ಈ ಉಕ್ರೇನ್-ರಷ್ಯಾ ಯುದ್ಧದಿಂದಾಗಿ 105 ರೂ. ಹೆಚ್ಚಾಗಿದೆ.
ಮತ್ತೆ ಯಾವ ತೂಕದ ಸಿಲಿಂಡರ್ ಬೆಲೆ ಏರಿಕೆ ಆಗಿದೆ?
ದೆಹಲಿಯಲ್ಲಿ ಮಂಗಳವಾರದಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂ. ಇದೇ ವೇಳೆ 5 ಕೆಜಿ ಸಿಲಿಂಡರ್ ಬೆಲೆಯೂ 27 ರೂಪಾಯಿ ಏರಿಕೆಯಾಗಿದೆ. ಈಗ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಈ ಒಂದು ಬೆಲೆ ಏರಿಕೆಯಾ ಪರಿಣಾಮ ದೇಶದ ಎಲ್ಲ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತೆ ಎಂಬುದರಲ್ಲಿ ತಪ್ಪೇನಿಲ್ಲ. ಕರ್ನಾಟಕದಲ್ಲೂ LPG GAS ಬೆಲೆ ಏರಿಕೆಯಾ ಹೊಸ ಬೆಲೆ ಪಟ್ಟಿ ಕಂಡು ಬರುತ್ತೆ.
ಇದನ್ನು ಓದಿರಿ:
Medicinal Plant Farming! ರೈತರು ಲಕ್ಷಾಂತರ ರೂಪಾಯಿ ಗಳಿಸಬಹುದು! ಹೇಗೆ ಅದು ಕೃಷಿಯಿಂದ?
ಯಾವ LPG ಸಿಲಿಂಡರ್ ದರಗಳು ಏರಿಕೆಯಾಗಿಲ್ಲ?
ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಅಕ್ಟೋಬರ್ 2021 ಮತ್ತು ಫೆಬ್ರವರಿ 1, 2022 ರ ನಡುವೆ ವಾಣಿಜ್ಯ ಸಿಲಿಂಡರ್ ಬೆಲೆ 170 ರೂಪಾಯಿಗಳಷ್ಟು ಹೆಚ್ಚಾಗಿದೆ. 6 ಅಕ್ಟೋಬರ್ 2021 ರ ನಂತರ, ಅಂದರೆ, ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ.
ಇದನ್ನು ಓದಿರಿ:
LPG subsidy BIG NEWS MARCH 2022! ಜನರಿಗೆ LPG subsidy 237.78ರೂಪಾಯಿ ಮತ್ತೆ ನೀಡಲಾಗುತ್ತಿದೆ
ವಾಣಿಜ್ಯ ಸಿಲಿಂಡರ್ ಬೆಲೆ 105 ರೂ
ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ.19 ಕೆಜಿಯ ಎಲ್ ಪಿಜಿ ಸಿಲಿಂಡರ್ ದೆಹಲಿಯಲ್ಲಿ ಮಾರ್ಚ್ 1 ರಿಂದ ಅಂದರೆ ಇಂದಿನಿಂದ ರೂ.2012 ರ ಬದಲಾಗಿ ರೂ.1907 ಕ್ಕೆ ಲಭ್ಯವಾಗಲಿದೆ. ಈಗ ಕೋಲ್ಕತ್ತಾದಲ್ಲಿ 1987 ರೂ.ಗೆ ಬದಲಾಗಿ 2095 ರೂ.ಗೆ ಲಭ್ಯವಾಗಲಿದೆ. ಮುಂಬೈನಲ್ಲಿ ಅದರ ಬೆಲೆ ಈಗ 1857 ರಿಂದ 1963 ರೂಪಾಯಿಗಳಿಗೆ ಏರಿದೆ.
ಒಟ್ಟಾರೆ ಹೋಟಲುಗಳು, Road ಬದಿಯಲ್ಲಿ ಆಹಾರದ ಅಂಗಡಿ ಇಟ್ಟು ಕೆಲಸ ಮಾಡುವಂತಹ ಎಲ್ಲ ಕೆಲಸಗಾರರ ಬದುಕು ಇನ್ನು ಮುಂದೆ ದುಬಾರಿಯಾಗಲಿದೆ. ಹೊರಗಡೆ ಊಟ ಮಾಡುವಂತಹ ಎಲ್ಲ ಜನ ಇನ್ನು ಮುಂದೆ ನೀವು ನಿಮ್ಮ ಜೇಬಿನಲ್ಲಿ ಒಳ್ಳೆಯ ಮೊತ್ತದ ಹಣದ ಚೀಲವನ್ನು ಇಟ್ಟುಕೊಂಡೆ ಹೊರಗಡೆ ಊಟಕ್ಕೆ ಹೋಗಬೇಕು.
ಇನ್ನಷ್ಟು ಓದಿರಿ:
Banks Will Close! ಹೌದು Marchನಲ್ಲಿ 13 ದಿನಗಳವರೆಗೆ Banks ಮುಚ್ಚಲಿವೆ!