ಈಗಿನ ಒಂದು ಭಾರತ ತುಂಬಾ ಬಲಿಷ್ಠವಾಗಿ ಬೆಳೆಯುತ್ತಿದೆ. ಆದರೆ ಏನು ಮಾಡೋದು ಸರ್ಕಾರಗಳು ಈ ಎಲ್ಲ ಪ್ರತಿಭೆಗಳನ್ನು ತಮ್ಮ ಒಂದು ಹೊಲಸು ರಾಜಕೀಯದ ಕಾರಣ ಸರಿಯಾಗಿ ಪ್ರೋತ್ಸಾಹಿಸುತ್ತಿಲ್ಲ. ಆದರೂ ಪ್ರತಿಭೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ ವಿದೇಶಗಳಲ್ಲಿ ಯಾರಾದರೂ ಒಂದು ಹೊಸ ಆವಿಷ್ಕಾರವನ್ನು ಮಾಡಿದರೆ ಅವರಿಗೆ ಸರ್ಕಾರದ ವತಿಯಿಂದ ವಿಶೇಷ ಸಹಕಾರ ಸಿಗುತ್ತೆ.ಇದಕ್ಕೆ ಒಂದು ಜೀವಂತ ಉದಾಹರಣೆ ಎಲೊನ್ ಮಸ್ಕ್ ಮುಂತಾದ ವ್ಯಕ್ತಿಗಳು. ಇವರಿಗೆ ಅವರ ಸರ್ಕಾರದಿಂದ ಸಹಾಯ ಸಿಕ್ಕಿತ್ತು. ಇರ್ಲಿ ಬಿಡಿ ಈಗ ಭಾರತದ ಒಬ್ಬ ಹೊಸ ವಿಜ್ಞಾನಿ ಒಂದು ವಿಶೇಷ ಕಾರ್ ನ್ನು ತಯಾರಿಸಿದ್ದಾನೆ ಅದೂ '5 ಸಿಟರ್'!
ಇದರ ವಿಶೇಷತೆ, ಏನಪ್ಪಾ ಅಂದರೆ ಇದು ಬ್ಯಾಟರಿ ಮೇಲೆ ಓಡುತ್ತೆ. ಅಂದರೆ ವಿದ್ಯುತ್ ಮೇಲೆ ಓಡುವ ಗಾಡಿ. ಈ ಹೊಸ ವಿಜ್ಞಾನಿ ಯಾರಪ್ಪ ಅಂದರೆ, ಮಧ್ಯ ಪ್ರದೇಶದ ಹಿಮಾಂಶು ಭಾಯ್ ಪಟೇಲ್. ಇವರು ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ, ಇವರು ಈಗಿನ ಬದಲಾಗುವ ಹವಾಮಾನದ ಬಗ್ಗೆ ಚಿಂತಿತರಾಗಿ ಈ ಒಂದು ಕಾರನ್ನು ಡಿಸೈನ್ ಮಾಡಿದರು. ಇವತ್ತು ಎಲ್ಲಡೆ ಪ್ರದೂಷಣೆ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮುಂತಾದ ಸಮಸ್ಯೆ ಗಳಿಂದ ಬೇಸತ್ತು ಈ ಒಂದು ಕಾರನ್ನು ತಯಾರಿಸಿದ್ದಾರೆ.
ಈ ಕಾರನ್ನು ತಯಾರಿಸಲು ಇವರಿಗೆ ಕೇವಲ 2 ಲಕ್ಷ ರೂ. ಮಾತ್ರ ಖರ್ಚಾಗಿದೆಯಂತೆ. ಮತ್ತು ಈ ಒಂದು ಕಾರನ್ನು ತುಂಬಾ ಚನ್ನಾಗಿ ಈ ವಿದ್ಯಾರ್ಥಿ ತಯಾರಿಸಿದ್ದಾರೆ. ಏಕೆಂದರೆ ಇದರ 'ಲುಕ್' ಅಂತೂ ವಿಂಟೇಜ್ ಲುಕ್, ಇದರಲ್ಲಿ 5 ಜನ ಕುಳಿತುಕೊಂಡು ಹೋಗಬಹುದು. ಮತ್ತು ಇದರ ವೇಗ 150 km /hr ಇದೆ. ಈ ಕಾರು ಕೇವಲ 30 ರೂ ಗಳಲ್ಲಿ 185 ಕಿ.ಮಿ ಗಳಷ್ಟು ಚಲಿಸುತ್ತೆ. ಈ ಕಾರನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಕೇವಲ 4 ಗಂಟೆ ಸಾಕು.
ಇಷ್ಟೊಂದು ಒಳ್ಳೆಯ ಕಾರು ಯಾವಾಗ ಮಾರುಕಟ್ಟೆಗೆ ಬರಬಹುದು ಎಂಬುವ ಕುತೂಹಲ ಎಲ್ಲ ಭಾರತೀಯರಿಗೆ ಇದೆ. ನೋಡೊನ ಈ ಒಂದು ಕಾರು ಯಾವಾಗ ಮಾರುಕಟ್ಟೆಗೆ ಬರುತ್ತೆಯಂದು.
ಮಧ್ಯಪ್ರದೇಶದ ಹಿಮಾಂಶು ಭಾಯ್ ಪಟೇಲ್ ಗೆ ಒಂದು ಸೆಲ್ಯೂಟ್. ಇನ್ನೂ ತನ್ನ ವಿದ್ಯಾಬ್ಯಾಸವನ್ನು ಪೂರ್ಣಗೊಳಿಸದೆ ಇಂತಹ ವಿಶೇಷ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ . ಮತ್ತು ವಿದ್ಯಾಭ್ಯಾಸ ಮುಗಿದ ನಂತರ ಏನು ಮಾಡಬಹುದು! ಹಿಮಾಂಶು ಯವರಿಗೆ ನಮ್ಮ ವತಿಯಿಂದ ಶುಭಾಶಯಗಳು ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಶುಭವಾಗಲೆಂದು ಕೋರಿಕೊಳುತ್ತೇವೆ.
ಇನ್ನಷ್ಟು ಓದಿರಿ:
ಕರ್ನಾಟಕ ಸರ್ಕಾರದಿಂದ ಇನ್ನು ಮುಂದೆ ರೈತರಿಗೆ ನೆರೆ ಪರಿಹಾರ ಧನ ರಿಲೀಸ್ ಆಗಲಿದೆ!
ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?
ಹೊಲದಲ್ಲಿ ಮೀನುಗರಿಕೆ! ಅದು ಹೇಗೆ ?